Harley-Davidson X440 : ಭಾರತಕ್ಕೆ Harley Davidson ಭರ್ಜರಿ ಎಂಟ್ರಿ ! ರಾಜ ರಸ್ತೆಗಳಲ್ಲಿ ಎನ್ಫೀಲ್ಡ್ ಬುಲೆಟ್ Vs ಹಾರ್ಲೆ ಡೇವಿಡ್ ಸನ್ ಸ್ಟಾರ್ ವಾರ್ ಶುರು !
latest news technology Harley-Davidson X440 The bike model has been launched in India
Harley-Davidson X440 : ಅಮೆರಿಕ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ತನ್ನ ಬಹುನೀರಿಕ್ಷಿತ ಹಾರ್ಲೆ-ಡೇವಿಡ್ಸನ್ X440 (Harley-Davidson X440) ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೀರೋ ಮೋಟೋಕಾರ್ಪ್ ಸಹಯೋಗದೊಂದಿಗೆ ಈ ಬೈಕ್ ಅಭಿವೃದ್ಧಿಪಡಿಸಲಾಗಿದೆ. ಹೊಸ ಬೈಕ್ Harley-Davidson X440 ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2.29 ಲಕ್ಷ ಆರಂಭಿಕ ಬೆಲೆ ಹೊಂದಿದೆ.
ಹಾರ್ಲೆ ಡೇವಿಡ್ಸನ್ ಎಕ್ಸ್440 ಬೈಕ್ ಮಾದರಿಯು ಡೆನಿಮ್, ವಿವಿಡ್ ಮತ್ತು ಎಸ್ ಎಂಬ ಮೂರು ಪ್ರಮುಖ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಡೆನಿಮ್ ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ರೂ. 2.29 ಲಕ್ಷ ಬೆಲೆ ಹೊಂದಿದೆ. ವಿವಿಡ್ ರೂ. 2.49 ಲಕ್ಷ ಮತ್ತು ಎಸ್ ವೆರಿಯೆಂಟ್ ರೂ. 2.69 ಲಕ್ಷ ಬೆಲೆ ಹೊಂದಿದೆ. ಇದರಲ್ಲಿರುವ ಮಸ್ಟರ್ಡ್ ಡೆನಿಮ್, ಮೆಟಾಲಿಕ್ ಡಾರ್ಕ್ ಸಿಲ್ವರ್, ಮೆಟಾಲಿಕ್ ಥಿಕ್ ಸಿಲ್ವರ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿವೆ.
ಈ ಹೊಸ ಬೈಕಿನಲ್ಲಿ LED ಲೈಟಿಂಗ್, ಆಂಬಿಯೆಂಟ್ ಲೈಟ್ ಸೆನ್ಸರ್‌ನೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಹೆಚ್ಚಿನ ಫೀಚರ್ಸ್ ಗಳನ್ನು ಹೊಂದಿವೆ. ಇತರ ಗಮನಾರ್ಹ ಫೀಚರ್ಸ್ ಗಳು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್, ಮ್ಯೂಸಿಕ್ ಕಂಟ್ರೋಲ್ ಮತ್ತು ಗೇರ್ ಸ್ಥಾನವನ್ನು ಒಳಗೊಂಡಿವೆ. ಹೊಸ ಬೈಕ್ 190.5 ಕೆಜಿ ತೂಕ ಹೊಂದಿದೆ.
ಹಾರ್ಲೆ-ಡೇವಿಡ್ಸನ್ X440 ಬೈಕ್ ನ್ಯೂ-ರೆಟ್ರೊ ಲುಕ್ ನೀಡಲು ವೃತ್ತಾಕಾರದ ವಿನ್ಯಾಸದ ಅಂಶಗಳನ್ನು ಒಳಗೊಂಡಿದೆ. ಈ ಹೊಸ ಹಾರ್ಲೆ-ಡೇವಿಡ್ಸನ್ X440ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿವೆ. ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್, 440cc ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 27 bhp ಪವರ್ ಮತ್ತು 38 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. X440ನಲ್ಲಿ ಬ್ರೇಕಿಂಗ್ ಕರ್ತವ್ಯಗಳನ್ನು 320 mm ಮುಂಭಾಗದ ಡಿಸ್ಕ್ ಮತ್ತು 240 mm ಹಿಂಭಾಗದ ಡಿಸ್ಕ್ ನಿರ್ವಹಿಸುತ್ತದೆ.
ಕಳ್ಳತನದ ಎಚ್ಚರಿಕೆ, ಬ್ಯಾಟರಿ ತೆಗೆಯುವ ಎಚ್ಚರಿಕೆ, ಜಿಯೋಫೆನ್ಸ್ ಎಚ್ಚರಿಕೆ ಮತ್ತು ದೂರಸ್ಥ ನಿಶ್ಚಲತೆ, ಇಗ್ನಿಷನ್ ಅಲರ್ಟ್, ಪ್ಯಾನಿಕ್ ಅಲರ್ಟ್, ಕ್ರ್ಯಾಶ್ ಅಲರ್ಟ್, ಟಾಪ್ಲ್ ಅಲರ್ಟ್ ಮತ್ತು ಲೋ ಫ್ಯುಯಲ್ ಅಲರ್ಟ್ ನಂತಹ ಸುರಕ್ಷತೆಯ ವೈಶಿಷ್ಟ್ಯಗಳಿವೆ. ಅತಿ ವೇಗ, ಟ್ರಿಪ್ ವಿಶ್ಲೇಷಣೆ ಡ್ರೈವಿಂಗ್ ಸ್ಕೋರ್ ಗಳು ಇದರಲ್ಲಿವೆ. ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕರೆಎಚ್ಚರಿಕೆಗಳು ಇವೆ.
ಇದನ್ನು ಓದಿ: ICAI Exam result 2023: ICAI ಫೈನಲ್ ಮತ್ತು ಇಂಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟ: ರಿಸಲ್ಟ್ ಈ ರೀತಿ ಚೆಕ್ ಮಾಡಿ !