Oben Rorr Electric Bike: 190 ಕಿ. ಮೀ. ಗಳ ನಾಗಾಲೋಟ ಓಡುವ ಈ ಬೈಕಿನ ಲೆವೆಲ್ಲೇ ಬೇರೆ ! ಕೇವಲ 30 ಡೌನ್ ಪೇಮೆಂಟ್ ಮಾಡಿದ್ರೆ ಬೈಕ್ ಮನೆ ಮುಂದೆ !
latest news intresting news new Oben Rorr Electric Bike
Oben Rorr Electric Bike: ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಒಬೆನ್ ಇತ್ತೀಚೆಗೆ ಹೊಸ ಎಲೆಕ್ಟ್ರಿಕ್ ಬೈಕ್ ಗಳನ್ನು ಬಿಡುಗಡೆ ಮಾಡಿದೆ. ಈ ಬೈಕ್ ನ ಹೆಸರು ಒಬೇನ್ ರೋರ್ (Oben Rorr) ಎಂದಾಗಿದೆ. ಒಬೇನ್ ರೋರ್ ಎಲೆಕ್ಟ್ರಿಕ್ ಬೈಕ್ (Oben Rorr Electric Bike) ಇದೇ ತಿಂಗಳಿನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ನಿಮಗೆ ಈ ಬೈಕ್ ಅತ್ಯುತ್ತಮ ವೈಶಿಷ್ಟ್ಯದ ಜೊತೆಗೆ ಕೈಗೆಟುಕುವ ಬೆಲೆಗೆ ಲಭ್ಯವಾಗಲಿದೆ. ಹಾಗಾದ್ರೆ ಈ ಬೈಕ್ ನ ಫೀಚರ್ ಹೇಗಿದೆ? ಬೆಲೆ ಎಷ್ಟಿದೆ? ಬನ್ನಿ ಈ ಲೇಖನದ ಮೂಲಕ ತಿಳಿಯೋಣ.
ಈ ಬೈಕಿನ ಗರಿಷ್ಠ ವೇಗ ಗಂಟೆಗೆ 100 ಕಿ.ಮೀ. ಆಗಿದೆ. ಈ ಬೈಕ್
ಅನ್ನು ಒಮ್ಮೆ ಚಾರ್ಜ್ ಮಾಡಿದ್ರೆ 187 ಕಿಲೋಮೀಟರ್ ದೂರ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಅತಿ ಕಡಿಮೆ ಸಮಯದಲ್ಲಿ ಚಾರ್ಜ್ ಮಾಡಬಹುದಾಗಿದೆ. ಬ್ಯಾಟರಿಯನ್ನು 80 ಪ್ರತಿಶತಕ್ಕೆ ಚಾರ್ಜ್ ಮಾಡಲು 2 ಗಂಟೆ ತೆಗೆದುಕೊಳ್ಳುತ್ತದೆ. ಈ ಬೈಕ್ ಕೇವಲ 3 ಸೆಕೆಂಡ್‌ಗಳಲ್ಲಿ ಗಂಟೆಗೆ 0 ರಿಂದ 40 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಬೈಕ್ ನಲ್ಲಿ 12.3 ಬಿ ಎಚ್ ಪಿ ಪವರ್ ಉತ್ಪಾದಿಸಬಲ್ಲ ಪವರ್ಫುಲ್ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ.
ಈ ಬೈಕ್ ನಿಯೋ ಕ್ಲಾಸಿಕ್ ವಿನ್ಯಾಸದೊಂದಿಗೆ ಸ್ಟೈಲಿಶ್ ಆಗಿದೆ. ಅಷ್ಟೇ ಅಲ್ಲ ಈ ಬೈಕ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಡ್ರೈವರ್ ಅಲರ್ಟ್ ಸಿಸ್ಟಮ್, ಥೆಫ್ಟ್ ಅಲರ್ಟ್ ಸಿಸ್ಟಮ್ ಅಳವಡಿಸಲಾಗಿದ್ದು, ನೀವು ಪಾರ್ಕ್ ಮಾಡಿರುವ ಬೈಕ್ ಯಾರಾದರೂ ಕದ್ದರೆ ನಿಮಗೆ ಎಚ್ಚರಿಕೆಯ ಸಂದೇಶ ನೀಡುತ್ತದೆ. ನೀರಿನ ನಿರೋಧಕ ಬ್ಯಾಟರಿ, ಜಿಪಿಎಸ್, ಹೆಚ್ಚಿನ ಗೌಂಡ್ ಕ್ಲಿಯರೆನ್ಸ್ ಮುಂತಾದ ವೈಶಿಷ್ಟ್ಯಗಳನ್ನು ಈ ಬೈಕ್ ಪಡೆದಿದೆ. ಬೈಕ್ ನ ಎರಡು ವೀಲ್ ಗಳಿಗೆ ಡಿಸ್ಕ್ ಬ್ರೇಕ್ ಅಳವಡಿಸಲಾಗಿದ್ದು, ಸುರಕ್ಷತೆಯ ರೈಡಿಂಗ್ ಮಾಡಬಹುದು.
ಒಬೇನ್ ರೋರ್ ಬೈಕ್ ನ ಎಕ್ಸ್ ಶೋ ರೂಂ ಬೆಲೆ 1.49 ಲಕ್ಷ ರೂ. ಆಗಿದೆ. ಆದರೆ ನೀವು ಕೇವಲ ಮೂವತ್ತು ಸಾವಿರ ರೂಪಾಯಿಗಳ ಡೌನ್ ಪೇಮೆಂಟ್ ಮಾಡಿ ಈ ಬೈಕ್ ಅನ್ನು ಬುಕ್ ಮಾಡಿಕೊಳ್ಳಬಹುದು. ತಿಂಗಳಿಗೆ 5000 ಈಎಂಐ ಮಾಡಿಸಿಕೊಂಡರೆ ಈ ಅತ್ಯುತ್ತಮ ಬೈಕ್ ನಿಮ್ಮದಾಗುತ್ತದೆ. ಇನ್ನು ಈವರೆಗೆ 21,000ಕ್ಕೂ ಹೆಚ್ಚು ಫ್ರೀ ಬುಕ್ಕಿಂಗ್ ಅನ್ನು ಈ ಎಲೆಕ್ಟ್ರಿಕ್ ಬೈಕ್ ಪಡೆದುಕೊಂಡಿದೆ.
ರೋರ್ ಎಲೆಕ್ಟ್ರಿಕ್ ಬೈಕ್ ಬ್ಯಾಟರಿಯು, ಕೇಂದ್ರ ಸರ್ಕಾರದ ನಿಯಮಾನುಸಾರ ಸುರಕ್ಷತಾ ಮಾನದಂಡಗಳನ್ನು (AIS 156 ತಿದ್ದುಪಡಿ III ಹಂತ II) ಪೂರೈಸಿದೆ ಎಂದು ಓಬೆನ್ ಕಂಪನಿ ಹೇಳಿದೆ. ಈ ಮೂಲಕ ಓಬೆನ್ ರೋರ್ ಎಲೆಕ್ಟ್ರಿಕ್ ಬೈಕ್ ಅತ್ಯುತ್ತಮವಾಗಿದೆ.
ಅಲ್ಲದೆ, ಬ್ಯಾಟರಿ ಮೂರು ವರ್ಷಗಳ ವಾರಂಟಿ ಹೊಂದಿದೆ. ಮೋಟಾರು 3 ವರ್ಷಗಳ ವಾರಂಟಿಯನ್ನು ಸಹ ಹೊಂದಿದೆ.