Highway act: ಹೈವೆ ಬದಿಯಲ್ಲಿ ಮನೆ, ಕಟ್ಟಡ ನಿರ್ಮಿಸಿದ್ದೀರಾ? ಸರ್ಕಾರದಿಂದ ಬಂತು ಹೊಸ ರೂಲ್ಸ್, ಖಡಕ್ ಆದೇಶ!!

latest news Highway act New rules from the government for house building near the highway

Highway act: ಕೆಲವರು ಹೆದ್ದಾರಿಗಳ(Highway) ಪಕ್ಕದದಲ್ಲಿ ಕೊಂಚ ದೂರದಲ್ಲಿಯೇ ಮನೆ(House), ಅಂಗಡಿ ಮುಂಗಟ್ಟುಗಳ ಕಟ್ಟಡಗಳನ್ನು ಮಾಡಿಕೊಂಡಿರುತ್ತಾರೆ. ಆದರೆ ಇದು ರಸ್ತೆ ಅಗಲೀಕರಣದ ವೇಳೆ ತೊಂದರೆಯಾಗಾದಾಗ ಅಲ್ಲಿ ಎಂತದೇ ಕಟ್ಟಡವಿರಲಿ ಅದನ್ನು ತೆರವುಗೊಳಿಸಬೇಕಾಗುತ್ತದೆ. ಹೀಗಾಗಿ ಈ ರೀತಿ ಮನೆ, ಕಟ್ಟಡಗಳನ್ನು ನಿರ್ಮಿಸಿಕೊಂಡವರಿಗೆ ಸರ್ಕಾರ ಹೊಸ ರೂಲ್ಸ್ ಜಾರಿಗೊಳಿಸುತ್ತಿದೆ.

 

ಹೌದು, ಸಾಮಾನ್ಯವಾಗಿ ಹೈವೇ (Highway act) ಅನ್ನು ಅಗಲೀಕರಣ ಮಾಡಬೇಕು ಎಂದಾದರೆ ಕಾನೂನು ನಿಯಮಗಳ ಪ್ರಕಾರ ಕೆಲವೊಂದು ಅಂತರಗಳ ನಿಯಮವನ್ನು ಪಾಲನೆ ಮಾಡಬೇಕು ಇಲ್ಲವಾದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಮನೆ ಕಟ್ಟುವುದಕ್ಕಿಂತ (House Building) ಮುಂಚೆ ಸಾಕಷ್ಟು ನಿಯಮಗಳನ್ನು ಪಾಲನೆ ಮಾಡುವುದು ಅತ್ಯಂತ ಪ್ರಮುಖವಾಗಿರುತ್ತದೆ ಇಲ್ಲವಾದಲ್ಲಿ ಮುಂದೆ ಹೋಗಿ ನೀವು ಪಶ್ಚಾತ್ತಾಪ ಪಡಬೇಕಾಗುತ್ತದೆ. ಒಂದು ವೇಳೆ ಈ ರೀತಿಯ ಸಂದರ್ಭದಲ್ಲಿ ಯಾವುದಾದರೂ ತೊಡಕು ಉಂಟಾದರೆ NOC ಪಡೆದುಕೊಳ್ಳಬೇಕಾಗುತ್ತದೆ.

ಎಷ್ಟು ಅಂತರ ಹೊಂದಿರಬೇಕು?
ಉತ್ತರ ಪ್ರದೇಶದ(Uttar pradesh) ಹೆದ್ದಾರಿ ನಿಯಮ 1964ರ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯ 75 ಫೀಟ್ ಹಾಗೂ ಮೇಜರ್ ಡಿಸ್ಟ್ರಿಕ್ಟ್ ರೋಡ್ ನಲ್ಲಿ 65 ಫೀಟ್ ಅಂತರವನ್ನು ಹೊಂದಿರಬೇಕಾಗುತ್ತದೆ. ಆರ್ಡಿನರಿ ಡಿಸ್ಟ್ರಿಕ್ಟ್ ರೋಡ್ ನಲ್ಲಿ 50 ಫೀಟ್ ಅಂತರವನ್ನು ಹೊಂದಿರಬೇಕಾಗುತ್ತದೆ. ಸಾಮಾನ್ಯವಾಗಿ ಯಾವುದೇ ಕಟ್ಟಡ ನಿರ್ಮಾಣ ಕಾರ್ಯಗಳು ಹೆದ್ದಾರಿಯ 75 ಮೀಟರ್ ಆಸು ಪಾಸಿನಲ್ಲಿ ನಡೆಯೋ ಹಾಗಿಲ್ಲ.

ಒಂದು ವೇಳೆ ನೀವು ಇದಕ್ಕಿಂತಲೂ ಕಡಿಮೆ ಅಂತರದ ಅವಕಾಶವನ್ನು ಬಯಸಿದ್ದರೆ NHI ರಾಜಕಾರದ ಮೊರೆ ಹೋಗಬಹುದು. ಆದರೂ ಕೂಡ ಕನಿಷ್ಠಪಕ್ಷ 45 ಮೀಟರ್ ದೂರವನ್ನು ಕಾಪಾಡಿಕೊಳ್ಳಲೇಬೇಕು ಎಂಬುದನ್ನು ಸ್ಪಷ್ಟಪಡಿಸುತ್ತದೆ. 45 ಮೀಟರ್ ಅಳತೆಯಲ್ಲಿ ಕೂಡ ಈ ಏನಾದರೂ ಕಟ್ಟಡವನ್ನು ನಿರ್ಮಿಸಲು ನೀವು ನ್ಯಾಷನಲ್ ಹೈವೇ ಯ ಸಂಪೂರ್ಣ ಅನುಮತಿ ಪಡೆದಿರಲೇಬೇಕು. ಈ ಸಂದರ್ಭದಲ್ಲಿ ಕೂಡ ನೀವು NOC ಪಡೆದುಕೊಂಡ ನಂತರವಷ್ಟೇ, ನಿಮಗೆ ಇಲ್ಲಿ ಕಟ್ಟಡವನ್ನು ಕಟ್ಟಲು ಅವಕಾಶ ಮಾಡಿಕೊಡಲಾಗುತ್ತದೆ.

ಪ್ರತೀ ರಾಜ್ಯಗಳಲ್ಲೂ ಭಿನ್ನ!!
ಅಂದಹಾಗೆ ಪ್ರತಿ ರಾಜ್ಯಗಳಲ್ಲಿ ಕೂಡ ಇವುಗಳ ನಿಯಮ ವಿಭಿನ್ನವಾಗಿರುತ್ತದೆ. ಇದರ ಕುರಿತಂತೆ ನೀವು ನಿಮ್ಮ ನಗರ ಪಾಲಿಕೆಯಲ್ಲಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ನಿಯಮ ಏನು ಹೇಳುತ್ತೆ?
ನಿಯಮಗಳ ಪ್ರಕಾರ ಇರುವಂತಹ ನಿರ್ದಿಷ್ಟ ಅಂತರದಲ್ಲಿ ಮನೆಯನ್ನು ಕಟ್ಟಿದ್ದರೆ ಸಂಸ್ಥೆ ನಿಮ್ಮ ಬಳಿ ಬಂದು ನಿಮ್ಮ ಮನೆ ಅಥವಾ ಅಂಗಡಿಯ Demolition ಗಾಗಿ ನೀವು ಕೇಳುವಷ್ಟು ಹಣವನ್ನು ನೀಡಿ ನಿಮಗೆ ಪರಿಹಾರವನ್ನು ನೀಡುತ್ತದೆ. ಆದರೆ ನೀವು ಒಂದು ವೇಳೆ ನಿರ್ದಿಷ್ಟ ಅಂತರಕ್ಕಿಂತ ಕಡಿಮೆ ಅಂತರದಲ್ಲಿ ಮನೆ ಅಥವಾ ಅಂಗಡಿಯನ್ನು ಕಟ್ಟಿದ್ದರೆ ಆ ಸಂದರ್ಭದಲ್ಲಿ ನೀವು ಪರಿಹಾರ ಪಡೆಯುವುದಕ್ಕೆ ಅರ್ಹರಾಗಿರುವುದಿಲ್ಲ ಹಾಗೂ ಸಂಸ್ಥೆ ಹೇಳಿದೆ ಕೇಳದೆ ನಿಮ್ಮ ಪ್ರಾಪರ್ಟಿಯನ್ನು ನೆಲಕ್ಕೆ ಬೀಳಿಸುವಂತಹ ಅಧಿಕಾರವನ್ನು ಹೊಂದಿರುತ್ತದೆ. ಹೀಗಾಗಿ ಈ ನಿಯಮಗಳ ಕುರಿತಂತೆ ಈಗಲೇ ತಿಳಿದುಕೊಳ್ಳುವ ಮೂಲಕ ಜಾಗೃತೆ ವಹಿಸಿ.

 

ಇದನ್ನು ಓದಿ: Arecanut price: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್!! ರಾಜ್ಯದ ಮಾರುಕಟ್ಟೆಯಲ್ಲಿ ಮತ್ತೆ ಏರಿಕೆಯಾದ ಅಡಿಕೆ ಧಾರಣೆ ..! 

Leave A Reply

Your email address will not be published.