Gruha Lakshmi Scheme: ಇಂತಹ ಮಹಿಳೆಯರಿಗೆ ಮಾತ್ರ ಸಿಗುತ್ತದೆ ‘ಗೃಹಲಕ್ಷ್ಮೀ’ ಹಣ !! ಕೊನೆ ಕ್ಷಣದಲ್ಲಿ ಹೊಸ ಟ್ವಿಸ್ಟ್ ಕೊಟ್ಟ ಸರ್ಕಾರ !

latest news Gruha Lakshmi Scheme Only such women get 'grilahakshmi' money

Gruha Lakshmi Scheme: ಕಾಂಗ್ರೆಸ್ ಸರ್ಕಾರದ(Congress Government) ಪಂಚ ಯೋಜನೆಗಳ ಪೈಕಿ ಒಂದಾಗಿರುವ ಗೃಹಲಕ್ಷ್ಮೀ(Gruha lakshmi) ಯೋಜನೆ ಜಾರಿಗೆ ದಿನಗಣನೆ ಶುರುವಾಗಿದೆ. ಈ ಯೋಜನೆಯಡಿ ಪ್ರತೀ ಮನೆಯ ಮಹಿಳಾ ಯಜಮಾನಿಗೆ 2000ರೂ ಸಿಗಲಿದೆ. ಇದೀಗ ಈ ಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi hebbalkar) ಅವರು ಈ ಯೋಜನೆ ಕುರಿತು ಬಿಗ್ ಅಪ್ಡೇಟ್ ನೀಡಿದ್ದಾರೆ.

ಹೌದು, ಜೂನ್ 15ರಿಂದ Gruha Lakshmi Schemeಖೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಬೇಕಿತ್ತು ಆದರೆ ಕಾರಣಾಂತರಗಳಿಂದ ಮಹಿಳೆಯರಿಗೆ ಎರಡು ಸಾವಿರ ರೂಪಾಯಿಗಳನ್ನು ಕೊಡುವ ಈ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ ಆದರೆ ಜುಲೈ 14 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi hebbalkar) ಹೇಳಿದ್ದಾರೆ. ಅಲ್ಲದೆ ಈ ಯೋಜನೆಯ ಕೆಲವು ಗೊಂದಲಗಳಿಗೆ ಅವರು ತೆರೆ ಎಳೆದು ಸಿಹಿ ಸುದ್ದಿ ನೀಡಿದ್ದಾರೆ.

ಅಂದಹಾಗೆ ಈ ಯೋಜನೆಯ ಅಡಿಯಲ್ಲಿ ಮನೆಯಲ್ಲಿ ಇರುವ ಯಾವ ಮಹಿಳೆಗೆ ಹಣ ಸಿಗುತ್ತದೆ ಎಂಬ ಅನುಮಾನ ಎಲ್ಲರಲ್ಲಿತ್ತು. ಯಾಕೆಂದರೆ ಕೆಲವು ಮನೆಯಲ್ಲಿ ಅತ್ತೆ, ಸೊಸೆ, ಅಕ್ಕ, ತಂಗಿ, ನಾದಿನಿ, ಅತ್ತಿಗೆ ಎಂದು ಹಲವು ಮಹಿಳೆಯರು ಇರುತ್ತಾರೆ. ಇವರಲ್ಲಿ 2000 ರೂ ಯಾರಿಗೆ ಸಿಗುತ್ತದೆ ಎಂಬ ಪ್ರಶ್ನೆ ಹಲವರಲ್ಲಿತ್ತು. ಆದರೀಗ ಸಚಿವೆ ಈ ಗೊಂದಲಗಳಿಗೆ ಪರಿಹಾರ ನೀಡಿ ‘ಎಪಿಎಲ್(APL) ಮತ್ತು ಬಿಪಿಎಲ್ ಕಾರ್ಡ್ ಗಳಲ್ಲಿ ಯಜಮಾನಿ ಸ್ಥಾನದಲ್ಲಿ ನಮೂದಿಸಿದ ಪ್ರತಿಯೊಬ್ಬರು ಗೃಹಲಕ್ಷ್ಮಿ ಯೋಜನೆಗೆ ಅರ್ಹರು. ಇವರಿಗೆ 2000 ರೂ ಸಿಗುತ್ತದೆ’ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ ಗೃಹಲಕ್ಷ್ಮಿ ಯೋಜನೆಗೆ ಪತಿ ಹಾಗೂ ಪತ್ನಿ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಮಾತ್ರ ಸಾಕು. ಪಡಿತರ ಚೀಟಿ ಕೂಡ ಕೇಳುವುದಿಲ್ಲ. ಆಧಾರ್ ಕಾರ್ಡ್ ನಲ್ಲಿ ಜೋಡಣೆಯಾಗಿರುವ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು. ಹಣ ಸಂದಾಯವಾದ ನಂತರ ಮೊಬೈಲ್ ಸಂಖ್ಯೆಗೆ ಧ್ವನಿ ಸಂದೇಶ ಕೂಡ ಬರಲಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಮುಖ್ಯವಾಗಿ “ಆಧಾರ್ ಕಾರ್ಡ್(Adhar card) ಜೋಡಣೆ ಇರುವ ಬ್ಯಾಂಕ್ ಖಾತೆಯಿಂದ ಲೋನ್ ಪಡೆದಿದ್ದಲ್ಲಿ ಗೃಹಲಕ್ಷ್ಮಿ ಹಣ ಇಎಂಐಗೆ(EMI) ಕಡಿತ ಮಾಡಿಕೊಳ್ಳುತ್ತಾರೆ ಎಂಬ ಆತಂಕವಿದ್ದಲ್ಲಿ ಆಧಾರ್ ಜೋಡಣೆ ಆಗದ ಬ್ಯಾಂಕ್ ಖಾತೆಯ ಪಾಸ್ ಬುಕ್ ಜೆರಾಕ್ಸ್ ಪ್ರತಿ ನೀಡಲು ಅವಕಾಶ ನೀಡಲಾಗಿದೆ. ಇಂತಹ ಖಾತೆಗೂ ಹಣ ಹಾಕಲಾಗುವುದು. ಹೀಗಾಗಿ ಆಧಾರ್ ಕಾರ್ಡ್ ಗೆ ಜೋಡಣೆ ಆಗದ ಬ್ಯಾಂಕ್ ಖಾತೆಗೆ ಹಣ ಹಾಕಲು ಮನವಿ ಮಾಡಿದಲ್ಲಿ ಅದಕ್ಕೂ ಅವಕಾಶವಿದೆ ಎಂದು ತಿಳಿಸಿದ್ದಾರೆ.

 

ಇದನ್ನು ಓದಿ: Kumaraswami Pen Drive: ಪೆನ್ ಡ್ರೈವ್ ಪರಮ ರಹಸ್ಯ ಏನು ?, ಕುಮಾರ ಸ್ವಾಮಿ ತೋರಿಸಿದ ಪೆನ್ ಡ್ರೈವ್ ನಲ್ಲಿ ಏನಿದೆ ? 

Leave A Reply

Your email address will not be published.