Long Kissing Contest: ದೀರ್ಘ ಚುಂಬನ ಸ್ಪರ್ಧೆಯನ್ನು ಗಿನ್ನೆಸ್ ಕೈ ಬಿಟ್ಟದ್ದು ಇದೇ ಕಾರಣಕ್ಕೆ…!

Latest news Guinness World Record for Long Kissing Contest

Long Kissing Contest: ಪ್ರೇಮಿಗಳು, ದಂಪತಿಗಳು ದೀರ್ಘ ಚುಂಬನ ಸ್ಪರ್ಧೆಯಲ್ಲಿ ಗೆದ್ದರೆ ಅವರ ಹೆಸರು ಗಿನ್ನೆಸ್ ಪುಟದಲ್ಲಿ ಸೇರ್ಪಡೆಯಾಗುತ್ತದೆ. ಕಳೆದ 2013 ರಲ್ಲಿ ದೀರ್ಘ ಚುಂಬನ ಸ್ಪರ್ಧೆಯಲ್ಲಿ (World’s longest Kiss) ಭಾಗವಹಿಸಿ ಎಕ್ಕಾಚೈ ತಿರಾನರತ್ ಮತ್ತು ಲಕ್ಷನಾ ತಿರಾನರತ್ ದಂಪತಿಗಳು 58 ಗಂಟೆಗಳು, 35 ನಿಮಿಷಗಳು ಮತ್ತು 58 ಸೆಕೆಂಡ್‌ಗಳ ಕಾಲ ಲಿಪ್ ಕಿಸ್ ಮಾಡಿದ್ದಾರೆ. ಈ ಮೂಲಕ ಅವರ ಹೆಸರು ಗಿನ್ನೆಸ್ ದಾಖಲೆ (Guinness World Record) ಪುಟಕ್ಕೆ ಸೇರಿದೆ. ಇಲ್ಲಿಯವರೆಗೂ ಇವರ ಈ ದಾಖಲೆಯನ್ನು ಯಾರೂ ಬ್ರೇಕ್‌ ಮಾಡಿಲ್ಲ.

ಆದರೆ, ಇದೀಗ ದೀರ್ಘ ಚುಂಬನ ಸ್ಪರ್ಧೆಯನ್ನು (Long Kissing Contest) ಗಿನ್ನೆಸ್ ಕೈ ಬಿಟ್ಟಿದೆ. ಇದಕ್ಕೆ ಕಾರಣ ಏನು ಗೊತ್ತಾ? ಇಲ್ಲಿದೆ ನೋಡಿ!. ಈ ಸ್ಪರ್ಧೆ ಗೊಂದಲಕಾರಿಯೂ ಮತ್ತು ವ್ಯತಿರಿಕ್ತತೆಯಿಂದಲೂ ಕೂಡಿವೆ ಎಂಬ ಕಾರಣ ಮತ್ತು ಸಾಕ್ಷ್ಯಾಧಾರಗಳನ್ನು ನೀಡಿ ಗಿನ್ನೀಸ್​ ವಿಶ್ವದಾಖಲೆಯು ಈ ಸ್ಪರ್ಧೆಯನ್ನು ತನ್ನ ಸ್ಪರ್ಧಾಪಟ್ಟಿಯಿಂದ ತೆಗೆಯಿತು. ತುಂಬಾ ಕಠಿಣವಾದ ಸ್ಪರ್ಧೆಯಾಗಿದ್ದು, ಸ್ಪರ್ಧಿಸುವ ಜೋಡಿಗಳು ನಂತರದಲ್ಲಿ ಕಷ್ಟಗಳನ್ನು ಎದುರಿಸುತ್ತಾರೆ.

ಈ ಸ್ಪರ್ಧೆಯಲ್ಲಿ ಜೋಡಿಯು ನಿರಂತರವಾಗಿ ಚುಂಬಿಸುತ್ತಿರಬೇಕು. ಪರಸ್ಪರರ ತುಟಿಗಳು ಅಂಟಿಕೊಂಡೇ ಇರಬೇಕು. ಜೋಡಿಗಳು ನಿಂತುಕೊಂಡು ಕಿಸ್‌ ಮಾಡಬೇಕು. ಅರೆಕ್ಷಣವೂ ತುಟಿಗಳನ್ನು ಬಿಡಬಾರದು. ಸ್ಪರ್ಧಾರ್ಥಿಗಳು ಸ್ಟ್ರಾ ಮೂಲಕ ದ್ರವಾಹಾರ ಸೇವಿಸಬಹುದು. ಆದರೆ ಈ ಸಂದರ್ಭದಲ್ಲಿಯೂ ಇಬ್ಬರ ತುಟಿಗಳೂ ಬೇರ್ಪಡಬಾರದು. ಚುಂಬಿಸುತ್ತಿರುವಾಗ ಶೌಚಾಲಯಕ್ಕೆ ಇಬ್ಬರೂ ಒಟ್ಟಿಗೇ ಹೋಗಬೇಕು. ಅಡಲ್ಟ್​ ಡೈಪರ್​, ಪ್ಯಾಡ್​​ಗಳನ್ನು ಧರಿಸುವಂತಿಲ್ಲ. ನಿದ್ದೆ, ವಿಶ್ರಾಂತಿ ಯಾವೂದೂ ಇಲ್ಲ. ಎಲ್ಲಾ ಸಮಯದಲ್ಲೂ ನಿಂತುಕೊಂಡು ಪರಸ್ಪರ ಲಿಪ್ ಲಾಕ್ ಆಗಿರಬೇಕು.

ಇಷ್ಟೆಲ್ಲಾ ಕಠಿಣ ಸವಾಲುಗಳಿಂದ ಜೋಡಿಗಳು ನಿದ್ರಾಹೀನತೆಗೆ ಸಂಬಂಧಿಸಿದ ಅಪಾಯ ಮತ್ತು ಮನೋರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಗಿನ್ನೇಸ್​ ಹೇಳಿದೆ. ಕೆಲವರು ದೀರ್ಘ ಕಾಲದ ಚುಂಬನದಿಂದ ಅರೆಪ್ರಜ್ಞಾವಸ್ಥೆಯಲ್ಲಿರುತ್ತಾರೆ. ಎಷ್ಟೋ ಜನರು ಚುಂಬನದ ನಂತರ ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತಾರೆ. ಇದರಿಂದ ಅನಾರೋಗ್ಯ ಉಂಟಾಗುತ್ತದೆ. ಕೆಲವರಿಗೆ ಉಸಿರಾಟದ ತೊಂದರೆಯಿಂದಾಗಿ ಅವರಿಗೆ ಆಮ್ಲಜನಕವನ್ನು ಪೂರೈಸಿದಂತಹ ಘಟನೆಗಳು ಆಗಿವೆ.

 

ಇದನ್ನು ಓದಿ: shop licence: ಅಂಗಡಿ ಪರವಾನಿಗೆ ಮತ್ತು ನವೀಕರಣ ಕಡ್ಡಾಯ, ಆಯುಕ್ತರ ಹೊಸ ಆದೇಶ ! 

Leave A Reply

Your email address will not be published.