Bhagya lakshmi: ಯಡಿಯೂರಪ್ಪನ ‘ಭಾಗ್ಯಲಕ್ಷ್ಮೀ’ ಗೆ ಸಿದ್ದರಾಮಯ್ಯ ಕೋಕ್ !! ರಾಜದಲ್ಲೀಗ ‘ಗೃಹಲಕ್ಷ್ಮಿ’ಯೇ ರಾಕ್ !!

Latest news political news Yeddyurappa popular scheme Bhagya lakshmi Siddaramaiah

Bhagya lakshmi: ಸಿಎಂ ಸಿದ್ದರಾಮಯ್ಯ(CM siddaramaiah) ನಿನ್ನೆ ದಿನ 2023-24ನೇ ಸಾಲಿನ ಕರ್ನಾಟಕ ಬಜೆಟ್(Karnataka budget) ಮಂಡನೆ ಮಾಡಿದ್ದು, ಹಲವಾರು ಜನಪ್ರಿಯ ಯೋಜನೆಗಳಿಗೆ ಭರ್ಜರಿ ಅನುದಾನ ನೀಡಿದ್ದಾರೆ. ಜೊತೆಗೆ ಈ ಬಾರಿಯ ಬಜೆಟ್​​ನಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದು, ಈ ಹಿಂದೆ ಬಿಜೆಪಿ ಸರ್ಕಾರ(BJP Government) ಜಾರಿಗೆ ತಂದಿದ್ದ ಅನೇಕ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಕೊಕ್ ಹಾಕಿದ್ದಾರೆ. ಅದರಲ್ಲೂ ಮುಖ್ಯವಾಗಿ ಯಡಿಯೂರಪ್ಪನವರ(Yadiyurappa) ಜನಪ್ರಿಯ ಯೋಜನೆಯಾದ ಭಾಗ್ಯಲಕ್ಷ್ಮೀ ಯೋಜನೆಗೂ ಶಾಕ್ ನೀಡಿದ್ದಾರೆ.

ಹೌದು, ಬಿಎಸ್‌ ಯಡಿಯೂರಪ್ಪ ಜಾರಿಗೊಳಿಸಿದ್ದ ಭಾಗ್ಯಲಕ್ಷ್ಮಿ (Bhagya lakshmi)ಯೋಜನೆಯು ರಾಜ್ಯದಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು. ಈ ಹಿಂದೆ ಬಸವರಾಜ ಬೊಮ್ಮಾಯಿ(Basavaraj bommai) ಸರ್ಕಾರ ಕೂಡ ಭಾಗ್ಯಲಕ್ಷ್ಮಿ ಯೋಜನೆಯನ್ನು ಮುಂದುವರೆಸಿತ್ತು. ಆದರೆ, ನಿನ್ನೆ ದಿನ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಈ ಯೋಜನೆಯನ್ನು ಕೈಬಿಡಲಾಗಿದೆ. ಕಾಂಗ್ರೆಸ್‌ ಸರ್ಕಾರ ಈ ಯೋಜನೆ ಬಗ್ಗೆ ಯಾವುದೇ ಚಕಾರ ಎತ್ತಿದೆ ಭಾಗ್ಯಲಕ್ಷ್ಮೀಗೆ ಕೋಕ್ ನೀಡಿದೆ.

ಅಂದಹಾಗೆ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಕ್ಕಳು ಈ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳಲು ಆರ್ಹರಿದ್ದರು. 18ವರ್ಷ ಪೂರ್ಣಗೊಂಡ ನಂತರ ಉನ್ನತ ವಿದ್ಯಾಭ್ಯಾಸಕ್ಕೆ(Higher education) ಖಾತೆಯಲ್ಲಿರುವ ಮೊತ್ತದ ಶೇ.50ರಷ್ಟು ಭಾಗ ಹಿಂಪಡೆಯಲು ಅವಕಾಶವಿತ್ತು. ಆದರೀಗ ಮಾಜಿ ಸಿಎಂ ಯಡಿಯೂರಪ್ಪನವರ ಕನಸಿನ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಕೈ ಬಿಟ್ಟಿದ್ದಾರೆ. ಇಂದಿನ ಬಜೆಟ್​​ನಲ್ಲೂ ಭಾಗ್ಯಲಕ್ಷ್ಮಿ ಯೋಜನೆ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ.

ಇನ್ನು ಯಡಿಯೂರಪ್ಪನವರ ‘ಭಾಗ್ಯಲಕ್ಷ್ಮೀ’ಗೆ ಕೋಕ್ ಆದ್ರೆ, ಸದ್ಯ ರಾಜ್ಯದಲ್ಲೀಗ ಸಿದ್ದರಾಮಯ್ಯನವರ ನೂತನ ಸರ್ಕಾರ ಜಾರಿಗೆ ತಂದಿರೋ ‘ಗೃಹಲಕ್ಷ್ಮೀ’ ಯೋಜನೆ ರಾಕ್ ಆಗುತ್ತಿದೆ. ಯೋಜನೆಯಡಿ ಪ್ರತೀ ತಿಂಗಳು ಮನೆಯ ಒಬ್ಬಳು ಹೆಣ್ಣುಮಗಳಿಗೆ 2000 ರೂ ಹಣ ಸಿಗುವುದರಿಂದ ಎಲ್ಲೆಡೆ ಭಾರೀ ಅದೇ ಸದ್ದು ಮಾಡುತ್ತಿದೆ.

ಸಿದ್ದರಾಮಯ್ಯ ಗೌರ್ಮೆಂಟ್ ಕೈ ಬಿಟ್ಟ ಹಿಂದಿನ ಸರ್ಕಾರದ ಯೋಜನೆಗಳು:
• ವಿದ್ಯಾನಿಧಿ ಯೋಜನೆ
• ಜಿಲ್ಲೆಗೊಂದು ಗೋಶಾಲೆ
• ಎಪಿಎಂಸಿ ಕಾಯ್ದೆ ರದ್ದು
• ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದು
• ವಿವೇಕ ಶಾಲೆ ಅಭಿವೃದ್ಧಿ ಯೋಜನೆ
• ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ
• ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆ- ಮಹಿಳೆಯರ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂ ಸಹಾಯಧನ ನೀಡುವುದು.
• ಭೂಸಿರಿ ಯೋಜನೆ – ರೈತರಿಗೆ 10 ಸಾವಿರ ರೂ ಕೊಡುವುದು.
• ಶ್ರಮಶಕ್ತಿ ಯೋಜನೆ – ಕೃಷಿ ಮಹಿಳೆಯರಿಗೆ 500 ರೂ ಪ್ರತಿ ತಿಂಗಳು ನೀಡುವುದು
• ಅಗ್ನಿ ವೀರ ಯೋಜನೆಗೆ ಸೇರುವ ಎಸ್ ಸಿ/ ಎಸ್ ಟಿ ಯುವಕರಿಗೆ ತರಬೇತಿ ನೀಡುವ ಯೋಜನೆ ಕೊಕ್ ನೀಡಲಾಗಿದೆ.
• ಮಕ್ಕಳ‌ ಬಸ್ – ಉಚಿತ ಬಸ್ ಯೋಜನೆಗೆ ಕೊಕ್

 

ಇದನ್ನು ಓದಿ: Actress Photo: ಯಾರೀ ಪುಟಾಣಿ ಹುಡುಗಿ ?, ಸಿನಿಮಾದಲ್ಲಿ ಗೆಜ್ಜೆ – ರಾಜಕಾರಣದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಸೌತ್ ಸ್ಟಾರ್ ? 

Leave A Reply

Your email address will not be published.