Kerala Highcourt: ಸಲಿಂಗ ಗೆಳತಿಗಾಗಿ ಹೇಬಿಯಸ್ ಕಾರ್ಪಸ್ ಹಿಡಿದು ಹೈಕೋರ್ಟ್ ಗೆ ಹೊರಟ ಹುಡುಗಿ: ಗುಡ್ ಲಕ್ ಅಂದ ಕೋರ್ಟು
Latest news intresting news Kerala Highcourt woman went to court for love of same-sex partner
Kerala Highcourt: ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿರುವ ಸಲಿಂಗ ದಂಪತಿಗಳಿಗೆ ಕೇರಳ ಹೈಕೋರ್ಟ್( Kerala Highcourt) ಪೊಲೀಸ್ ರಕ್ಷಣೆಯನ್ನು ನೀಡಿದೆ.ಸುಮಯ್ಯ ಶೆರಿನ್ ತನ್ನ ಸಂಗಾತಿ ಅಫೀಫಾ ಜತೆಗೆ ಒಟ್ಟಿಗೆ ಬಾಳಲು ಅವಕಾಶ ಕೋರಿ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿದ್ದಳು. ಇದೀಗ ಇಬ್ಬರಿಗೂ ರಕ್ಷಣೆ ನೀಡುವಂತೆ ಕೇರಳ ಹೈಕೋರ್ಟ್, ಪೊಲೀಸರಿಗೆ(police) ನಿರ್ದೇಶನ ನೀಡಿ ಆದೇಶ ಹೊರಡಿಸಿದೆ.
ಬುಧವಾರ, ನ್ಯಾಯಮೂರ್ತಿ ಪಿವಿ ಕುನ್ಹಿಕೃಷ್ಣನ್ ಅವರ ಏಕಸದಸ್ಯ ಪೀಠವು ಅಫೀಫಾ ಸಿಎಸ್ ಮತ್ತು ಸುಮಯ್ಯ ಶೆರಿನ್ ಅವರ ಮನವಿಯನ್ನು ಒಪ್ಪಿಕೊಂಡಿತು. ಹಾಗೂ ಇಬ್ಬರಿಗೂ ಪೊಲೀಸರ ರಕ್ಷಣೆ ನೀಡಿದೆ.
ಮಲಪ್ಪುರಂ (mallapuram) ಜಿಲ್ಲೆಯ ಮುಸ್ಲಿಂ ಕುಟುಂಬಗಳಿಗೆ (Muslim family) ಸೇರಿದ ಸಲಿಂಗ (Same sex couple) ದಂಪತಿಗಳು 2019 ರಲ್ಲಿ 11 ನೇ ತರಗತಿಯಲ್ಲಿ ಓದುತ್ತಿದ್ದಾಗ ಭೇಟಿಯಾದರು. ಇವರ ಸ್ನೇಹ ಪ್ರೀತಿಯಾಗಿ ಬದಲಾಯಿತು. ಶೀಘ್ರದಲ್ಲೇ ತಮ್ಮ ಸಂಬಂಧವನ್ನು ಪ್ರಾರಂಭಿಸಿದರು ಹಾಗೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಜನವರಿ 27ರಂದು ಇಬ್ಬರು ಮನೆ ಬಿಟ್ಟು ಬಂದ ಬಳಿಕ ಒಟ್ಟಿಗೆ ವಾಸಿಸುತ್ತಿದ್ದರು.
ಪೋಷಕರು ಇದನ್ನು ಆಕ್ಷೇಪಿಸಿ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಕಾಣೆಯಾದ ದೂರುಗಳನ್ನು ದಾಖಲಿಸಿದರು, ಅಫೀಫಾ ಮತ್ತು ಸುಮಯ್ಯ ಅವರು ಜನವರಿ 29 ರಂದು ಮಲಪ್ಪುರಂ ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಒಟ್ಟಿಗೆ ವಾಸಿಸಲು ಅನುಮತಿ ಪಡೆದರು.
ಇವರಿಬ್ಬರು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ ನಂತರ ಕುಟುಂಬಗಳ ಸಂಪರ್ಕವನ್ನು ಕಳೆದುಕೊಂಡಿದ್ದರು. ಆದರೆ, ಇತ್ತೀಚೆಗಷ್ಟೇ ಇವರಿಬ್ಬರೂ ಆಫೀಫಾ ಸಂಬಂಧಿಕರ ಕೈಗೆ ಸಿಕ್ಕಿಬಿದ್ದಾಗ, ಇವರಿರುವ ಸ್ಥಳದ ಬಗ್ಗೆ ಗೊತ್ತಾಗಿದೆ. ಕೆಲವೇ ದಿನಗಳಲ್ಲಿ ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ. ಅಫೀಫಾಳನ್ನು ಆಕೆಯ ಸಂಬಂಧಿಕರೇ ಅಪಹರಿಸಿದ್ದಾರೆ ಎಂದು ಆರೋಪಿಸಿ ಸುಮಯ್ಯ, ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಮೇರೆಗೆ ವಿಭಾಗೀಯ ಪೀಠದ ಮುಂದೆ ಅಫೀಫಾಳನ್ನು ಹಾಜರುಪಡಿಸಲಾಗಿತ್ತು.
ಅಫೀಫಾ ತನ್ನ ಪೋಷಕರೊಂದಿಗೆ ಸ್ವ ಇಚ್ಛೆಯಿಂದ ಹೋಗಲು ಬಯಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ ನಂತರ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ ಅಫೀಫಾಳ ಈ ಹೇಳಿಕೆಗೆ ಮುಖ್ಯ ಕಾರಣ ಆಕೆಯ ಪೋಷಕರು ಮಾದಕ ದ್ರವ್ಯ ನೀಡಿದ್ದರು ಮತ್ತು ಅಂತಹ ಹೇಳಿಕೆಯನ್ನು ನೀಡುವಂತೆ ಒತ್ತಾಯಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಕೆಲವೇ ದಿನಗಳಲ್ಲಿ ಮತ್ತೆ ಅಫೀಫಾ ಹಿಂತಿರುಗಿದ್ದು ಸುಮಯ್ಯ ಜೊತೆ ವಾಸಿಸುತ್ತಿದ್ದಾಳೆ.
ಇದೀಗ ತನ್ನ ಸಂಗಾತಿ(partner) ಮರಳಿ ಬಂದಿದ್ದು, ಅಫೀಫಾ ತನ್ನ ಸಂಬಂಧಿಕರಿಂದ ಮತ್ತೆ ಅಪಹರಣಕ್ಕೆ ಒಳಗಾಗಬಹುದು ಎಂಬ ಆತಂಕದಿಂದ ಸುಮಯ್ಯ ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದಳು. ಸದ್ಯಕ್ಕೆ ಮಧ್ಯಂತರ ಆದೇಶ ನೀಡಿದ್ದು, ಇಬ್ಬರು ಒಟ್ಟಿಗೆ ವಾಸಿಸಲು ಪೊಲೀಸರು ರಕ್ಷಣೆ ನೀಡುವಂತೆ ನಿರ್ದೇಶಿಸಿದೆ.
ಇದನ್ನು ಓದಿ: Viral video: ಅಮ್ಮನ ರಕ್ಷಣೆಗೆ ಮನುಷ್ಯರ ಸಹಾಯ ಬೇಡಿದ ಮರಿ ತಿಮಿಂಗಿಲ ; ತಾಯಿ-ಮರಿಗಳ ಮನಮುಟ್ಟುವ ವಿಡಿಯೋ ವೈರಲ್ !