Bangalore: ನಾನು ಆ ಪೂಜಾರಿ ಅಲ್ಲ ಈ ಪೂಜಾರಿ ಎಂದ ಕೋಟ

latest news Bangalore news Kota Srinivas poojary said that I am not that poojary but this poojary

Bangalore: ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಬಾಯಿತಪ್ಪಿನಿಂದ ಪ್ರಸ್ತಾವವಾದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಹೆಸರು ಉಲ್ಲೇಖವಾದ ಬಳಿಕ ಆ ಕುರಿತು ಚರ್ಚೆಗೆ ಪರಿಷತ್‌ ವೇದಿಕೆಯಾಯಿತು.

 

ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್ ಅವರು, ರಾಜ್ಯಪಾಲರ ಭಾಷಣಕ್ಕೆ ವಂದನಾರ್ಪಣೆ ಸಲ್ಲಿಸುವ ವೇಳೆ ಬಿಜೆಪಿಯ ಕೋಟಿ ಶ್ರೀನಿವಾಸ ಪೂಜಾರಿ ಮಧ್ಯಪ್ರವೇಶಿಸಲು ಮುಂದಾದರು. ಆಗ ವೆಂಕಟೇಶ್, ‘ಸಾಕು ಕುಳಿತುಕೊಳ್ಳಿ. ಜನಾರ್ದನ ಪೂಜಾರಿ ಅವರೇ’ ಎಂದು ಹೇಳಿದರು.

ಆಗ ‘ನಾನು ಶ್ರೀನಿವಾಸ ಪೂಜಾರಿ, ಜನಾರ್ದನ ಪೂಜಾರಿ ನಿಮ್ಮ ಪಕ್ಷದಲ್ಲಿದ್ದರು. ಸಾಲ ಮೇಳದ ಮೂಲಕ ಬಡವರಿಗೆ ಬ್ಯಾಂಕಿನ ಬಾಗಿಲು ತೆರೆದವರು. ಆಗ ಅದನ್ನು ಪಕ್ಷಾತೀತವಾಗಿ ಸ್ವಾಗತಿಸಿದವರು ನಾವು’ ಎಂದರು.

ಆಗ ಯು.ಬಿ. ವೆಂಕಟೇಶ್‌ ಅವರು, ಜನಾರ್ಧನ ಪೂಜಾರಿಯವರು ಬಡವರಿಗೂ ಬ್ಯಾಂಕ್‌ನಲ್ಲಿ ಸಾಲ ಸಿಗಬೇಕು ಎಂದು ಸಾಲ ಮೇಳ ಮಾಡಿದರೆ, ಇದೇ ಬಿಜೆಪಿಯವರು ಬ್ಯಾಂಕ್‌ಗಳು ದಿವಾಳಿಯಾಗುತ್ತವೆ. ಅರಾಜಕತೆಗೆ ಸೃಷ್ಟಿಯಾಗುತ್ತದೆ’ ಎಂದು ವಿರೋಧಿಸಿದ್ದರು ಎಂದರು.

ಈ ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

 

ಇದನ್ನು ಓದಿ: Kumaraswami Pen Drive: ಪೆನ್ ಡ್ರೈವ್ ಪರಮ ರಹಸ್ಯ ಏನು ?, ಕುಮಾರ ಸ್ವಾಮಿ ತೋರಿಸಿದ ಪೆನ್ ಡ್ರೈವ್ ನಲ್ಲಿ ಏನಿದೆ ? 

Leave A Reply

Your email address will not be published.