MadhyaPradesh: ಮಾನಸಿಕ ಅಸ್ವಸ್ಥನ ಮುಖದ ಮೇಲೆ ಮೂತ್ರ ವಿಸರ್ಜಿಸಿದ ಬಿಜೆಪಿ ಕಾರ್ಯಕರ್ತ!
latest news MadhyaPradesh news BJP activist urinated on the face of a mentally ill person
MadhyaPradesh: ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಬುಡಕಟ್ಟು ಜನಾಂಗದ ಮಾನಸಿಕ ಅಸ್ವಸ್ಥನ ಮೇಲೆ ಬಿಜೆಪಿ ಕಾರ್ಯಕರ್ತನೊಬ್ಬ ಮಧ್ಯದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ (MadhyaPradesh) ಬೆಳಕಿಗೆ ಬಂದಿದೆ. ಆರೋಪಿಯನ್ನು ಕುಬ್ರಿ ಗ್ರಾಮದ ನಿವಾಸಿ ಪ್ರವೇಶ್ ಶುಕ್ಲಾ ಎಂದು ಗುರುತಿಸಲಾಗಿದೆ. ಈತ ಸಿಧಿ ಜಿಲ್ಲೆಯ ಬಿಜೆಪಿ ಶಾಸಕ ಪಂಡಿತ್ ಕೇದಾರನಾಥ್ ಶುಕ್ಲಾ ಅವರ ಬೆಂಬಲಿಗ ಹಾಗೂ ಪ್ರತಿನಿಧಿ ಎಂದು ಹೇಳಲಾಗಿದೆ. ದುಷ್ಕರ್ಮಿಯ ಈ ಹೇಯ ಕೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ(social media)ವೈರಲ್ ಆಗಿದೆ.
ಮಾಹಿತಿಯ ಪ್ರಕಾರ, ಒಂಬತ್ತು ದಿನಗಳ ಹಿಂದೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಕುಬ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋದಲ್ಲಿ ದುಷ್ಕರ್ಮಿ ಪ್ರವೇಶ್ ಶುಕ್ಲಾ ಕುಡಿದ ಮತ್ತಿನಲ್ಲಿದ್ದಂತೆ ಕಂಡು ಬರುತ್ತದೆ ಹಾಗೂ ಬಾಯಿಯಲ್ಲಿ ಸಿಗರೇಟು ಹಿಡಿದಿದ್ದಾರೆ. ಅಲ್ಲೇ ಕುಳಿತಿದ್ದಂತಹ ಅಸಾಹಾಯಕ ವ್ಯಕ್ತಿಯ ಮೇಲೆ ಕರುಣೆಯಿಲ್ಲದೆ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬಂದಿದೆ. ಮೂಲಗಳ ಪ್ರಕಾರ, ಶೋಷಿತ ವ್ಯಕ್ತಿಯು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು ಇವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದಿ ಎಸ್ ಪಿ ರವೀಂದ್ರವರ್ಮ ಅವರು ಟ್ವೀಟ್ ಮಾಡಿದ್ದು ಆರೋಪಿ ಶುಕ್ಲಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (shivaraj Singh Chowhan) ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪು ಯಾರೇ ಮಾಡಿರಲಿ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಈ ರೀತಿಯ ದುರ್ವತನೆ ತೋರಿದ ವ್ಯಕ್ತಿಯ ವಿರುದ್ಧ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಎನ್‌ಎಸ್‌ಎ(NSA) (ರಾಷ್ಟ್ರೀಯ ಭದ್ರತಾ ಕಾಯ್ದೆ) ಗೆ ಸೂಚನೆ ನೀಡಿದ್ದೇನೆ. ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಶಾಸಕ ಕೇದಾರ್‌ನಾಥ್ ಶುಕ್ಲಾ ಮಾತನಾಡಿದ್ದು, ಪ್ರವೇಶ್ ನನ್ನ ಬೆಂಬಲಿಗನೂ ಅಲ್ಲ, ಪ್ರತಿನಿಧಿಯೂ ಅಲ್ಲ. ಅದಲ್ಲದೆ, ಈತ ಬಿಜೆಪಿ ಪಕ್ಷದ ಕಾರ್ಯಕರ್ತನೂ ಅಲ್ಲ. ಆದರೆ, ನನಗೆ ಪರ್ವೇಶ್ ಶುಕ್ಲಾ ಅವರ ಪರಿಚಯವಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.
ಮಧ್ಯಪ್ರದೇಶ ಯುವ ಕಾಂಗ್ರೆಸ್ (congress) ರಾಜ್ಯಾಧ್ಯಕ್ಷ ಡಾ.ವಿಕ್ರಾಂತ್ ಭೂರಿಯಾ(Dr.Vikranth Bhuriya) ಮಾತನಾಡಿದ್ದು, ಶಿವರಾಜ್ ಸಿಂಗ್ ಚೌಹಾಣ್ ಅವರ ಸರ್ಕಾರದಲ್ಲಿ ಆದಿವಾಸಿಗಳ ಮೇಲೆ ಗರಿಷ್ಠ ದೌರ್ಜನ್ಯ ನಡೆದಿದೆ. ಈ ದೌರ್ಜನ್ಯದಲ್ಲಿ ಬಿಜೆಪಿ ನಾಯಕರೇ
ಹೆಚ್ಚಾಗಿ ಭಾಗಿಯಾಗಿರುವುದು. ಈ ಕೃತ್ಯವು ಆದಿವಾಸಿಗಳ ಬಗ್ಗೆ ಬಿಜೆಪಿಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕೆ ಮಾಡಿದ್ದಾರೆ.
ಅಲ್ಲದೆ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್‌ನಾಥ್ (Kamalnath) ಘಟನೆಗೆ ಸಂಬಂಧಿಸಿದಂತೆ “ಆದಿವಾಸಿಗಳ ದೌರ್ಜನ್ಯದಲ್ಲಿ ಮಧ್ಯಪ್ರದೇಶ ಈಗಾಗಲೇ ಮುಂಚೂಣಿಯಲ್ಲಿದೆ. ಈ ಘಟನೆ ಇಡೀ ಮಧ್ಯಪ್ರದೇಶವನ್ನೇ(MadhyaPradesh) ತಲೆತಗ್ಗಿಸುವಂತೆ ಮಾಡಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ಮಧ್ಯಪ್ರದೇಶದಲ್ಲಿ ಆದಿವಾಸಿಗಳ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಬೇಕು. ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Caste Hindu Pravesh Shukla pissed on Tribal youth. This incident happened in Madhya Pradesh. pic.twitter.com/68Re6CvsEz
— The Dalit Voice (@ambedkariteIND) July 4, 2023
ಇದನ್ನು ಓದಿ: Lijjat Papad: ಹರಟೆಯ ಜತೆ ಶುರುವಾದ ಹಪ್ಪಳ ಮತ್ತು ಇವತ್ತಿನ 1600 ಕೋಟಿಯ ಬಿಸ್ನೆಸ್, ಬಂಡವಾಳ ಜಸ್ಟ್ 80 ರೂಪಾಯಿ !