Sexual Harassment: ಲೈವ್ ನಲ್ಲಿಯೇ ಹುಡುಗಿಯ ಎದೆಗೆ ಬೆರಳು ತೂರಿಸಿದ ವ್ಯಕ್ತಿ ! ವಿಡಿಯೋ ವೈರಲ್ !!

latest news crime man sexually harassed a foreign tourist woman

Sexual Harassment: ವ್ಯಕ್ತಿಯೋರ್ವ ವಿದೇಶಿ ಪ್ರವಾಸಿ ಮಹಿಳೆಗೆ ಲೈಂಗಿಕ ಕಿರುಕುಳ (Sexual harassment) ನೀಡಿದ ಘಟನೆ ರಾಜಸ್ಥಾನದ (rajastan) ಜೈಪುರ (jaipur) ನಗರದಲ್ಲಿ ನಡೆದಿದೆ. ಮಹಿಳೆ ಲೈವ್ ನಲ್ಲಿ ಇದ್ದಾಗಲೇ ವ್ಯಕ್ತಿ ಆಕೆಯ ಎದೆಯನ್ನು ಬೆರಳಿನಿಂದ ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದು, ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

ಇತ್ತೀಚೆಗೆ ಹೆಚ್ಚಿನ ಪ್ರವಾಸಿಗರು ಸೋಷಿಯಲ್ಸ್ ಗಳಿಗೆ ಪ್ರೇಕ್ಷಣೀಯ ಸ್ಥಳಗಳನ್ನು ಯುಟ್ಯೂಬ್ ಲೈವ್ (YouTube live) ಮೂಲಕ ತೋರಿಸುವುದು ಕಾಮನ್ ಆಗಿಬಿಟ್ಟಿದೆ. ಈ ವಿದೇಶಿ ಮಹಿಳೆಯೂ ಇದೇ ರೀತಿ ಯೂಟ್ಯೂಬರ್ (youtuber) ಆಗಿದ್ದು, ಸದ್ಯ ಭಾರತೀಯನಿಂದ ಕಿರುಕುಳ ಅನುಭವಿಸಿದ್ದಾರೆ.

ನೀಚ ವ್ಯಕ್ತಿಯ ಈ ಕೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಹಿಳಾ ಪ್ರವಾಸಿ ಹಾಗೂ ಆಕೆಯ ಸಂಗಾತಿ ಜೊತೆಗೆ ವಿಡಿಯೋ ಮಾಡಿಕೊಂಡು ತೆರಳುತ್ತಿದ್ದ ವೇಳೆ ಅಲ್ಲಿದ್ದ ಸ್ಥಳೀಯ ವ್ಯಕ್ತಿ, ಇವರಿಗೆ ಸಹಾಯ ಮಾಡುವ ನೆಪದಲ್ಲಿ ಪದೇ ಪದೇ ಮಹಿಳೆಯ ದೇಹದ ಸ್ಪರ್ಶಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ವೈರಲ್ ಆದ ಬೆನ್ನಲ್ಲೆ ಎಚ್ಚೆತ್ತ ಪೊಲೀಸರು ಕಿರುಕುಳ ನೀಡಿದ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ.

ಈ ಘಟನೆ ನಿಜವಾಗಲೂ ನಾಚಿಕೆಗೇಡಿನ ಸಂಗತಿ. ವಿದೇಶಿ ಮಹಿಳೆ ಧೈರ್ಯದಿಂದ ದೇಶಕ್ಕೆ ಬಂದು ನಮ್ಮ ದೇಶದ ವಿಚಾರಗಳನ್ನು ಪಸರಿಸುವ ಪ್ರಯತ್ನದಲ್ಲಿದ್ದರೆ ಅವರಿಗೆ ಗೌರವ ಕೊಡುವ ಬದಲು ಈ ರೀತಿಯ ವರ್ತನೆ ಸರಿಯಲ್ಲ.

 

Leave A Reply

Your email address will not be published.