Interesting Facts: ವಾಷ್ ಬೇಸಿನ್ ಅಥವಾ ಟಾಯ್ಲೆಟ್ಟಿನ ನೀರನ್ನು ಡ್ರೈನ್ ಮಾಡಿದಾಗ ನೀರು ಯಾವ ದಿಕ್ಕಿಗೆ ತಿರುಗುತ್ತೆ ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ!

Northern and southern hemisphere if the wash basin or toilet water is drained which direction will it turn

Northern and southern hemisphere :ಪ್ರಕೃತಿ ಅನ್ನೋದು ವಿಚಿತ್ರಗಳ ಆಗರ ಅನ್ನೋದು ನಮಗೆ ಗೊತ್ತೇ ಇದೆ. ಇಂಥ ಪ್ರಕೃತಿಯ ಒಳಗೆ ಬಗೆದಷ್ಟು ಹೊಸ ಹೊಸ ಜ್ಞಾನಗಳು, ವಿಜ್ಞಾನಗಳು, ಅನೂಹ್ಯ ಘಟನೆಗಳು ಮತ್ತು ಹೊಸ ಹೊಸ ವಿಷಯಗಳು ಹೊರಕ್ಕೆ ಬರುತ್ತಲೇ ಇವೆ. ಇದೀಗ ಇಂತದೇ ವೈಜ್ಞಾನಿಕ ವಿಷಯವೊಂದು ವೈರಲ್ ಆಗುತ್ತಿದ್ದು ಎಲ್ಲರೂ ಅಚ್ಚರಿ ಪಡುವಂತಾಗಿದೆ.

ಭೂಮಿಯಲ್ಲಿ ಉತ್ತರ ಮತ್ತು ದಕ್ಷಿಣ ಎಂಬ ಎರಡು ದ್ರುವಗಳಿವೆ (Northern and southern hemisphere) ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಉತ್ತರಾರ್ಧದ ಮತ್ತು ದಕ್ಷಿಣಾರ್ಧದ ಮಧ್ಯದಲ್ಲಿ ಹಾದು ಹೋಗುವ ರೇಖೆಯನ್ನು ನಾವು ಸಮಭಾಜಕ ರೇಖೆ, ಭೂಮಧ್ಯ ರೇಖೆ ಅಥವಾ ಇಕ್ವೇಟರ್ ಅಂತ ಕರೆಯುತ್ತೇವೆ. ಅಂದರೆ ಭೂಮಿಯನ್ನು ಮೇಲ್ಭಾಗ ಮತ್ತು ಕೆಳಭಾಗ ಎಂದು ಎರಡು ಭಾಗಗಳಾಗಿ ವಿಂಗಡಿಸುವ ಮಧ್ಯ ಭಾಗವೇ ಇಕ್ವೇಟರ್. ಇಕ್ವೇಟರ್, ಏನಿದರ ಸ್ಪೆಶಾಲಿಟಿ ಎಂದು ನೀವು ಕೇಳ ಬಯಸಿದರೆ ಇವತ್ತು ಅದಕ್ಕೆ ಸಂಬಂಧಿಸಿದ ಒಂದು ವಿಡಿಯೋ ಸಹಿತ ಲೇಖನವನ್ನು ನಾವು ಇವತ್ತು ನಿಮಗೆ ತೋರಿಸಲಿದ್ದೇವೆ.

ಸದರ್ನ್ ಹೆಬಿಸ್ಪಿಯರ್ ಅಂದರೆ ಭೂಮಿಯ ದಕ್ಷಿಣ ಭಾಗದಲ್ಲಿ ಯಾವುದೇ ವಾಷ್ ಟ್ಯಾಬ್ ಅಥವಾ ಡ್ರೈನ್ ನಿಂದ ನೀರನ್ನು ಕೆಳಕ್ಕೆ ಬಿಟ್ಟರೆ ಆಗ ನೀರು ಆಂಟಿ ಕ್ಲಾಕ್ ವೈಸ್ ತಿರುಗುತ್ತದೆ. ಅದೇ ಉತ್ತರ ಹೆಮಿಸ್ಪಿಯರ್ ನಲ್ಲಿ ನೀರು ಅಂದರೆ ಗಡಿಯಾರದ ಮುಳ್ಳು ತಿರುಗುವ ರೀತಿಯಲ್ಲಿ, ಎಡದಿಂದ ಬಲಕ್ಕೆ ತಿರುಗುತ್ತದೆ. ಹಾಗಾದರೆ ಇಕ್ವೇಟರ್ ಅಂದರೆ ಭೂಮಧ್ಯ ರೇಖೆಯಲ್ಲಿ ನೀರು ಯಾವ ಕಡೆ ತಿರುಗಬಹುದು ಊಹಿಸಿ? ನಿಮ್ಮ ಊಹೆ ನಿಜ. ಭೂಮಧ್ಯರೇಖೆಯಲ್ಲಿ ನೀರು ಯಾವುದೇ ಕಡೆಯಲ್ಲಿ ತಿರಿರುಗುವುದಿಲ್ಲ. ಅಲ್ಲಿ ಹಾದು ಹೋಗುವ ಪ್ರದೇಶದಲ್ಲಿ ನೀರು ಯಾವುದೇ ದಿಕ್ಕಿನಲ್ಲಿ ತಿರುಗದೆ, ಸ್ತಬ್ದವಾಗಿ ನಿಲ್ಲುತ್ತದೆ. ಈ ಬಗ್ಗೆ ನಾವು ಹೆಚ್ಚು ವಿವರಣೆ ನೀಡಿದರೂ ನಿಮಗೆ ಅರ್ಥವಾಗಲಿಕ್ಕಿಲ್ಲ. ಈ ವಿಡಿಯೋ ನೋಡಿದರೆ ನಿಮಗೆ ಪೂರ್ತಿ ಮನದಟ್ಟು ಆಗುತ್ತದೆ. ಇದು ಸತ್ಯವಾ, ಇಲ್ಲಾ ಮಿಥ್ಯವಾ ? ಸತ್ಯ ಆಗಿದ್ದರೆ ಇದರ ಹಿಂದೆ ಇರೋ ವಿಜ್ಞಾನ ಏನು ಎಂಬುದನ್ನು ನಾವಿವತ್ತು ಕಂಡುಕೊಳ್ಳೋಣ.

ಸಮಭಾಜಕ ವೃತ್ತದಿಂದ ಮೇಲಕ್ಕೆ ಹೋಗಿ ಅಲ್ಲಿ ನೀರನ್ನು ಚೆಕ್ ಮಾಡಿದರೆ ಅಲ್ಲಿ ಅದು ಗಡಿಯಾರದ ಮುಳ್ಳಿನ ರೀತಿಯಲ್ಲಿ ಕ್ಲಾಕ್ ವೈಸ್ ತಿರ್ಗುತ್ತದೆ. ಅದೇ ರೇಖೆ ಇದ್ದೆಡೆಗೆ ಬಂದರೆ ಅದು ಅಲ್ಲಿ ಉಲ್ಟಾ ಆಗಿ ಗಡಿಯಾರದ ಮುಳ್ಳಿಗೆ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ. ವಿಡಿಯೋದಲ್ಲಿ ತೋರಿಸಿದ್ದು ನಿಜವೆಂದು ಕಂಡರೂ, ಅದು ನಿಜವಲ್ಲ. ಈ ಬಗ್ಗೆ ತುಂಬಾ ಚರ್ಚೆಗಳು ಸದಾ ನಡೆಯುತ್ತಿವೆ.

ಇದನ್ನು ಪ್ರಕೃತಿಯ ವೈಚಿತ್ರ್ಯ ಅಂತ ನಾವು ಕರೆದರೂ ಅದರ ಹಿಂದೆ ವಿಜ್ಞಾನ ಅಡಗಿದೆ. ಇದನ್ನು “Coriolis Effect” ಎಂದು ಕೂಡಾ ಕರೆಯುತ್ತಾರೆ ಎಂದು ಕೆಲವರು ವಾದಿಸುತ್ತಾರೆ. ಆದರೆ ವಿಜ್ಞಾನಿಗಳ ಪ್ರಕಾರ ‘ಕೊರಿಯೋಲಿಸ್ ಪರಿಣಾಮ ‘ ವು ಸಣ್ಣ ಮಟ್ಟದ ಬಾತ್ ರೂಮಿನ ಟಬ್ ಅಥವಾ ಟಾಯ್ಲೆಟ್ ನಿಂದ ನೀರನ್ನು ಡ್ರೈನ್ ಮಾಡಿದಾಗ ಉಂಟಾಗುವುದಿಲ್ಲ. ನೀರನ್ನು ಹ್ಯಾಂಡ್ ವಾಷ್ ಸಿಂಕ್ ನಿಂದ ಡ್ರೈನ್ ಮಾಡಿದಾಗ ಅದು ಒಂದು ದಿಕ್ಕಿಗೆ ತಿರುಗುವಂತೆ ಆಗುವುದು ಆ ಸಿಂಕ್ ನ ಡಿಸೈನ್ ನ ಪರಿಣಾಮ ಮತ್ತೇನೂ ಅಲ್ಲ. ‘ ಕೊರಿಯೋಲಿಸ್ ಪರಿಣಾಮ’ವು ಚಂಡಮಾರುತ ಉಂಟಾಗುವ ಸಂದರ್ಭ ನಡೆಯುತ್ತದೆ. ಭೂ ಮಧ್ಯ ರೇಖೆಗಿಂತ ಮೇಲೆ, ಯಾವಾಗಲೂ ಚಂಡಮಾರುತ ಆಂಟಿ ಕ್ಲಾಕ್ ವೈಸ್ ದಿಕ್ಕಿನಲ್ಲಿ ಚಕ್ರ ತಿರುಗುತ್ತಾ ಚಲಿಸುತ್ತದೆ. ಅದೇ ಭೂಮಧ್ಯ ರೇಖೆಯ ಕೆಳಗೆ ಉಂಟಾಗುವ ಚಂಡಮಾರುತವು ಗಡಿಯಾರದ ಮುಳ್ಳು ಸಾಗುವ ರೀತಿಯಲ್ಲಿ ಎಡದಿಂದ ಬಲಕ್ಕೆ ತಿರುಗುತ್ತಾ ಚಲಿಸುತ್ತದೆ.

ಸಮಭಾಜಕ ರೇಖೆಯಲ್ಲಿರುವ ದೇಶಗಳು
ಸಮಭಾಜಕವು ಪ್ರಪಂಚದ 11 ದೇಶಗಳ ಭೂಮಿಯ ಮೂಲಕ ಹಾದುಹೋಗುತ್ತದೆ. ಅಲ್ಲದೆ, ಸಮಭಾಜಕವು ಎರಡು ದ್ವೀಪ ರಾಷ್ಟ್ರಗಳ ಭೂಪ್ರದೇಶಗಳನ್ನು ಕೂಡಾ ಹಾದುಹೋಗುತ್ತದೆ. ಆದರೆ ಆ ಎರಡರಲ್ಲೂ ಭೂಮಿಯನ್ನು ಅದು ಸ್ಪರ್ಶಿಸುವುದಿಲ್ಲ. ಸಮಭಾಜಕದಿಂದ ಹಾದುಹೋಗುವ 11 ದೇಶಗಳಲ್ಲಿ ಸಾವೊ ಟೋಮ್ ಮತ್ತು ಪ್ರಿನ್ಸಿಪೆ, ಗ್ಯಾಬೊನ್, ಕಾಂಗೋ ಗಣರಾಜ್ಯ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಉಗಾಂಡಾ, ಕೀನ್ಯಾ, ಸೊಮಾಲಿಯಾ, ಇಂಡೋನೇಷಿಯಾ, ಈಕ್ವೆಡಾರ್, ಕೊಲಂಬಿಯಾ ಮತ್ತು ಬ್ರೆಜಿಲ್ ಸೇರಿವೆ.

ಅಟ್ಲಾಂಟಿಕ್ ಮಹಾಸಾಗರ, ವಿಕ್ಟೋರಿಯಾ ಸರೋವರ, ಹಿಂದೂ ಮಹಾಸಾಗರ, ಕರಿಮಾತಾ ಜಲಸಂಧಿ, ಮಕಾಸ್ಸರ್ ಜಲಸಂಧಿ, ಟೋಮಿನಿ ಕೊಲ್ಲಿ, ಮೊಲುಕ್ಕಾ ಸಮುದ್ರ, ಹಲ್ಮಹೆರಾ ಸಮುದ್ರ ಮತ್ತು ಪೆಸಿಫಿಕ್ ಮಹಾಸಾಗರದ ಮೂಲಕ ಸಮಭಾಜಕವು ಹಾದುಹೋಗುವ ಕೆಲವು ಗಮನಾರ್ಹ ಜಲಚರ ಲಕ್ಷಣಗಳಾಗಿವೆ. ಭಾರತವು ಸಮಭಾಜಕ ವೃತ್ತದಿಂದ ಉತ್ತರಭಾಗದಲ್ಲಿದೆ. ಹಾಗಾಗಿ ಮೇಲೆ ಹೇಳಿದ ಪ್ರಕಾರ ನಿಮ್ಮ ಮನೆಯ ವಾಷ್ ಬೇಸಿನ್ ನ ಅಥವಾ ಟಾಯ್ಲೆಟ್ಟಿನ ನೀರು ಡ್ರೈನ್ ಮಾಡಿದಾಗ ಯಾವ ಕಡೆ ತಿರುಗುತ್ತದೆ ? ಮನೆಯಲ್ಲೇ  ಪರೀಕ್ಷಿಸಿಕೊಳ್ಳಿ. ನಿಮಗಿಂತ ಬೇರೆ ದೊಡ್ಡ ವಿಜ್ಞಾನಿಗಳು ಬೇಕಾ?

 

ಇದನ್ನೂ ಓದಿ: Interesting Facts : ಪಕ್ಷಿಗಳು ವಿದ್ಯುತ್ ತಂತಿಗಳ ಮೇಲೆ ಕುಳಿತಾಗ ಕರೆಂಟ್ ಹೊಡೆಯದಿರಲು ಕಾರಣವೇನು?

Leave A Reply

Your email address will not be published.