Revenue Department : ನಿಮ್ಮ ಜಮೀನು, ಪಹಣಿ ಅಜ್ಜ ಅಥವಾ ಅಪ್ಪನ ಹೆಸರಿನಲ್ಲಿದೆಯೇ? ಹಾಗಿದ್ರೆ ನಿಮಗೊಂದು ಗುಡ್ ನ್ಯೂಸ್, ಈ ದಿನದಿಂದಲೇ ಜಾರಿ !!

Latest national news revenue department Karnataka pahani transfer revenue department services updates

Revenue department: ರಾಜ್ಯ ಸರ್ಕಾರದ(State Government) ಕಂದಾಯ ಇಲಾಖೆಯಿಂದ(Revenue department) ರೈರಿಗೊಂದು ಸಖತ್ ಗುಡ್ ನ್ಯೂಸ್ ಸಿಕ್ಕಿದ್ದು, ತಮ್ಮ ಜಮೀನು ತಂದೆ, ತಾತ, ಮುತ್ತಯ್ಯ ಅಥವಾ ಇನ್ನಾರದೇ ಪೂರ್ವಜರ ಹೆಸರಿನಲ್ಲಿ ಇದ್ದರೂ ಪ್ರಸ್ತುತ ಉಳುಮೆ ಮಾಡುತ್ತಿರುವ ರೈತರ ಹೆಸರಿಗೆ ಸುಲಭವಾಗಿ ಮಾಡಿಕೊಳ್ಳಲು ಹೊಸ ರೂಪುರೇಷೆಯನ್ನು ರೂಪಿಸಿದೆ.

 

ಹೌದು, ರೈತರಿಗೆ ಜಮೀನಿನ ಪಹಣಿ (Bhoomi Pahani) ಬಹಳಷ್ಟು ಮುಖ್ಯ ವಾಗುತ್ತದೆ, ಪಹಣಿಯಲ್ಲಿ ಹೆಸರು (Name) ಬದಲಾವಣೆ ಅಥವಾ ತಿದ್ದುಪಡಿ, ಇದ್ದಾಗ ಕೃಷಿ ಮಾಡಲು ಅಥವಾ ಸರಕಾರದ ಸೌಲಭ್ಯ ಪಡೆಯಲು ಕಷ್ಟ ವಾಗುತ್ತದೆ, ಇದೀಗ ಪಹಣಿ ಇದ್ದು ಆ ಪಹಣಿ ತಂದೆ ಮುತ್ತಾತನ ಹೆಸರನಲ್ಲಿದ್ದರೆ ದಾಖಲೆ ಪತ್ರ ಇಲ್ಲದೇ ಇದ್ದವರಿಗೆ ಇದನ್ನು ಸರಿಪಡಿಸಲು ಸರ್ಕಾರ ಅವಕಾಶ ನೀಡಿದೆ. ಅಲ್ಲದೆ ಯಾವುದೇ ರೀತಿಯ ದಾಖಲೆ (Document) ಇಲ್ಲದಿದ್ದರೂ ಪಹಣಿ ಹೆಸರು ಮಾಡಿಸಿಕೊಳ್ಳಬಹುದಾಗಿದೆ.

ಆಸ್ತಿ ನೊಂದಣಿ ಹಾಗು ಜಮೀನಿಗೆ ಸಂಬಂಧಿಸಿದ ಯಾವುದೇ ವಹಿವಾಟುಗಳಿಗೆ ತೊಂದರೆ ಉಂಟಾಗದಂತೆ ತಕ್ಷಣದಲ್ಲಿಯೇ ಕಾರ್ಯ ರೂಪಕ್ಕೆ ಬರುವಂತೆ ದೊಡ್ಡ ಕ್ರಮಕ್ಕೆ ಮುಂದಾಗಿದ್ದಾರೆ. ರಾಜ್ಯದ ನೂತನ ಕಂದಾಯ ಸಚಿವರಾದಂತಹ ಕೃಷ್ಣ ಬೈರೇ ಗೌಡ(Krishma byre gowda) ಅವರು, ಎಲ್ಲರಿಗೂ ಕೂಡ ಅಗತ್ಯ ಕ್ರಮಕ್ಕೆ ಮುಂದಾಗಿದ್ದು, ರಾಜ್ಯದಲ್ಲಿ ಕಂದಾಯ ನಿಯಮ ಹಾಗು ದಾಖಲೆಗಳ ಸಮಿತಿಯಲ್ಲಿ ರೈತರಿಗೆ ನವೀಕರಣ ಮಾಡಿ ರೈತರಿಗೆ ಕೊಡಲು ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಬಹುತೇಕ ರಾಜ್ಯದಲ್ಲಿ ಜುಲೈ 1 ರಿಂದ ಅನುಷ್ಠಾನಕ್ಕೆ ಬರಲಿದೆ. ಹಾಗಾಗಿ ನೂತನ ಸಚಿವ ಕ್ರಷ್ಣ ಬೈರೇ ಗೌಡ ರಾಜ್ಯದ ಜನತೆಗಾಗಿ ಬಗರಹುಕುಂ ಸಾಗುವಳಿದಾರರಿಗೂ ಕೂಡ ಗುಡ್ ನ್ಯೂಸ್ ನೀಡಿದ್ದಾರೆ.

ಆಸ್ತಿಯನ್ನು ಈಗ ಇದ್ದ ರೈತರ ಹೆಸರಿಗೆ ಮಾಡಿಕೊಳ್ಳಲು ಕಷ್ಟ ವಾಗುತ್ತಿತ್ತು, ಯಾಕಂದರೆ ಹಿಂದಿನ ಕಾಲದಲ್ಲಿ ಮರಣ ಪ್ರಮಾಣ ಪತ್ರ, ಜನನ ಪತ್ರ ಹೀಗೆ ಆಸ್ತಿಯನ್ನು ಹಸ್ತಾಂತರಿಸಲು ಬೇಕಾಗುವ ದಾಖಲೆಗಳು ಸಿಗದೇ ಇರುವುದು ಹಲವಾರು ರೈತರಿಗೆ ಸಮಸ್ಯೆ ಆಗಿತ್ತು, ಇದೀಗ ರಾಜ್ಯದ ಎಲ್ಲ ರೈತರು ಪಹಣಿ (Bhoomi Pahani) ಯಲ್ಲಿ ತಂದೆ ಅಥವಾ ತಾತ ಮುತ್ತಾತನ ಹೆಸರು ಇದ್ದರೆ ಹೆಸರನ್ನು ನೇರವಾಗಿ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: Central Employees Leave Policy: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್!! ಜಾರಿಗೆ ಬಂತು ಮತ್ತೊಂದು ಹೊಸ ರಜಾ ನೀತಿ !!

Leave A Reply

Your email address will not be published.