Anna bhagya Scheme: ಅಕ್ಕಿ ದುಡ್ಡು ಬೇಕಂದ್ರೆ ಕೂಡಲೇ ಇದೊಂದು ಕೆಲ್ಸ ಮಾಡಿ !! ಈ ದಿನದಿಂದಲೇ ಖಾತೆಗೆ ಬರುತ್ತೆ 850 ರೂ !!
Latest Karnataka news Congress guarantee Anna Bhagya scheme updates anna bhagya scheme money for your account by July 10
Annabhagya Scheme: ರಾಜ್ಯ ಸರ್ಕಾರದ(State Government) ಪಂಚ ಗ್ಯಾರಂಟಿಗಳ(5 Guarantys) ಪೈಕಿ ಒಂದಾಗಿರೋ ಅನ್ನ ಭಾಗ್ಯ ಯೋಜನೆಯು ಜುಲೈ ಒಂದರಿಂದಲೇ ಜಾರಿಯಾಗಬೇಕಿತ್ತು. ಆದರೀಗ ಇದಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಇದೇ ಜುಲೈ 9, 10 ಕ್ಕೆ ಅಕೌಂಟ್‍ಗೆ ಹಣ ಹಾಕಲು ಸರ್ಕಾರ ಮುಂದಾಗಿದೆ.
ಹೌದು, ಇತ್ತೀಚಿಗೆ ‘ಅನ್ನಭಾಗ್ಯ'(Anna bhagya) ಯೋಜನೆ ಜಾರಿ ಹಾಗೂ 5 ಕೆ ಜಿ ಅಕ್ಕಿ ಬದಲು ಹಣವನ್ನು ಯಾವಾಗ ನೀಡುತ್ತೀರಾ ಎಂದು ಸಿಎಂ ಸಿದ್ದರಾಮಯ್ಯನವರನ್ನು ಕೇಳಿದಾಗ ಜುಲೈ 1 ರಿಂದಲೇ ನಾವೇನು ದುಡ್ಡು ಕೊಡುತ್ತೇವೆ ಎಂದು ಹೇಳಿರಲಿಲ್ಲ. ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದಿದ್ದರು. ಆದರೀಗ ಕೊನೆಗೂ ಅನ್ನಭಾಗ್ಯದ (Congress Annabhagya Scheme) ಹಣಭಾಗ್ಯಕ್ಕೆ ಮುಹೂರ್ತ ಕೂಡಿಬಂದಿದೆ. ಇದೇ ಜುಲೈ 9, 10 ಕ್ಕೆ ಅಕೌಂಟ್‍ಗೆ ಹಣ ಹಾಕಲು ಸರ್ಕಾರ ಮುಂದಾಗಿದೆ.
ಅಂದಹಾಗೆ ಚುನಾವಣಾ ವೇಳೆ ಕಾಂಗ್ರೆಸ್(Congress) ಅನ್ನಭಾಗ್ಯ(Annabhagya) ಯೋಜನೆಯಡಿ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಘೋಷಿಸಿತ್ತು. ಆದರೆ ಈಗ ಅಕ್ಕಿ ಸಿಗದ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಗೆ ಹಿನ್ನೆಡೆ ಉಂಟಾಗಿದ್ದು, ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಕೊಡುವುದರೊಂದಿಗೆ ಉಳಿದ 5 ಕೆಜಿ ಅಕ್ಕಿ ಬದಲಾಗಿ ಹಣ ನೀಡುವುದಾಗಿ ಘೋಷಿಸಿತ್ತು. ಸದ್ಯ ಜುಲೈ 10 ರ ಒಳಗೆ ಈ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಲು ಸರ್ಕಾರ ನಿರ್ಧರಿಸಿದೆ. ವಿರೋಧ ಪಕ್ಷಗಳ ಪಟ್ಟು ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ (State Government) ಈ ನಿರ್ಧಾರಕ್ಕೆ ಬಂದಿದೆ.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ !!
ಇನ್ನು ಈ ಹಣ ನೇರವಾಗಿ ಕುಟುಂಬದ ಯಜಮಾನನ ಖಾತೆಗೆ ಜಮೆಯಾಗುತ್ತದೆ. ಆದರೀಗ ಈ ಹಣಕ್ಕಾಗಿ ಅಧಾರ್ ಲಿಂಕ್ (Aadhaar Card Link) ಕಡ್ಡಾಯವಾಗಿರುತ್ತದೆ. ಅನ್ನಭಾಗ್ಯದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಬೇಕಾದರೆ ಬ್ಯಾಂಕ್ ಖಾತೆ (Bank Account) ಜೊತೆ ಆಧಾರ್ ಲಿಂಕ್ ಕಡ್ಡಾಯವಾಗಿ ಆಗಿರಬೇಕು. ಪಡಿತರ ಚೀಟಿಯಲ್ಲಿ (Ration Card) ಮನೆ ಮುಖ್ಯಸ್ಥರು ಯಾರು ಅನ್ನೋದು ಕಾರ್ಡ್ ನಲ್ಲಿ ನಮೂದಾಗಿರುತ್ತದೆ. ಮನೆಯ ಮುಖ್ಯಸ್ಥರು ಸಾಮಾನ್ಯವಾಗಿ ಮಹಿಳೆಯರೇ ಆಗಿರುತ್ತಾರೆ. ಮನೆ ಯಜಮಾನಿಯ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಖಾತೆ ಇರಬೇಕು.
ಅಲ್ಲದೆ ಒಂದು ವೇಳೆ ಮನೆಯ ಮುಖ್ಯಸ್ಥರದ್ದು ಇಲ್ಲದೇ ಹೋದಲ್ಲಿ, ಪಡಿತರ ಚೀಟಿಯಲ್ಲಿರುವ ಯಾರಾದರೂ ಒಬ್ಬರ ಹೆಸರಿನಲ್ಲಿ ಖಾತೆ ಆಧಾರ್(Adhar card) ಲಿಂಕ್ ಆಗಿರಬೇಕು ಎಂದು ಸರ್ಕಾರ ಹೇಳಿದೆ. ಇನ್ನು ಈ ಧನಭಾಗ್ಯಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಕೆ ಮಾಡಬೇಕಿಲ್ಲ. ಆದರೆ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆ ವಿವರ ಮಾತ್ರ ಕಡ್ಡಾಯವಾಗಿರುತ್ತದೆ. ಹೀಗಾಗಿ ಈ ಕೂಡಲೇ ಬ್ಯಾಂಕ್ ಗೆ ತೆರಳಿ ನಿಮ್ಮ ಖಾತೆಗೆ ಆಧಾರ್ ಲಿಂಕ್ ಆಗಿದೆಯೋ ಪರಿಶೀಲಿಸಿ. ಆಗಿಲ್ಲವೆಂದರೆ ಈ ಕೂಡಲೇ ಲಿಂಕ್ ಮಾಡಿಸಿ 850 ರೂ ನಿಮ್ಮದಾಗಿಸಿಕೊಳ್ಳಿ.