Matrimonial Site: ಮ್ಯಾಟ್ರಿಮೋನಿಯಲ್ಲಿ ಪರಿಚಯಳಾದ ಸುರಸುಂದರಿ ; ಹುಡುಗನಿಂದ 92 ಲಕ್ಷ ಎತ್ಕೊಂಡು ಪರಾರಿ !

latest news Matrimonial Site 92 lakh escaped from the girl boy who met in matrimony

Matrimonial Site: ಪುಣೆ (Pune) ಮೂಲದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ (Matrimonial Site) ಮೂಲಕ ಮಹಿಳೆಯೋರ್ವಳು ಪರಿಚಯವಾಗಿದ್ದು, ಮಹಿಳೆ ಮದುವೆಯ ನೆಪವೊಡ್ಡಿ ಈತನಿಂದ 92 ಲಕ್ಷ ರೂ. ಬಾಚಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

 

ಐಟಿ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ನಲ್ಲಿ ವಧುವಿಗಾಗಿ ಹುಡುಕಾಡಿದ್ದು, ನಂತರ ಸೈಟ್ ನಲ್ಲಿ ಮ‌ಹಿಳೆಯೋರ್ವಳ ಪರಿಚಯವಾಗಿದೆ. ಪರಿಚಯ, ಸ್ನೇಹ, ಪ್ರೀತಿಗೆ ತಿರುಗಿದ ನಂತರ ಮಹಿಳೆ ಮದುವೆಯಾಗುವ ಭರವಸೆ ನೀಡಿದ್ದಾಳೆ. ಜೊತೆಗೆ ಮುಂದಿನ ಭವಿಷ್ಯಕ್ಕಾಗಿ “blescoin” ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಲು ಟೆಕ್ಕಿಯ ಮನವೊಲಿಸಿದ್ದಾಳೆ.

ಮಹಿಳೆಯನ್ನು ನಂಬಿದ ಟೆಕ್ಕಿ ಹೂಡಿಕೆಗಾಗಿ ವಿವಿಧ ಬ್ಯಾಂಕ್‌ಗಳಿಂದ ಮತ್ತು ಲೋನ್‌ ಆ್ಯಪ್‌ಗಳಿಂದ ಒಟ್ಟು 71 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದಾರೆ. ಟೆಕ್ಕಿ ಮಹಿಳೆ ಹೇಳಿದಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 86 ಲಕ್ಷ ರೂಪಾಯಿಗಳನ್ನು (ಸಾಲದಿಂದ ಹಿಂತೆಗೆದುಕೊಂಡ ಹಣ ಮತ್ತು ಅವರ ಸ್ವಂತ ಉಳಿತಾಯ ಸೇರಿದಂತೆ) ಹಾಕಿದ್ದಾನೆ.

ಅವನು ಯಾವುದೇ ರಿಟರ್ನ್‌ ಬಂದಿರಲಿಲ್ಲ ಆಗ ಹೆಚ್ಚುವರಿಯಾಗಿ 10 ಲಕ್ಷ ರೂ. ಹೂಡಿಕೆ ಮಾಡುವಂತೆಯೂ ಮಹಿಳೆ ಸಲಹೆ ನೀಡಿದ್ದಾಳೆ. ಆಕೆಯನ್ನು ನಂಬಿ ತನ್ನ ಹೂಡಿಕೆಯ ಮೇಲಿನ ಆದಾಯವನ್ನು ಪಡೆಯುವ ಸಲುವಾಗಿ, ಟೆಕ್ಕಿ ಅಂದಾಜು 3.95 ಲಕ್ಷ ರೂ.ಗಳನ್ನು ನಂತರ 1.8 ಲಕ್ಷ ರೂ. ಹೂಡಿಕೆ ಮಾಡಿದ್ದಾನೆ. ನಂತರದಲ್ಲಿ ಟೆಕ್ಕಿಗೆ ಮಹಿಳೆಯಿಂದ ಮೋಸ ಹೋದೆ ಎಂಬುದು ಅರಿವಿಗೆ ಬಂದಿದೆ. ಈ ಬಗ್ಗೆ ಆತ ಪೊಲೀಸರಿಗೆ ದೂರು ನೀಡಿದ್ದು, ಮಹಿಳೆ ಮತ್ತು ಆಕೆಯ ಸಹಚರರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ: Congress Government: ಅನ್ನಭಾಗ್ಯ ಜಾರಿ ದಿನವೇ BPL ಕಾರ್ಡ್ ದಾರರಿಗೆ ಬಿಗ್ ಶಾಕ್ !! ಇಂತವರಿಗೆ ಅಕ್ಕಿ ಹಣದ ವರ್ಗಾವಣೆ ಇಲ್ಲ ಎಂದ ಸರ್ಕಾರ !! 

Leave A Reply

Your email address will not be published.