Ravindar Chandrasekaran: ಮಹಾಲಕ್ಷ್ಮೀ ಪತಿ, ನಿರ್ಮಾಪಕ ರವೀಂದರ್ ವಿರುದ್ಧ ವಂಚನೆ ಆರೋಪ ! ಅಷ್ಟಕ್ಕೂ ದೂರು ಕೊಟ್ಟವರಾರು ?

Latest news Complaint of fraud against Mahalakshmi's husband, producer Ravinder

Ravindar Chandrasekaran: ತಮಿಳು ಕಿರುತೆರೆಯ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರ್ (Ravindar chandrasekaran And Mahalakshmi) ಜೋಡಿ
ಮದುವೆ ಆದಾಗಿನಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಒಂದಲ್ಲ ಒಂದು ವಿಚಾರಕ್ಕೆ ನೆಟ್ಟಿಗರ ಪಾಲಿನ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಈ ಮಧ್ಯೆ ಇದೀಗ ಮಹಾಲಕ್ಷ್ಮೀ ಪತಿ, ನಿರ್ಮಾಪಕ ರವೀಂದರ್ (Ravindar Chandrasekaran) ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.

ಹೌದು, ನಿರ್ಮಾಪಕ ರವೀಂದರ್​ ಚಂದ್ರಶೇಖರನ್​ ವಿರುದ್ಧ ವಂಚನೆ ಆರೋಪ ದಾಖಲಾಗಿದ್ದು, ಚೆನ್ನೈ ಕೇಂದ್ರ ಅಪರಾಧ ವಿಭಾಗ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಅಷ್ಟಕ್ಕೂ ದೂರು ಕೊಟ್ಟವರಾರು ?! ಘಟನೆಯ ಹಿನ್ನೆಲೆ ಏನು ?!

ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ವಿಜಯ್​ ಎಂಬುವರು
ನಿರ್ಮಾಪಕ ರವೀಂದರ್ ವಿರುದ್ಧ ದೂರು ನೀಡಿದ್ದು, ಸುಮಾರು 15 ಲಕ್ಷ ರೂಪಾಯಿ ಹಣವನ್ನು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಸಿನಿಮಾ ಪ್ರಾಜೆಕ್ಟ್​ ಒಂದಕ್ಕೆ ವಿಜಯ್​ ಭಾರೀ ಮೊತ್ತದ ಹಣವನ್ನು ರವೀಂದರ್​ ಜತೆ ಸೇರಿ ಹೂಡಿಕೆ ಮಾಡಿದ್ದಾರೆ. ಆದರೆ, ರವಿಂದರ್​ ಅವರ ಸಿನಿಮಾದ ಬೆಳವಣಿಗೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ, ತಮ್ಮ ಬದ್ಧತೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಇದರಿಂದ ಮೋಸ ಹೋಗಿದ್ದೇನೆ ಎಂದು ಭಾವಿಸಿ ರವೀಂದರ್​ ವಿರುದ್ಧ ವಿಜಯ್ ದೂರು ನೀಡಿದ್ದಾರೆ ಎನ್ನಲಾಗಿದೆ.

ಆನ್​ಲೈನ್​ ಮೂಲಕ ದೂರು ದಾಖಲಾಗಿದ್ದು, ತಕ್ಷಣ ಪ್ರಕರಣ ದಾಖಲಿಸಿಕೊಂಡಿರುವ ಚೆನ್ನೈ ಕೇಂದ್ರ ಅಪರಾಧ ವಿಭಾಗ ​ ವಿಚಾರಣೆಗೆ ಬರುವಂತೆ ರವಿಂದರ್​ಗೆ ನೋಟಿಸ್​ ನೀಡಿದ್ದು, ರವಿಂದರ್ ವಿಚಾರಣೆಯನ್ನೂ ಎದುರಿಸಿದ್ದಾರೆ. ಎರಡೂ ಕಡೆ ಮಾಡಿರುವ ಆರೋಪಗಳ ಸಿಂಧುತ್ವವನ್ನು ನಿರ್ಧರಿಸಲು ಇಬ್ಬರೂ ಪ್ರಸ್ತುತಪಡಿಸಿದ ಸಾಕ್ಷ್ಯಗಳು, ಹೇಳಿಕೆಗಳು ಮತ್ತು ದಾಖಲೆಗಳನ್ನು ಪೊಲೀಸರು ಸಂಪೂರ್ಣವಾಗಿ ಪರಿಶೀಲಿಸಲಿದ್ದಾರೆ. ಇನ್ನಷ್ಟು ಹೆಚ್ಚಿನ ಸಾಕ್ಷಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ.

 

ಇದನ್ನು ಓದಿ: Struggle of alcohol lovers: ಬೆಳಗ್ಗೆ 90 ಎಂಎಲ್, ಸಂಜೆ 90 ಎಂಎಲ್ ‘ಮದ್ಯ’ ಉಚಿತ !! ಕರಾವಳಿಯಲ್ಲಿ ಮದ್ಯಪ್ರಿಯರಿಂದ ಹೀಗೊಂದು ಒತ್ತಾಯದ ಹೋರಾಟ !! 

Leave A Reply

Your email address will not be published.