Tata Tiago: ಬಲಿಷ್ಠ ಟಾಟಾ ಟಿಯಾಗೋ ಪಲ್ಟಿ, ಪಾರಾಗಿ ಬಂದ ವ್ಯಕ್ತಿ ನೇರವಾಗಿ ಓಡಿದ್ದು ಆಸ್ಪತ್ರೆಗಲ್ಲ, ಬದಲಿಗೆ ಟಾಟಾ ಶೋ ರೂಂಗೆ – ಶೋ ರೂಂ ಮ್ಯಾನೇಜರ್ ಗೆ ಕಾದಿತ್ತು ಶಾಕ್ !

laterst news Tata Tiago flipped, the man went straight to the Tata showroom

Tata Tiago: ಕಾರು ಕೊಳ್ಳುವಾಗ ಪ್ರತಿಯೊಬ್ಬರಿಗೂ ಸಹ ಒಂದಿಲ್ಲೊಂದು ವಿಷಯದಲ್ಲಿ ಆಸಕ್ತಿ ಇರುತ್ತದೆ. ಬಣ್ಣದಿಂದ ಹಿಡಿದು ಟಾರ್ಕ್ ತನಕ ಅವರದ್ದೇ ಆದ ವೈಯಕ್ತಿಕ ಫೀಚರ್ ಗಳ ಹಿಂದೆ ಕಾರಿ ಗ್ರಾಹಕ ಹೋಗೋದನ್ನು ನಾವು ನೋಡಿದ್ದೇವೆ. ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ತರಹೇವಾರಿ ಕಾರು ಬ್ರಾಂಡುಗಳಿವೆ. ಬ್ರಾಂಡ್‌ ಆಯ್ಕೆಗಳಿರುತ್ತದೆ. ಅದರಲ್ಲೂ ವಾಹನ ಪ್ರೀಯರಿಗೆ ಅದು ಕೊಂಚ ಜಾಸ್ತಿಯೇ ಎಂದು ಹೇಳಬಹುದು. ಇಲ್ಲೊಬ್ಬ ತಾನು ಕೊಂಡ ಟಿಯಾಗೋ ಕಾರಲ್ಲಿ ತನಗೆ ಅಪಘಾತ ಆದಾಗ ಕಾರಿಂದ ಹೊರಬಂದು ಆಸ್ಪತ್ರೆಗೆ ತೆರಳದೆ, ಸೀದಾ ಕಾರು ಶೋರೂಮ್ ಗೆ ಧಾವಿಸಿದ ಘಟನೆ ನಡೆದಿದೆ. ಅಷ್ಟಕ್ಕೂ ಆತ ಹಾಗೆ ಮಾಡಲು ಏನು ಕಾರಣ ಗೊತ್ತಾ ?

 

ಆತ ಓಡಿಸುತ್ತಿದ್ದ ಟಾಟಾ ಟಿಯಾಗೋ ಪಲ್ಟಿಯಾಗಿತ್ತು. ವರದಿಗಳ ಪ್ರಕಾರ ಒಡಿಸ್ಸಾದ ವ್ಯಕ್ತಿಯೊಬ್ಬ ಟಾಟಾ ಟಿಯಾಗೋವನ್ನು ಖರೀದಿಸಿ ಅದನ್ನು ಉಪಯೋಗಿಸುತ್ತಿದ್ದ. ಇತ್ತೀಚೆಗೆ ಆತನ ತನ್ನ ಪ್ರೀತಿಯ ಟಾಟಾ ಟಿಯಾಗೋದಲ್ಲಿ ಪ್ರಯಾಣಿಸುತ್ತಿದ್ದಾಗ ಒಂದು ಬ್ಲೈಂಡ್‌ ತಿರುವು ಸಿಕ್ಕಿದೆ. ಆ ಸಂದರ್ಭದಲ್ಲಿ ಆ ಕಾರನ್ನು ಓಡಿಸುತ್ತಿದ್ದಾಗ ತಿರುವಿನಲ್ಲಿ ಒಂದು ಮೋಟಾರ್ ಮೋಟಾರ್‌ ಸೈಕಲ್‌ ಬಂದಿದೆ.

ಬ್ಲೈಂಡ್‌ ಟರ್ನ್‌ನಲ್ಲಿ ಯಾವಾಗಲೂ ಎಚ್ಚರಿಕೆಯಿಂದ ವಾಹನ ಚಲಾವನೆ ಮಾಡಬೇಕು ಎನ್ನುವುದು ಸಾಮಾನ್ಯ ಅಭಿಪ್ರಾಯ. ಆದರೂ ಎಷ್ಟೋ ಸಲ ಬರಿ ಮರವಿನಿಂದ ಅಥವಾ ಎದುರಿಗೆ ಬರುವವರ ತಪ್ಪಿನಿಂದ ಆಕಸ್ಮಿಕಗಳು ನಡೆಯುತ್ತವೆ ಅದೇ ರೀತಿ ಇಲ್ಲಿಯೂ ಬ್ಲೈಂಡ್ ಹೊಡೆಯುವಾಗ ದ್ವಿಚಕ್ರ ವಾಹನ ಧುತ್ತೆಂದು ಕಣ್ಣೆದುರು ಪ್ರತ್ಯಕ್ಷವಾಗಿದೆ. ಸಡನ್ನಾಗಿ ಬೈಕ್‌ ಸವಾರ ಒಮ್ಮೆಲೆ ಕಂಡಾಗ ಈ ಟಾಟಾ ಟಿಯಾಗೋ ಮಾಲೀಕನಿಗೆ ಏನು ಮಾಡಬೇಕೆಂದು ತೋಚದೆ ಕಾರನ್ನು ಒಮ್ಮೆಲೇ ಶಾರ್ಪ್ ಟರ್ನ್ ತಿರುಗಿಸಿದ್ದಾನೆ. ಇದರ ಪರಿಣಾಮವಾಗಿ ಕಾರು ಪಲ್ಟಿಯಾಗಿದೆ.

ಈ ಅಪಘಾತದಲ್ಲಿ ವಾಹನ ನುಜ್ಜುಗುಜ್ಜಾಗಿ ಉಲ್ಟಾ ಬಿದ್ದರೂ ಕಾರಿನ ಮಾಲೀಕ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ವತಃ ಗಾಡಿಯ ಒಳಗೆ ಲಾಕ್ ಆದರೂ ಆತನೇ ಆರಾಮವಾಗಿ ಹೊರಬಂದು, ಬದುಕಿದೆಯಾ ಬಡ ಜೀವವೇ ಎಂದು ಕಾರಿನ ಮಾಲೀಕ ಸೀದಾ ಟಾಟಾ ಮೋಟೋರ್ಸ್‌ಗೆ ತೆರಳಿರೋದು ತೀವ್ರ ಕುತೂಹಲ ಮೂಡಿಸಿದೆ.

ಆ ಅಪಘಾತವಾಗಿ ಕಾರು ಹಲವಾರು ಪಲ್ಟಿಯಾಗಿದ್ದರೂ ಮಾಲೀಕನ ಪ್ರಕಾರ ಒಂದೇ ಒಂದು ಗಾಯಗಳಿಲ್ಲದೇ ತಾನೇ ಹೊರಗೆ ಬಂದಿದ್ದಾನೆ ಎಂದು ಹೇಳಿದ್ದಾನೆ. ಕಾರು ಪಲ್ಟಿಯಾದರೂ ಕಾರಿನ ಡೋರ್‌ ತೆಗೆಯುವುದರಲ್ಲಿ ಯಾವುದೇ ತೊಂದರೆಯಾಗಿಲ್ಲ ಎಂದು ಮಾಲೀಕ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ. ಅಪಘಾತದ ವೇಳೆ ಏರ್ ಬ್ಯಾಗ್ ಕಾರ್ಯ ನಿರ್ವಹಿಸಿದೆಯೇ ಎಂದು ಅಲ್ಲಿ ತಿಳಿದು ಬಂದಿಲ್ಲ. ಟಾಟಾ ಮೋಟಾರ್ಸ್ ಕಂಪನಿಯ ಕಾರು ತನ್ನ ಜೀವ ಉಳಿಸಿದ ಆ ಕೃತಜ್ಞತೆಗಾಗಿ ಆತ ಸೀದಾ ಟಾಟಾ ಮೋಟರ್ಸ್ ಶೋರೂಮ್ ಗೆ ತೆರಳಿದ್ದಾನೆ. ಅಲ್ಲದೆ, ಟಾಟಾದ ಇನ್ನೊಂದು ಅಡ್ವಾನ್ಸ್ ವಾಹನವಾದ ಟಾಟಾ ನೆಕ್ಸಾನ್‌ ಅನ್ನು ಬುಕ್ ಮಾಡಿದ್ದಾನೆ. ಆತ ಟಾಟಾ ಕಂಪನಿಯ ಕಾರ್‌ ತನ್ನ ಪ್ರಾಣ ಉಳಿಸಿದುದರ ಉಪಕಾರವನ್ನು ಸ್ಮರಣೆ ಮಾಡಿಕೊಳ್ಳಲು ತಾನು ಈಗ ಅದೇ ಟಾಟಾ ಕಂಪೆನಿಯ ನೆಕ್ಸಾನ್‌ ಅನ್ನು ಖರೀದಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಈ ಘಟನೆ ಟಾಟಾ ಕಂಪನಿ ಕಾರು ತಯಾರಿಸಲು ಹೊರಡುವಾಗ ಬಳಸುವ ತಂತ್ರಜ್ಞಾನ ಮತ್ತು ಸುರಕ್ಷತಾ ವಿಧಾನಕ್ಕೆ ಒಂದು ಸಾಕ್ಷಿ. ಈ ಘಟನೆಯ ವಿಡಿಯೋವನ್ನು ಗ್ರಾಹಕರೊಬ್ಬರು ಶೇರ್ ಮಾಡಿದ್ದು ಅದನ್ನು ನಿಖಿಲ್ ರಾಣ ಎನ್ನುವ ಯೂಟ್ಯೂಬ್ ತನ್ನ ಜಗಪ್ರಿಯ ಯೂಟ್ಯೂಬ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಟಾಟಾ ಮೋಟರ್ಸ್ ತನ್ನ ಕಾರುಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳುವುದಿಲ್ಲ. ಟಾಟಾ ಮೋಟೋರ್ಸ್‌ನ ಬಹುತೇಕ ಕಾರುಗಳು ಗ್ಲೋಬಲ್‌ ಎನ್‌ಕ್ಯಾಪ್‌ ಕ್ರ್ಯಾಷ್‌ ಟೆಸ್ಟ್‌ನಲ್ಲಿ (Global N Cap) 5 ಸ್ಟಾರ್‌ ರೇಟಿಂಗ್‌ ಪಡೆದಿದ್ದು, ಹೆಚ್ಚಿನ ಅಪಘಾತದ ಸಂದರ್ಭದಲ್ಲಿ ಮಾಲೀಕರ ಪ್ರಾಣ ಉಳಿಸುತ್ತದೆ. ಅದೇ ಕಾರಣಕ್ಕೆ ಈಗ ಭಾರತದಲ್ಲಿ ಸೇಫ್ಟಿ . ಇರುವ ಜನರು ಟಾಟಾ ಕಾರು ಕೊಳ್ಳಲು ಆಸಕ್ಕಿ ತೋರಿಸುತ್ತಿದ್ದಾರೆ.

 

https://youtu.be/GU1bxGNFFaQ?t=83

Leave A Reply

Your email address will not be published.