BJP: ಕೊನೆಗೂ 4 ರಾಜ್ಯಗಳಿಗೆ ಹೊಸ ರಾಜ್ಯಾಧ್ಯಕ್ಷರನ್ನು ನೇಮಿಸಿದ BJP !! ಕರ್ನಾಟಕಕ್ಕೆ ಯಾರು ಗೊತ್ತಾ?

latest news political BJP appointed new state presidents for 4 states

BJP: 2024ರ ಲೋಕಸಭಾ ಚುನಾವಣೆಯ (Loksabha Election 2024) ಹಿನ್ನೆಲೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷದ (BJP) ರಾಜ್ಯಾಧ್ಯಕ್ಷರನ್ನು ಬದಲಾಯಿಸಲಾಗಿದೆ.

 

ಹೌದು, 2024 ರ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಗಳನ್ನು ಆರಂಭಿಸಿರುವ ಬಿಜೆಪಿ ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿದೆ. ಈ ಪ್ರಯುಕ್ತ 4 ರಾಜ್ಯಗಳಿಗೆ ನೂತನ ಬಿಜೆಪಿ ಸಾರಥಿಗಳು ಸಿಕ್ಕಂತಾಗಿದೆ.

ಯಾವ ರಾಜ್ಯಕ್ಕೆ ಯಾರು ಬಿಜೆಪಿ ಸಾರಥಿ?
• ಆಂಧ್ರಪ್ರದೇಶ- ಡಿ. ಪುರಂದೇಶ್ವರಿ,
• ತೆಲಂಗಾಣ – ಕಿಶನ್ ರೆಡ್ಡಿ
• ಪಂಜಾಬ್‍- ಸುನಿಲ್ ಜಾಖರ್
• ಜಾರ್ಖಂಡ್‍- ಬಾಬುಲಾಲ್ ಮರಾಂಡಿ
ಈ ನಾಲ್ಕು ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿ ಜೆ.ಪಿ ನಡ್ಡಾ (J.P Nadda) ಆದೇಶ ಹೊರಡಿಸಿದ್ದಾರೆ.

ಅಂದಹಾಗೆ ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿರುವ ಸುನೀಲ್ ಕುಮಾರ್ ಜಾಖರ್ (Sunil Kumar Jakhar) ಅವರು ಪಂಜಾಬ್‌ನಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ. ಜಾರ್ಖಂಡ್ (Jharkhand) ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ (Babulal Marandi) ಅವರು ಜಾರ್ಖಂಡ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ತೆಲಂಗಾಣದಲ್ಲಿ (Telangana) ಬಂಡಿ ಸಂಜಯ್ ಕುಮಾರ್ ಬದಲು ಇನ್ನು ಮುಂದೆ ಜಿ ಕಿಶನ್ (G Kishan Reddy) ರೆಡ್ಡಿ ಪಕ್ಷವನ್ನು ಮುನ್ನಡೆಸಲಿದ್ದಾರೆ. ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌ಟಿ ರಾಮರಾವ್ ಅವರ ಪುತ್ರಿ ದಗ್ಗುಬಾಟಿ ಪುರಂದೇಶ್ವರಿ (Daggubati Purandeswari,)ಅವರನ್ನು ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಅಲ್ಲದೆ ನಮ್ಮ ರಾಜ್ಯದಲ್ಲೂ ಕೂಡ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ಬಲವಾಗಿ ಕೇಳಿಬರುತ್ತಿದೆ. ಹಾಲಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್(Nalin Kumar kateel) ಅವರ ಅಧಿಕಾರವಧಿ ಮುಕ್ತಾಯವಾಗಿದ್ದು ಸದ್ಯದಲ್ಲೇ ಅಧ್ಯಕ್ಷರ ಬದಲಾವಣೆ ಆಗಲಿದೆ. ಈಗಾಗಲೇ ಹಲವಾರು ರಾಜ್ಯಾಧ್ಯಕ್ಷ ಆಕಾಂಕ್ಷಿಗಳು ಬಿಜೆಪಿಯಲ್ಲಿ ಹುಟ್ಟುಕೊಂಡಿದ್ದಾರೆ. ಇನ್ನು ಈ ನಡುವೆ ಇದೀಗ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಶೋಭಾ ಕರಂದ್ಲಾಜೆ(Shobha karandlaje) ಹೆಸರು ಕೂಡ ಕೇಳಿ ಬಂದಿದ್ದು, ಆದರೆ ಕರ್ನಾಟಕದ ರಾಜ್ಯಾಧ್ಯಕ್ಷರ ಬದಲಾವಣೆಯಾಗಿಲ್ಲ. ಆದರೆ ಕರ್ನಾಟಕದ ಅಧ್ಯಕ್ಷರ ಆಯ್ಕೆ ಭಾರೀ ಕುತೂಹಲವಾಗಿದೆ.

 

ಇದನ್ನು ಓದಿ: Ticket Jackpot Money: 25 ಕೋಟಿ ಲಾಟರಿ ಗೆದ್ದ ಟಿಕೆಟ್ ಅನ್ನು ಶರಾಬು ಅಂಗಡಿಯಲ್ಲಿ ಮರೆತು ಬಂದ ಯಡವಟ್ಟ ! ಮುಂದೆ ಆಗಿದ್ದು ಬಲು ರೋಚಕ ! 

Leave A Reply

Your email address will not be published.