

Tomato Price: ದೇಶದಲ್ಲಿ ತರಕಾರಿ ಬೆಲೆ ಭಾರೀ ಏರಿಕೆ ಕಂಡಿದೆ. ಜನಸಾಮಾನ್ಯರು ತರಕಾರಿ ಕೊಳ್ಳಲು ಮೀನಾಮೇಷ ಎಣಿಸುವಂತಾಗಿದೆ. ಅದರಲ್ಲೂ ದೇಶದ ಹಲವೆಡೆ ಟೊಮೆಟೊ ದರ (Tomato Price) ಕೆ.ಜಿಗೆ ₹100- 150 ತಲುಪಿದೆ. ಸದ್ಯ ಬೆಲೆ ಏರಿಕೆ ಹಿನ್ನೆಲೆ ಇನ್ಮುಂದೆ ಪಡಿತರ ಕೇಂದ್ರಗಳಲ್ಲಿ ಟೊಮ್ಯಾಟೋ ಸಿಗಲಿದೆ.
ಹೌದು, ಇಂದಿನಿಂದ ಪಡಿತರ ಅಂಗಡಿಗಳಲ್ಲಿ ಕೆ.ಜಿಗೆ ₹ 60ರಂತೆ ಟೊಮೆಟೊಗಳು ಸಿಗುತ್ತವೆ. ಅರ್ಧ ದರದಲ್ಲಿ ಸರ್ಕಾರ ಟೊಮೆಟೊ ಮಾರಾಟ ಮಾಡಲು ಪ್ರಾರಂಭಿಸಿದೆ.
ತಮಿಳುನಾಡು ಸರ್ಕಾರ ಪಡಿತರ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೊ ವಿತರಣೆ ಆರಂಭಿಸಿದೆ. ಕೆ.ಜಿಗೆ ₹ 60ಯಂತೆ ಟೊಮೆಟೊ ಮಾರಾಟ ಮಾಡಲಾಗುತ್ತಿದೆ. ಜನರು ಪಡಿತರ ಕೆಂದ್ರದಿಂದಲೇ ಟೊಮೆಟೋ ಖರೀದಿಸುತ್ತಿದ್ದಾರೆ.
ಮಳೆಯ ಕಾರಣದಿಂದ ಟೊಮ್ಯಾಟೋ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿದ್ದರಿಂದ ಬೆಲೆಯಲ್ಲಿ ಹೆಚ್ಚಳವಾಗಿದೆ ಎನ್ನಲಾಗಿದೆ. ಅಲ್ಲದೆ, ಹವಾಮಾನ ವೈಪರೀತ್ಯ, ರೋಗ ಸೇರಿ ಹಲವು ಕಾರಣಗಳಿಂದಾಗಿ ಟೊಮೆಟೊ ದರ ನೂರರ ಗಡಿ ದಾಟಿದೆ.
ಇದನ್ನು ಓದಿ: Important information: ಶಾಲಾ ಮಕ್ಕಳ ಬ್ಯಾಗ್ ಹೊರೆ ಇನ್ನಿಲ್ಲ: ಸಂಭ್ರಮ ಶನಿವಾರದ ಆಚರಣೆ ಬಗ್ಗೆ ಮಹತ್ವದ ಸುತ್ತೋಲೆ ಪ್ರಕಟ !













