Aadhaar – Pan card : ಆಧಾರ್-ಪಾನ್ ವಿಚಾರವಾಗಿ ಬಂತು ಮತ್ತೊಂದು ಹೊಸ ರೂಲ್ಸ್ !! ಕೊನೇ ಕ್ಷಣದಲ್ಲಿ ಟ್ವಿಸ್ಟ್ ಕೊಟ್ಟ ಕೇಂದ್ರ !!

Latest national news pan Aadhar Card update new rules regarding Aadhar PAN card across the country

Aadhaar – Pan card: ಪ್ಯಾನ್ ಕಾರ್ಡನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ (Aadhaar-PAN Link) ಮಾಡಲು ಜೂನ್ 30, 2023ರ ವರೆಗೆ ಗಡುವು ನೀಡಲಾಗಿತ್ತು. ಆದರೀಗ ಈ ಗಡುವು ಮುಗಿದಿದೆ. ಈ ಬೆನ್ನಲ್ಲೇ ಸರ್ಕಾರ ಈ ಆಧಾರ್- ಪಾನ್ ವಿಚಾರದಲ್ಲಿ ಹೊಸ ರೂಲ್ಸ್ ನೀಡಿದೆ.

ಹೌದು, ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್( Aadhaar – Pan card) ಲಿಂಕ್ ಮಾಡಿಸಲು ಸರ್ಕಾರವು(Government) ಕೊಟ್ಟ ಕೊನೆಯ ದಿನಾಂಕ ಮುಗಿದಿದೆ. ಒಬ್ಬ ವ್ಯಕ್ತಿಯು ಇನ್ನೂ ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಅವರ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ. ಪಾನ್(Pan) ನಿಷ್ಕ್ರಿಯಗೊಂಡರೆ, ನೀವು ಇದರ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾದ ಕೆಲವು ಸೇವೆಗಳನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಆದರೆ ನೀವೀಗ ದಂಡ ಪಾವತಿಸಿ ಲಿಂಕ್ ಮಾಡಬಹುದು. ಆದರೂ ಕೂಡ ಈ ಕುರಿತು ಸರ್ಕಾರವು ಕೆಲವು ರೂಪುರೇಷೆಗಳನ್ನು ನೀಡಿದೆ.

ಹಣಕಾಸು ವ್ಯವಹಾರಗಳು ಸಾಧ್ಯವಾಗುವುದಿಲ್ಲ..!
ಅಂದಹಾಗೆ ಜುಲೈ 1 2023 ರಿಂದ ಪ್ಯಾನ್ ಕಾರ್ಡ್ ಆಧಾರದೊಂದಿಗೆ ಲಿಂಕ್ ಆಗದೆ ಇದ್ದಲ್ಲಿ ಅಂತಹ ಪ್ಯಾನ್ ಕಾರ್ಡನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ. ಪ್ಯಾನ್ ಕಾರ್ಡ್ ಬಳಸಿ ಮಾಡುವ ಯಾವುದೇ ಹಣಕಾಸಿನ ವ್ಯವಹಾರವನ್ನು ಇನ್ಮುಂದೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನಿಷ್ಕ್ರಿಯಗೊಂಡಿರುವ ಪ್ಯಾನ್ ಕಾರ್ಡ್ (PAN Card) ಬಳಸಿ ಐ ಟಿ ಆರ್ ಸಲ್ಲಿಸಲು ಹೋದರೆ ತೊಂದರೆ ಅನುಭವಿಸಬೇಕಾಗುತ್ತದೆ. ಇದೇನಾದರು ಆದಾಯ ತೆರಿಗೆಯ ಗಮನಕ್ಕೆ ಬಂದರೆ ನೀವು ನಕಲಿ ಪ್ಯಾನ್ ಕಾರ್ಡ್ ಬಳಸುತ್ತಿದ್ದೀರಿ ಎಂದು ನಿಮ್ಮ ಮೇಲೆ ಹೆಚ್ಚಿನ ದಂಡ ವಿಧಿಸುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ನೀವಿನ್ನ್ ಪ್ಯಾನ್ ಆದಾರ್ ಲಿಂಕ್ ಮಾಡದೇ ಇದ್ದಲ್ಲಿ ವಿಳಂಬ ಶುಲ್ಕ ಪಾವತಿಸಿ ಲಿಂಕ್ ಮಾಡಿಕೊಳ್ಳಿ.

ಅಂದಹಾಗೆ ನೀವು ಪ್ಯಾನ್ ಕಾರ್ಡ್ ಬಳಸಿ ವ್ಯವಹಾರ ಮಾಡುವುದಾದರೆ ಆಧಾರ್ ಕಾರ್ಡ್ (Aadhaar Card) ಅನ್ನು ಮರು ಲಿಂಕ್ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಸಾವಿರ ರೂಪಾಯಿ ದಂಡ ಪಾವತಿಸಿ ನಿಷ್ಕ್ರಿಯವಾಗಿರುವ ಪಾನ್ ಕಾರ್ಡ್ ಅನ್ನು ಸಕ್ರಿಯಗೊಳಿಸಿಕೊಳ್ಳಬಹುದು. ಒಂದುವೇಳೆ ಸಾವಿರ ರೂಪಾಯಿಗಳ ದಂಡ ಪಾವತಿಸಿದ ನಂತರವೂ ಪ್ಯಾನ್ ಕಾರ್ಡ್ ಸಕ್ರಿಯಗೊಳ್ಳದೆ ಇದ್ದಲ್ಲಿ ಒಂದು ತಿಂಗಳವರೆಗೂ ನಿಮ್ಮ ಪ್ಯಾನ್ ಕಾರ್ಡ್ ಸಕ್ರಿಯಗೊಳ್ಳಲು ಕಾಯಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ(Income tax department) ತಿಳಿಸಿದೆ.

ಇದನ್ನೂ ಓದಿ: Revenue Department : ನಿಮ್ಮ ಜಮೀನು, ಪಹಣಿ ಅಜ್ಜ ಅಥವಾ ಅಪ್ಪನ ಹೆಸರಿನಲ್ಲಿದೆಯೇ? ಹಾಗಿದ್ರೆ ನಿಮಗೊಂದು ಗುಡ್ ನ್ಯೂಸ್, ಈ ದಿನದಿಂದಲೇ ಜಾರಿ !!

Leave A Reply

Your email address will not be published.