Shriram Sene: ಬಜೆಟ್’ಲ್ಲಿ ಆನ್‌ಲೈನ್‌ನಲ್ಲಿ ವಿವಾಹ ನೋಂದಣಿಗೆ ಅವಕಾಶ : ಶ್ರೀರಾಮ ಸೇನೆಯಿಂದ ತೀವ್ರ ವಿರೋಧ
online marriage registration in budget opposed by Shri Ram Sena
Shriram Sene: ರಾಜ್ಯದ 2023-24ನೇ ಸಾಲಿನ ಬಜೆಟ್ ನ್ನು (Karnataka Budget 2023) ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರದಂದು ಮಂಡನೆ ಮಾಡಿದ್ದು , ಹಲವಾರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಜೊತೆಗೆ ಬಜೆಟ್ ನಲ್ಲಿ ಆನ್‌ಲೈನ್ (Online) ಮೂಲಕ ವಿವಾಹ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಹೌದು, ಕಾಂಗ್ರೆಸ್ ಸರ್ಕಾರ ಆನ್‌ಲೈನ್ ನೋಂದಣಿ
ವಿವಾಹ ನೋಂದಣಿಗಾಗಿ ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಟ ತಪ್ಪಿಸಲು, ವಿವಾಹ ನೋಂದಣಿಯನ್ನು ಜನಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ.
ಆದರೆ ಆನ್‌ಲೈನ್ (Online) ಮೂಲಕ ವಿವಾಹ ನೋಂದಣಿಗೆ ಅವಕಾಶ ಕಲ್ಪಿಸಿರುವುದನ್ನು ಶ್ರೀರಾಮ ಸೇನೆ (Shriram sene) ವಿರೋಧ ವ್ಯಕ್ತಪಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಲವ್ ಜಿಹಾದ್ ಪ್ರಕರಣ ಹೆಚ್ಚಾಗಿವೆ. ನೂರಾರು ಪ್ರಕರಣಗಳು ಹೊರ ಬರುತ್ತಿವೆ. ಆನ್ ಲೈನ್ ವಿವಾಹ ನೋಂದಣಿ ಲವ್ ಜಿಹಾದ್ಗೆ ಕುಮ್ಮಕ್ಕು ಕೊಡಲಿದೆ. ತಂದೆ-ತಾಯಿಗೆ, ಸಮಾಜಕ್ಕೆ, ಸಂಘಟನೆಗಳಿಗೆ, ಹಿಂದೂಗಳಿಗೆ ಗೊತ್ತಾಗದ ಹಾಗೆ ಮುಸ್ಲಿಂ, ಕ್ರಿಶ್ಚಿಯನ್ನರು ಸಾರಾಗವಾಗಿ ಭಯವಿಲ್ಲದೆ ಆನ್‌ಲೈನ್‌ನಲ್ಲಿ ವಿವಾಹ ನೋಂದಣಿ ಮಾಡಿಕೊಳ್ಳುತ್ತಾರೆ. ಆನ್‌ಲೈನ್‌ನಲ್ಲಿ ವಿವಾಹ ನೋಂದಣಿ ಮಾಡುವ ಮೂಲಕ ಆನಂದವಾಗಿ ಲವ್ ಜಿಹಾದ್ ಮಾಡಿಕೊಂಡು ಮೆರೆಯಬಹುದು ಇದಕ್ಕೆ ನಾವು ಅವಕಾಶ ಕೊಡಲು ಬಿಡುವುದಿಲ್ಲ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ್ ವ್ಯಕ್ತಪಡಿಸಿದ್ದಾರೆ.
ಮುತಾಲಿಕ್ ಅವರು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದು, ವಿವಾಹ ನೋಂದಣಿಗೆ ರಿಜಿಸ್ಟರ್ ಕಚೇರಿಗಳಲ್ಲಿ ಒಂದು ತಿಂಗಳ ಮುಂಚೆ ಮಾಹಿತಿ ಕೊಡುವುದು. ಅವರ ವಿಳಾಸ, ಫೋಟೋಗಳನ್ನ ಹಾಕುವುದು ಯೋಗ್ಯವಾದ ವ್ಯವಸ್ಥೆಯಾಗಿದೆ. ಯಾರೂ ಯಾವುದೇ ರೀತಿಯ ಮೋಸ ವಂಚನೆ ಮಾಡಲು ಸಾಧ್ಯವಿಲ್ಲ. ಈ ಆನ್‌ಲೈನ್ ವಿವಾಹ ನೋಂದಣಿಯನ್ನು ರದ್ದು ಮಾಡಬೇಕು, ಜಾರಿ ಮಾಡಬಾರದು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಇದನ್ನು ಓದಿ: Love jihad: ಗುಜರಾತ್’ನಲ್ಲೊಂದು ವಿಚಿತ್ರ ಲವ್ ಜಿಹಾದ್ ಪ್ರಕರಣ ಬಹಿರಂಗ