Central Employees Leave Policy: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್!! ಜಾರಿಗೆ ಬಂತು ಮತ್ತೊಂದು ಹೊಸ ರಜಾ ನೀತಿ !!

Latest national news Good news for Central employees leave policy update in India

Central Employees Leave Policy: ಕೇಂದ್ರ ಸರ್ಕಾರ(Central Government) ತನ್ನ ನೌಕರರಿಗೆ ಭರ್ಜರಿಯಾದ ಗುಡ್ ನ್ಯೂಸ್(Good news) ಒಂದನ್ನು ನೀಡಿದ್ದು, ತನ್ನ ರಜಾ ನೀತಿಯನ್ನ ಬದಲಾಯಿಸಿ ಸರ್ಕಾರೀ ನೌಕಾರರು(Government employees)ಮುಂದಿನ ದಿನಗಳಲ್ಲಿ ಹೆಚ್ಚಿನ ರಜೆ ಪಡೆದುಕೊಳ್ಳುವಂತೆ (Central Employees Leave Policy) ಮಾಡಲು ಮುಂದಾಗಿದೆ.

 

ಹೌದು, ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರಿ ನೌಕರರ ಸಂಬಳ ಹೆಚ್ಚಿಸುವ ಕುರಿತು ಚರ್ಚೆಗಳು ನಡೆದಿದ್ದವು. ಆದರೀಗ ಈ ನಡುವೆ ಕೇಂದ್ರವು ತನ್ನ ನೌಕರರಿಗೆ ಮತ್ತೊಂದು ರೀತಿಯಲ್ಲಿ ಸಂತೋಷವನ್ನು ನೀಡಲು ಮುಂದಾಗಿದ್ದು ಹೊಸ ರಜಾ ನೀತಿಯನ್ನು(Leave Policy) ತರಲು ಮುಂದಾಗಿದೆ.

ಅಂದಹಾಗೆ ಕೇಂದ್ರ ಸರ್ಕಾರವು ಅನುಷ್ಠಾನಗೊಳಿಸಲು ಮುಂದಾದ ಈ ಹೊಸ ರಜಾ ಯೋಜನೆಯಲ್ಲಿ ಸರ್ಕಾರೀ ನೌಕರರು ಹೆಚ್ಚಿನ ರಜೆಯನ್ನು ಪಡೆಯುತ್ತಾರೆ. ಇದೀಗ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಹೊಸ ನಿಯಮದ ಅಡಿಯಲ್ಲಿ ಸರ್ಕಾರೀ ನೌಕರರ ರಜಾ ದಿನವನ್ನು ಹೆಚ್ಚಿಸಲಾಗಿದೆ. ಆದರೆ ಅದರಲ್ಲಿ ಕೆಲವು ಷರತ್ತುಗಳನ್ನು ಅಳವಡಿಸಲಾಗಿದೆ.

ಕೇಂದ್ರ ನೌಕರರಿಗೆ ವಿಶೇಷ 42 ದಿನ ರಜೆ ಲಭ್ಯ!!
ಹೌದು, ಡಿಒಪಿಟಿ(DOPT) ಈ ಹೊಸ ರಜಾ ನೀತಿಯ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರದ ಈ ಹೊಸ ರಜಾ ನೀತಿಯಡಿಯಲ್ಲಿ, ಕೇಂದ್ರ ಸರ್ಕಾರೀ ಉದ್ಯೋಗಿ ಅಂಗಾಂಗ ದಾನ ಮಾಡಿದರೆ 42 ದಿನಗಳ ವಿಶೇಷ ತುರ್ತು ರಜೆಯನ್ನು ನೀಡುವುದಾಗಿ ಘೋಷಿಸಲಾಗಿದೆ. ಉದ್ಯೋಗಿಯೂ ತನ್ನ ದೇಹದ ಯಾವುದೇ ಭಾಗವನ್ನು ದಾನ ಮಾಡಿದರು ಕೂಡ ಅದನ್ನು ಶಸ್ತ್ರ ಚಿಕೆತ್ಸೆಯೆಂದು ಪರಿಗಣಿಸಿ ಉದ್ಯೋಗಿ ಬೇಗ ಗುಣಮುಖವಾಗಲಿ ಎನ್ನುವ ಕಾರಣಕ್ಕೆ 42 ದಿನಗಳ ರಜೆಯನ್ನು ನೀಡಲಾಗುತ್ತದೆ.

ಇಷ್ಟೇ ಅಲ್ಲದೆ ಒಂದು ವರ್ಷದಲ್ಲಿ ಉದ್ಯೋಗಿಗೆ 30 ದಿನಗಳ ತುರ್ತು ರಜೆಯನ್ನು ನೀಡಲಾಗಿದ್ದು ಪ್ರಸ್ತುತ ರಜೆ ದಿನವನ್ನು 42 ಕ್ಕೆ ಹೆಚ್ಚಿಸಲಾಗಿದೆ. ಆದರೆ ರೈಲ್ವೆ(Railway) ಮತ್ತು ಅಖಿಲ ಭಾರತ ಸೇವೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ಕೇಂದ್ರದ ಈ ಹೊಸ ರಜೆ ನೀತಿ ಅರ್ಹರಾಗಿರುವುದಿಲ್ಲ.

ಇದನ್ನೂ ಓದಿ: J C Madhuswamy: ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೊನೆಗೂ ಮೌನ ಮುರಿದ ಮಾಧುಸ್ವಾಮಿ- ಅಚ್ಚರಿ ಹೇಳಿಕೆಗೆ ಎಲ್ಲರೂ ಶಾಕ್ !!

Leave A Reply

Your email address will not be published.