Revenue department: ಸರ್ಕಾರಿ ಜಾಗದಲ್ಲಿ ಹೊಲ, ಗದ್ದೆ, ಮನೆಗಳನ್ನು ಹೊಂದಿದ್ದೀರಾ? ಹಾಗಿದ್ರೆ ಸರ್ಕಾರದಿಂದ ಬಂತು ಹೊಸ ರೂಲ್ಸ್ !!

latest news Revenue department New rules from the government if there is land and house in government land

Revenue department: ಸರ್ಕಾರಿ ಜಮೀನಿನಲ್ಲಿ(Government land)ಮನೆ ಕಟ್ಟಿಕೊಂಡು, ಉಳುಮೆ ಮಾಡಿಕೊಂಡು, ಹೊಲ-ಗದ್ದೆ ನೋಡಿಕೊಂಡಿರುವವರಿಗೆ ರಾಜ್ಯ ಸರ್ಕಾರ ಹೊಸ ನಿಯಮ ತಂದಿದ್ದು, ಜೊತೆಗೆ ಸಿಹಿ ಸುದ್ದಿಯನ್ನು ಕೊಟ್ಟಿದೆ.

ರಾಜ್ಯಸರ್ಕಾರವೀಗ(State Government )ತಾನು ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಗ್ಯಾರಂಟಿಗಳನ್ನು(5 Guarantys)ಯೋಜನೆಗಳನ್ನು ಅನುಷ್ಠಾನಗೊಳಿಸಲು ಹರಸಾಹಸ ಪಡುತ್ತಿದೆ. ಆದರೆ ಈ ನಡುವೆಯೂ ಸಿದ್ದರಾಮಯ್ಯ ಗೌರ್ಮೆಂಟ್(Government) ಕೆಲವು ಜನಪರ ಅನುಕೂಲವಾಗುವಂತಹ ಹಾಗೂ ಜನಪರವಾದ ಕೆಲವಾದ ಯೋಜನೆಗಳನ್ನು, ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವ, ಹೊಲ ಗದ್ದೆಗಳನ್ನು ಮಾಡಿಕೊಂಡಿರುವಂತವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ.

ಹೌದು, ಸಾಕಷ್ಟು ವರ್ಷಗಳಿಂದ ಕೆಲವು ಬಡವರು ಹಾಗೂ ರೈತರು ಸರ್ಕಾರಿ ಜಾಗಗಳಲ್ಲಿ (Govt Land) ಅನಧಿಕೃತವಾಗಿ ಉಳುಮೆ ಮಾಡುತ್ತಿರುವಂತಹ ಹಾಗೂ ಇನ್ನಿತರ ಚಟುವಟಿಕೆಗಳನ್ನು ಮಾಡುತ್ತಿದ್ದು, ಸಾಕಷ್ಟು ವರ್ಷಗಳಿಂದ ಈ ಜಾಗವನ್ನು ಅವರೇ ನೋಡಿಕೊಳ್ಳುತ್ತಿದ್ದರೆ ಅದನ್ನು ಸುಲಭದಲ್ಲಿ ತಮ್ಮ ಹೆಸರಿಗೆ ಮಾಡಿಕೊಳ್ಳಬಹುದು. ಅಟದರೆ ಪಹಣಿಯನ್ನು ತಮ್ಮ ಹೆಸರಿಗೆ ಮಾಡಿಸಲು ಅಲ್ಲಿ ಇಲ್ಲಿ ಓಡಾಡುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಸುಲಭ ಮಾರ್ಗವನ್ನು ನೀಡಿದ್ದು, ಫಾರಂ ನಂಬರ್ 57ರ ಅರ್ಜಿಯನ್ನು(57 application) ಸಲ್ಲಿಸುವ ಪ್ರಕಾರ ಅದನ್ನು ಅವರ ಹೆಸರಿಗೆ ಮಾಡಿಸಿಕೊಳ್ಳುವಂತಹ ಅವಕಾಶವನ್ನು ನೀಡಲು ಚಿಂತನೆ ನಡೆಸಿದೆ.

ಇಷ್ಟೇ ಅಲ್ಲದೆ ನಮೂನೆ 57 ರಲ್ಲಿ ಕೂಡ ಇಂತಹ ಅಕ್ರಮ ಕೃಷಿ ಭೂಮಿಗಳನ್ನು ಅವರ ಹೆಸರಿಗೆ ಸಕ್ರಮವಾಗಿ ಪಹಣಿ ಮಾಡಿಸಿಕೊಳ್ಳಲು ಕೂಡ ರಾಜ್ಯ ಸರ್ಕಾರ ಅವಧಿಯನ್ನು ವಿಸ್ತರಿಸಿದೆ. ಹೀಗಾಗಿ ನಿಮ್ಮ ಹತ್ತಿರದ ಸರ್ಕಾರಿ ಕಚೇರಿಗಳಿಗೆ ಹೋಗಿ ಇದರ ಕುರಿತಂತೆ ಅಧಿಕೃತ ಮಾಹಿತಿಗಳನ್ನು ಪಡೆದುಕೊಂಡು ಅಕ್ರಮವಾಗಿರುವ ತಮ್ಮ ಕೃಷಿ ಭೂಮಿಯನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಬಹುದಾಗಿದೆ.

ಅಂದಹಾಗೆ ಕರ್ನಾಟಕ ಸರ್ಕಾರವು ಸರ್ಕಾರಿ ಜಾಗ (Govt Land) ದಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಸಾಗುವಳಿ ನಡೆಸುತ್ತಿರುವವರಿಗೆ ಆ ಜಾಗವನ್ನು ಅಕ್ರಮದಿಂದ ಸಕ್ರಮ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂಬುದಾಗಿ ಹೇಳಿದೆ. ಕರ್ನಾಟಕ ಭೂ ಕಂದಾಯ(Revenue department) ಕಾಯ್ದೆ 1964ರ 94 ಎ ಪ್ರಕಾರ ಅವಕಾಶವನ್ನು ನೀಡುವ ಕುರಿತಂತೆ ಈಗಾಗಲೇ ಪ್ರಕ್ರಿಯೆಗಳು ಪ್ರಾರಂಭವಾಗಿವೆ.

ಈ ಹಿನ್ನೆಲೆಯಲ್ಲಿ ಯಾರ್ಯಾರು ಸರ್ಕಾರಿ ಜಾಗಗಳಲ್ಲಿ ಮನೆ-ಮಠಗಳನ್ನು ಕಟ್ಟಿಕೊಂಡು, ಜಮೀನು ಮಾಡಿಕೊಂಡು, ಹೊಲ ಗದ್ದೆ ನೋಡಿಕೊಂಡಿದ್ದೀರೋ, ಅವರೆಲ್ಲರೂ ಇದೀಗ ಸರ್ಕಾರ ನೀಡಿರುವ ಈ ಸುವರ್ಣಾವಕಾಶಗಳನ್ನು ಕೂಡಲೇ ಬಳಸಿಕೊಂಡು ಪಹಣಿಯನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಬಹುದು.

 

ಇದನ್ನು ಓದಿ: Tomato Price: ಇನ್ಮುಂದೆ ಪಡಿತರ ಕೇಂದ್ರಗಳಲ್ಲಿ ಸಿಗಲಿದೆ ಟೊಮ್ಯಾಟೋ ; ರಾಜ್ಯ ಸರ್ಕಾರದಿಂದ ಹೊಸ ಆದೇಶ, ಇಂದಿನಿಂದಲೇ ಜಾರಿ ! 

Leave A Reply

Your email address will not be published.