DRDO Scientist: ಪಾಕ್ ಬ್ಯೂಟಿಯ ಮೋಹಕ್ಕೆ ಬಿದ್ದ DRDO ವಿಜ್ಞಾನಿ ; ಹಂಚಿಕೊಂಡಿದ್ದು ಎರಡನ್ನೂ !
DRDO Scientist was in touch with Pakistani lady through calls
DRDO Scientist: ಪಾಕಿಸ್ತಾನ ಭಾರತ ರಕ್ಷಣಾ ವಿಚಾರಗಳನ್ನು ತಿಳಿದುಕೊಳ್ಳಲು ಅಲ್ಲಿನ ಮಹಿಳೆಯನ್ನು ಬಳಸಿಕೊಂಡಿದ್ದಾರೆ. ಡಿಆರ್‌ಡಿಒ (Defence Research and Development Organisation) ವಿಜ್ಞಾನಿ ಪ್ರದೀಪ್ ಕುರುಲ್ಕರ್ ಅವರು ಪಾಕಿಸ್ತಾನದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ, ಪಾಕಿಸ್ತಾನಕ್ಕೆ ಭಾರತದ ರಕ್ಷಣಾ ವಿಚಾರಗಳ ಬಗ್ಗೆ ಮಾಹಿತಿಗಳನ್ನು ನೀಡಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ತಿಳಿಸಿದೆ.
ಇವರಿಬ್ಬರೂ ಜೂನ್ 2022ರಿಂದ ಡಿಸೆಂಬರ್ 2022 ರವರೆಗೆ ಸಂಪರ್ಕದಲ್ಲಿದ್ದರು. ಪ್ರದೀಪ್ ಕುರುಲ್ಕರ್ (DRDO Scientist) ಮತ್ತು ಪಾಕಿಸ್ತಾನದ ಮಹಿಳೆ ವಾಟ್ಸಾಪ್ ಕಾಲ್ ಮತ್ತು ವೀಡಿಯೊ ಕರೆಗಳ ಮೂಲಕ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ. ಮಹಿಳೆ ತಾನು ಯುಕೆ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಎಂದು ಹೇಳಿಕೊಂಡಿದ್ದಳು. ಅಲ್ಲದೆ, ಅಶ್ಲೀಲ ಸಂದೇಶ ಮತ್ತು ವೀಡಿಯೊಗಳನ್ನು ಕಳುಹಿಸುವ ಮೂಲಕ ಪ್ರದೀಪ್ ಕುರುಲ್ಕರ್ ಜತೆಗೆ ಸ್ನೇಹ ಬೆಳೆಸಿಕೊಂಡಿದ್ದಳು. ತನಿಖೆಯ ವೇಳೆ ನಿಜಾಂಶ ಹೊರಬಿದ್ದಿದ್ದು, ಮಹಿಳೆಯ ಐಪಿ ವಿಳಾಸದ ಮೂಲಕ ಆಕೆ ಪಾಕಿಸ್ತಾನದ ಮಹಿಳೆ ಎಂದು ಪತ್ತೆ ಹಚ್ಚಲಾಗಿದೆ.
ಪ್ರದೀಪ್ ಕುರುಲ್ಕರ್ ಜೊತೆ ಸ್ನೇಹದ ನೆಪದಲ್ಲಿ ಆಕೆ ಬ್ರಹ್ಮೋಸ್ ಲಾಂಚರ್, ಡ್ರೋನ್, ಯುಸಿವಿ, ಅಗ್ನಿ ಕ್ಷಿಪಣಿ ಲಾಂಚರ್ ಮತ್ತು ಮಿಲಿಟರಿ ಬ್ರಿಡ್ಜಿಂಗ್ ಸಿಸ್ಟಮ್ ಸೇರಿದಂತೆ ಇನ್ನಿತರೆ ಹಲವು ಮಾಹಿತಿಗಳನ್ನು ಪಡೆಯಲು ಪ್ರಯತ್ನಿಸಿದ್ದಾಳೆ ಎನ್ನಲಾಗಿದೆ.
ಮಹಿಳೆಯ ಮೋಹದ ಬಲೆಗೆ ಬಿದ್ದ ಕುರುಲ್ಕರ್, ಡಿಆರ್‌ಡಿಒದ ವರ್ಗೀಕೃತ ಮತ್ತು ಸೂಕ್ಷ್ಮ ಮಾಹಿತಿಯನ್ನು ತನ್ನ ವೈಯಕ್ತಿಕ ಫೋನ್‌ನಲ್ಲಿ ಸಂಗ್ರಹಿಸಿ ಅದನ್ನು ಆಕೆಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ಎಟಿಎಸ್ ತನ್ನ ತನಿಖಾ ವರದಿಯಲ್ಲಿ ಹೇಳಲಾಗಿದೆ.
ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪುಣೆಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಲ್ಯಾಬ್ನ ನಿರ್ದೇಶಕರಾಗಿದ್ದ ಪ್ರದೀಪ್ ಕುರುಲ್ಕರ್ ವಿರುದ್ಧ ಕಳೆದ ವಾರ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಹಿನ್ನೆಲೆ ಮೇ 3ರಂದು ಅಧಿಕೃತ ರಹಸ್ಯ ಕಾಯಿದೆಯಡಿ ಗೂಢಚರ್ಯೆ ಆರೋಪದ ಮೇಲೆ ಪ್ರದೀಪ್ ಕುರುಲ್ಕರ್ ಅವರನ್ನು ಬಂಧಿಸಲಾಗಿದೆ.