Hyderabad Ambulance Driver video: ಜ್ಯೂಸ್ ಕುಡಿಯಲು ಎಮರ್ಜೆನ್ಸಿ ಸೈರನ್ ಹಾಕಿ ಸಾಗಿದ ಆಂಬ್ಯುಲೆನ್ಸ್ ಡ್ರೈವರ್, ಪೊಲೀಸರಿಂದ ಲಾಕ್ !

Latest news crime Hyderabad Ambulance Driver video news ambulance driver goes to drink juice with an emergency siren

Hyderabad Ambulance Driver video: ಖಾಸಗಿ ಆಸ್ಪತ್ರೆಯ ಆಂಬುಲೆನ್ಸ್‌ (ambulance) ಚಾಲಕನೊಬ್ಬ ಟ್ರಾಫಿಕ್ ಕ್ಲಿಯರೆನ್ಸ್ (Traffic clearance) ಪಡೆಯಲು ಅಂಬುಲೆನ್ಸ್‌ ಸೈರನ್ ದುರ್ಬಳಕೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ(Hyderabad) ನಡೆದಿದ್ದು, ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿದೆ.

ಹೌದು, ಆಂಬ್ಯುಲೆನ್ಸ್ ಚಾಲಕನೊಬ್ಬ ಮಿರ್ಚಿ, ಬಜ್ಜಿ ಸವಿಯಲು ತನ್ನ ಕರ್ತವ್ಯವನ್ನು ದುರುಪಯೋಗ ಮಾಡಿಕೊಂಡಿದ್ದಾನೆ. ಈ ಘಟನೆ ಹೈದರಾಬಾದ್​ನಲ್ಲಿ ನಡೆದಿದ್ದು, ಡಿಜಿಪಿ ಗಂಭೀರ ಎಚ್ಚರಿಕೆ ನೀಡಿ ಟ್ವೀಟ್ ಮಾಡಿದ್ದಾರೆ.

ಸೈರನ್ ಹಾಕಿಕೊಂಡು ಬರುತ್ತಿದ್ದ ಆಂಬ್ಯುಲೆನ್ಸ್ ಅನ್ನು ನೋಡಿದ ಪೊಲೀಸರು ಎಮರ್ಜೆನ್ಸಿ ಎಂದು ಟ್ರಾಫಿಕ್ ಕ್ಲಿಯರ್ ಮಾಡಿದರು. ಟ್ರಾಫಿಕ್‌ ಕ್ಲಿಯರ್‌ ಮಾಡಿದ ಬಳಿಕ ಆಂಬ್ಯುಲೆನ್ಸ್ ಚಾಲಕ ಆಸ್ಪತ್ರೆಗೆ ಹೋಗದೆ, ಹೋಟೆಲ್‌ವೊಂದರ ಬಳಿ ನಿಲ್ಲಿಸಿದ್ದಾನೆ. ನಂತರ ಒಂದಷ್ಟು ಸ್ನ್ಯಾಕ್ಸ್‌ (snacks) ತೆಗೆದುಕೊಂಡಿದ್ದಾನೆ. ಈ ವೇಳೆ ಆಂಬ್ಯುಲೆನ್ಸ್ ಕಡೆ ಹೋದ ಪೊಲೀಸರು(police) ಚಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಿದ್ದಿದೆ.

ಯಾವುದೇ ತುರ್ತು (emergency) ಪರಿಸ್ಥಿತಿ ಇರಲಿಲ್ಲ. ಅಂಬುಲೆನ್ಸ್‌ನಲ್ಲಿ ಯಾವುದೇ ರೋಗಿ ಇರಲಿಲ್ಲ. ವಾಹನದಲ್ಲಿ ಇಬ್ಬರು ನರ್ಸ್‌ಗಳು ಮಾತ್ರ ಇದ್ದರು ಎಂದು ಪೋಲಿಸರು ತಿಳಿಸಿದ್ದಾರೆ. ಅಂಗಡಿಯಲ್ಲಿ ಚಾಲಕ ಸ್ನ್ಯಾಕ್ಸ್‌, ಜ್ಯೂಸ್‌ ಬಾಟೆಲ್‌ ತೆಗೆದುಕೊಂಡಿದ್ದಾನೆ. ಕಾಲಹರಣ ಮಾಡಲು ಸೈರಲ್ ದುರುಪಯೋಗ ಪಡಿಸಿಕೊಳ್ಳುತ್ತೀರಾ?, ರೋಗಿ ಎಲ್ಲಿ? ತಿಂಡಿ ತಿನ್ನಲು ಆಯಂಬುಲೆನ್ಸ್ ಸೈರನ್ ದುರ್ಬಳಕೆ ಮಾಡಿಕೊಂಡಿದ್ದೀರಾ ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಿಸಿದಾಗ, ನರ್ಸ್‌ವೊಬ್ಬರಿಗೆ (nurse) ಆರೋಗ್ಯ ಸಮಸ್ಯೆ ಇದೆ ಎಂದು ಹೇಳುತ್ತಿರುವ (Hyderabad Ambulance Driver video) ದೃಶ್ಯದ ತುಣುಕು ಎಲ್ಲೆಡೆ ವೈರಲ್‌ ಆಗಿದೆ.

ಈ ಘಟನೆಯು ಜನನಿಬಿಡ ಬಶೀ‌ಬಾಗ್(Bashibag) ಜಂಕ್ಷನ್ ಮೂಲಕ ಹಾದು ಹೋಗುತ್ತಿದ್ದಾಗ ಸಂಭವಿಸಿದೆ. ಚಾಲಕ ಸೈರನ್ ಹಾಕಿದ್ದರಿಂದ ಟ್ರಾಫಿಕ್ ಪೊಲೀಸರು ಬೇರೆ ವಾಹನಗಳನ್ನು ತಡೆದು ಆಂಬ್ಯುಲೆನ್ಸ್ ಗೆ (Ambulance) ದಾರಿಕೊಟ್ಟಿದ್ದರು. ಟ್ರಾಫಿಕ್ ಕ್ಲಿಯರೆನ್ಸ್ ಪಡೆಯಲು ಮಾತ್ರ ಚಾಲಕ ಎಮರ್ಜೆನ್ಸಿ ಸೈರನ್ ಹಾಕಿದ್ದ ಎಂದು ಸೂಚಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆಯನ್ನು ಮರೆಮಾಚಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ರೀತಿಯ ಗಂಭೀರ ಆರೋಪಗಳು ಕೇಳಿಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಎಂದು ಡಿಜಿಪಿ ಅಂಜನಿ ಕುಮಾರ್(DGP Anjani Kumar) ಕ್ರಮದ ಎಚ್ಚರಿಕೆ ನೀಡಿದ್ದಾರೆ.

 

ಇದನ್ನು ಓದಿ: Potency Test: ಪುರುಷತ್ವ ಪರೀಕ್ಷೆ ಮತ್ತು ಕನ್ಯತ್ವ ಪರೀಕ್ಷೆ ಹೀಗೂ ಮಾಡ್ಬೋದು ಅಂದ ಕೋರ್ಟ್, ಏನೀ ಹೊಸ ವಿಧಾನ ?! 

Leave A Reply

Your email address will not be published.