ಟ್ರಕ್’ಗಳಲ್ಲಿ ‘AC ಕ್ಯಾಬಿನ್’ ಕಡ್ಡಾಯಕ್ಕೆ ಜೈ ಎಂದ ಕೇಂದ್ರ, ಈ ದಿನದಿಂದಲೇ ಜಾರಿಗೆ ಆದೇಶ !

AC cabin : AC cabinಇನ್ನು ಮುಂದೆ ಹಕ್ಕುಗಳ ಕ್ಯಾಬಿನ್ ಗಳಲ್ಲಿ ಎಸಿ (AC cabin)ಅಂದರೆ ಹವಾ ನಿಯಂತ್ರಣ ಕಡ್ಡಾಯವಾಗಿದೆ. ಟ್ರಕ್’ಗಳ ಕ್ಯಾಬಿನ್’ಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಯನ್ನ ( ಏರ್ condition) ಸ್ಥಾಪಿಸುವುದನ್ನು ಕಡ್ಡಾಯಗೊಳಿಸುವ ಕರಡು ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಇಂದು ಅನುಮೋದಿಸಿದೆ.

 

ಈ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮಾಹಿತಿ ನೀಡಿದ್ದು, ಎನ್ 2 ಮತ್ತು ಎನ್ 3 ವರ್ಗಗಳಿಗೆ ಸೇರಿದ ಎಲ್ಲಾ ಟ್ರಕ್ ಗಳ ಕ್ಯಾಬಿನ್ ಗಳಲ್ಲಿ ಹವಾ ನಿಯಂತ್ರಣ ವ್ಯವಸ್ಥೆ ಕಡ್ಡಾಯವಾಗಿದೆ. ರಸ್ತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಟ್ರಕ್ ಚಾಲಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದಿದ್ದಾರೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಯವರು. ಕೇಂದ್ರ ಸರಕಾರದ ಈ ನಿರ್ಧಾರವು ಟ್ರಕ್ ಚಾಲಕರಿಗೆ ಆರಾಮದಾಯಕ ಕೆಲಸದ ಪರಿಸ್ಥಿತಿಗಳನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಆ ಮೂಲಕ ದೂರದ ಪ್ರಯಾಣ ನಡೆಸುವ ಟ್ರಕ್ ಚಾಲಕರು ಬಹುಬೇಗ ಸುಸ್ತಾಗದೆ ಅವರ ಕೆಲಸದ ದಕ್ಷತೆ ಈ ಮೂಲಕ ಹೆಚ್ಚಲಿದೆ. ಚಾಲಕರ ಆಯಾಸ ಕೂಡಾ ಪರಿಹಾರ ಆಗಲಿದ್ದು, ರಸ್ತೆ ಸುರಕ್ಷತೆಯಲ್ಲಿ ಇದು ಬಹುದೊಡ್ಡ ಮೈಲಿಗಲ್ಲಾಗಿ ಪರಿಣಮಿಸಲಿದೆ ಎಂದಿದ್ದಾರೆ ನಿತಿನ್ ಗಡ್ಕರಿ.

Leave A Reply

Your email address will not be published.