ದಕ್ಷಿಣ ಕನ್ನಡ: ಈ ಎಲ್ಲಾ ತಾಲೂಕು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ: ವಿಪರೀತ ಮಳೆಯ ಹಿನ್ನೆಲೆ
Dakshina Kannada: Holiday declared for all these taluk schools and colleges
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ
ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಇಂದು, ಜುಲೈ 4 ರ ಮಂಗಳವಾರ ರಜೆ ಘೋಷಿಸಲಾಗಿದೆ. ಈ ಸಂಬಂಧ ಆಯ್ದ ತಾಲೂಕುಗಳಿಗೆ ರಜೆ ಘೋಷಣೆ ಆಗಿದೆ.
ದಕ್ಷಿಣ ಕನ್ನಡ ಮಂಗಳೂರು, ಮೂಲ್ಕಿ, ಉಲ್ಲಾಳ, ಮೂಡಬಿದರೆ ಹಾಗೂ ಬಂಟ್ವಾಳ ತಾಲೂಕುಗಳ ಶಾಲೆಗಳು ಹಾಗೂ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ರಜೆ ಘೋಷಿಸಿದ್ದಾರೆ.
ಕರಾವಳಿಎಲ್ಲಿ ಎಲ್ಲೆಡೆ ನಿರಂತರ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕೆಯಾಗಿ ಈ ರಜೆ ನೀಡಲಾಗಿದೆ. ಅಲ್ಲದೆ ಮುಂದಿನ 4 ದಿನ ಆರು ಜಿಲ್ಲೆಗಳಲ್ಲಿ ಭಾರತೀಯ ಹವಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ದ.ಕ. ಜಿಲ್ಲೆಯಲ್ಲಿ ದಲ್ಲಿ ಸ್ಥಳೀಯ ತಹಶೀಲ್ದಾರ್‌ಗೆ ಶಾಲಾ-ಕಾಲೇಜಿಗೆ ರಜೆ ಘೋಷಿಸುವ ಅಧಿಕಾರ ನೀಡಿ ಡಿಸಿ ಆದೇಶಿಸಿದ್ದಾರೆ. ಉಳಿದ ತಾಲೂಕಿನಲ್ಲಿ ಮಳೆ ಪರಿಸ್ಥಿತಿ ನೋಡಿ ರಜೆ ನೀಡಲು ಸೂಚಿಸಲಾಗಿದ್ದು, ಪಕ್ಕದ ಕಾಸರಗೋಡು ಜಿಲ್ಲೆಯಲ್ಲಿ ಇಂದು ರಜೆ ಘೋಷಿಸಲಾಗಿದೆ. ಉಳಿದ ತಾಲೂಕಿನಲ್ಲೂ ರಜೆ ಘೋಷಣೆ ಆಗುವ ಸಂಭವ ಇದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಬೆಂಗಳೂರಿನ ಪಂಪ್ವೆಲ್ ಬಳಿ ನಿನ್ನೆ ಅಂಡರ್ ಪಾಸ್ ಕೆಳಗೆ ಸೊಂಟದ ಮಟ್ಟ ನೀರು ನಿಂತಿದ್ದು ಆತಂಕ ಸೃಷ್ಟಿ ಮಾಡಿತ್ತು. ಯುವಕನೊಬ್ಬ ಬೈಕಿನಿಂದ ಇಳಿದು ಆ ನೀರಿನಲ್ಲಿ ಈಜಾಡಿದ ದೃಶ್ಯಗಳು ವೈರಲ್ ಆಗಿದ್ದವು. ಸ್ಮಾರ್ಟ್ ಸಿಟಿ ಎಂದು ಕರೆದುಕೊಳ್ಳುತ್ತಿರುವ ಮಂಗಳೂರಿನ ಈ ಪರಿಸ್ಥಿತಿಗೆ ಆಕ್ರೋಶವು ಕೇಳಿಬಂದಿತ್ತು. ಇದೀಗ ಮಕ್ಕಳ ಮಕ್ಕಳ ಮತ್ತು ಇತರ ಪ್ರಯಾಣಿಕರ ಮತ್ತು ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ಹಿನ್ನೆಲೆಯಲ್ಲಿ ಈ ತಾಲೂಕಗಳಲ್ಲಿ ರಜೆ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಬೆಂಗಳೂರಿನ ಪಂಪ್ವೆಲ್ ಬಳಿ ನಿನ್ನೆ ಅಂಡರ್ ಪಾಸ್ ಕೆಳಗೆ ಸೊಂಟದ ಮಟ್ಟ ನೀರು ನಿಂತಿದ್ದು ಆತಂಕ ಸೃಷ್ಟಿ ಮಾಡಿತ್ತು. ಯುವಕನೊಬ್ಬ ಬೈಕಿನಿಂದ ಇಳಿದು ಆ ನೀರಿನಲ್ಲಿ ಈಜಾಡಿದ ದೃಶ್ಯಗಳು ವೈರಲ್ ಆಗಿದ್ದವು. ಅಷ್ಟೇ ಅಲ್ಲದೆ ಮಂಗಳೂರಿನ ಕೊಟ್ಟಾರ ಭಾಗದಲ್ಲಿ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಲಿ ಉಂಟು ಮಾಡಿದ್ದಲ್ಲದೆ ವಾಹನ ಸವಾರರ ಸುರಕ್ಷತೆಗೆ ತೊಂದರೆ ಆಗಿತ್ತು. ಸ್ಮಾರ್ಟ್ ಸಿಟಿ ಎಂದು ಕರೆದುಕೊಳ್ಳುತ್ತಿರುವ ಮಂಗಳೂರಿನ ಈ ಪರಿಸ್ಥಿತಿಗೆ ಆಕ್ರೋಶವು ಕೇಳಿಬಂದಿತ್ತು.
ಈ ಹಿಂದೆ ಬೆಂಗಳೂರಿನಲ್ಲಿ ಐತಿ ಉದ್ಯೋಗಿ ಒಬ್ಬಳು ಅಂಡರ್ ಪಾಸ್ ಕೆಳಗೆ ಕಾರಿನ ಒಳಗೆ ನೀರಿನಲ್ಲಿ ಮುಳುಗಿ ಮೃತಪಟ್ಟ ದುರದೃಷ್ಟದ ಘಟನೆ ನಡೆದಿತ್ತು. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು, ಇದೀಗ ಮಕ್ಕಳ ಮತ್ತು ಇತರ ಪ್ರಯಾಣಿಕರ ಮತ್ತು ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ಹಿನ್ನೆಲೆಯಲ್ಲಿ ಈ ತಾಲೂಕಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.