Free current: ಗೃಹಜ್ಯೋತಿ ಅರ್ಜಿ ಹಾಕಿದ್ರೆ ಕೂಡಲೇ ಅರ್ಜಿ ಸ್ಟೇಟಸ್ ಪರಿಶೀಲಿಸಿ !! ಈ ತಪ್ಪು ಮಾಡಿದ್ದರೆ ನಿಮಗೆ ಸಿಗೋಲ್ಲ ಫ್ರೀ ಕರೆಂಟ್!!
Check application status immediately if Grihajyoti application is applied
Free current: ಕಾಂಗ್ರೆಸ್ ಸರಕಾರದ(Congress Government) ಪಂಚ ಗ್ಯಾರಂಟಿಗಳ ಪೈಕಿ ಒಂದಾಗಿರುವ ಗೃಹಜ್ಯೋತಿ ಯೋಜನೆ ಈಗಾಗಲೇ ರಾಜ್ಯಾದ್ಯಂತ ಜಾರಿಯಾಗಿದೆ. ಎಲ್ಲರೂ ಭರದಿಂದ ಅರ್ಜಿ ಹಾಕುತ್ತಿದ್ದಾರೆ. ಈ ತಿಂಗಳಿಂದಲೇ ಅರ್ಜಿ ಹಾಕಿದವರೆಲ್ಲರಿಗೂ ಉಚಿತವಾಗಿ ವಿದ್ಯುತ್(Free current) ಸಿಗಲಿದೆ. ಇನ್ನು ಉಚಿತ ವಿದ್ಯುತ್ ಪಡೆಯಲು ನೀವು ಹಾಕಿದ್ದ ಅರ್ಜಿ ಸರಿಯಾಗಿದೆಯೇ ಅಥವಾ ಇಲ್ಲವೇ ಎಂದು ನೀವೆ ನೋಡಬಹುದು. ಅದನ್ನು ಪರಿಶೀಲನೆ ಮಾಡುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಜೂನ್ 18ರಿಂದ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಲು ಅರ್ಜಿ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಈವರೆಗೂ 1 ಕೋಟಿಗೂ ಅಧಿಕ ಗ್ರಾಹಕರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಸ್ಥಿತಿಯನ್ನು ತಿಳಿಯಲು ಕೂಡ ಅವಕಾಶ ಮಾಡಿಕೊಡಲಾಗಿದೆ.
ಅಂದಹಾಗೆ ಅರ್ಜಿ ಸಲ್ಲಿಕೆ ಮಾಡಿದ್ದೀರಾ ಸರಿ, ಆದರೆ ನಿಮ್ಮ ಅರ್ಜಿಯ ಸ್ಟೇಟಸ್(Status)ಏನು ಎಂದು ತಿಳಿಯುವ ಕುತೂಹಲ ಇರುತ್ತದೆ. ಇದರಿಂದ ಅರ್ಜಿ ಸಲ್ಲಿಕೆಯಾಗಿದೆಯಾ ಇಲ್ಲವಾ ಅಥವಾ ಮತ್ತೆ ಅರ್ಜಿ ಸಲ್ಲಿಸಬೇಕಾ ಎನ್ನುವುದು ಕೂಡ ಗೊತ್ತಾಗಲಿದೆ. ನೀವು ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ಯಾವುದಕ್ಕೂ ಒಮ್ಮೆ ನಿಮ್ಮ ಅರ್ಜಿಯ ಸ್ಟೇಟಸ್ ತಿಳಿಯುವುದು ಒಳ್ಳೆಯದು.
ತಿಳಿಯುವ ಪ್ರಕ್ರಿಯೆ ಹೇಗೆ?
• ಸೇವಾ ಸಿಂಧು ಪೋರ್ಟಲ್ ಹೋಗಬೇಕು. https://sevasindhugs.karnataka.gov.in/ ಗೆ ನೀವು ಲಾಗಿನ್ ಆಗಿ ಬಳಿಕ ಅದರಲ್ಲಿ ಗೃಹಜ್ಯೋತಿ ಮೇಲೆ ಕ್ಲಿಕ್ ಮಾಡಿ.
• ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯುವ ಕುರಿತಾದ ಆಪ್ಶನ್ ಮೇಲೆ ಕ್ಲಿಕ್ ಮಾಡಿ.
• ಇಷ್ಟು ಪ್ರಕ್ರಿಯೆ ಮುಗಿದ ಮೇಲೆ ನಿಮ್ಮ ಇಂಧನ ಇಲಾಖೆಯ ವಿಭಾಗ ಆಯ್ಕೆ ಮಾಡಬೇಕು ಅಂದರೆ ಮೆಸ್ಕಾಂ, ಬೆಸ್ಕಾಂ ಇತರ ಆಯ್ಕೆಯಲ್ಲಿ ನಿಮ್ಮದು ಯಾವುದು ಎಂದು ಆಯ್ಕೆ ಮಾಡಿ.
• ಬಳಿಕ ಅದರಲ್ಲಿ ನಿಮ್ಮ ಅಕೌಂಟ್ ಐಡಿ ಎಂಟರ್ ಮಾಡುವಂತೆ ತಿಳಿಸುತ್ತಾರೆ.
• ನೀವು ಕರೆಂಟ್ ಬಿಲ್ ಸಂಖ್ಯೆ ನಮೋದಿಸಿರುವ ಗ್ರಾಹಕರ ಸಂಖ್ಯೆ ಯನ್ನು ಅಕೌಂಟ್ ಐಡಿಯಲ್ಲಿ ಹಾಕಿ.ಬಳಿಕ ಚೆಕ್ ಸ್ಟೇಟಸ್ ಎಂದು ಬರುತ್ತದೆ. ಅಲ್ಲಿ ಕ್ಲಿಕ್ ಮಾಡಬೇಕು.
• ಬಳಿಕ ಅಲ್ಲಿ ನಿಮ್ಮ ಅರ್ಜಿಯ ಪ್ರಸ್ತುತ ಸ್ಥಿತಿ ತಿಳಿಯಲಿದೆ. ಅದರಲ್ಲಿ Your Application for Gruha Jyothi Scheme Received and Sent to ESCOM for Processing ಎಂದು ತಿಳಿಸುತ್ತದೆ.
• ಈ ರೀತಿ ಬಂದಿದ್ದೇ ಆಗಿದ್ದರೆ ನಿಮ್ಮ ಅರ್ಜಿ ಸಲ್ಲಿಕೆಯಾಗಿದೆ ಆ ಅರ್ಜಿ ಪರಿಶೀಲನೆಯ ಹಂತದಲ್ಲಿದೆ.
• ಒಂದು ವೇಳೆ ಇದರ ಹೊರತಾಗಿ Data not Found, Please Register to Gruha Joythi Scheme ಎಂದು ಬಂದರೆ ರಿಜಿಸ್ಟರ್ ಸರಿಯಾಗಿಲ್ಲ ಎಂದು ಅರ್ಥ. ನಿಮ್ಮ ಅರ್ಜಿ ಪ್ರಕ್ರಿಯೆ ಸರಿಯಾಗಿಲ್ಲ ನೀವು ರಿಜಿಸ್ಟರ್ ಮಾಡಿ ಎಂದು ಬರುತ್ತದೆ.
ಸಹಾಯವಾಣಿ
ಯೋಜನೆಯಲ್ಲಿ ಯಾವುದಾದರೂ ಗೊಂದಲಗಳಿದ್ದರೆ, ಅದನ್ನು ತಕ್ಷಣ ಬಗೆಹರಿಸಲು ಸಹಾಯವಾಣಿಯನ್ನು ತೆರೆಯಲಾಗಿದೆ. ಯೋಜನೆ ಹಾಗೂ ಅರ್ಜಿ ಸಲ್ಲಿಕೆ ಸಂಬಂಧ ಯಾವುದೇ ಗೊಂದಲಗಳಿದ್ದರೂ ಹೆಚ್ಚಿನ ಮಾಹಿತಿಗೆ 24/7 ಸೇವೆಯ 1912 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ https://sevasindhugs.karnataka.gov.in/gruhajyothi ಗೆ ಭೇಟಿ ನೀಡಬಹುದು ಎಂದು ಇಂಧನ ಇಲಾಖೆ ತಿಳಿಸಿದೆ.
ಇದನ್ನು ಓದಿ: shop licence: ಅಂಗಡಿ ಪರವಾನಿಗೆ ಮತ್ತು ನವೀಕರಣ ಕಡ್ಡಾಯ, ಆಯುಕ್ತರ ಹೊಸ ಆದೇಶ !