July 2023 Full Moon: ವಿಶ್ವ ಕೌತುಕ ಈ ದಿನ: ಭೂಮಿಗೆ 14000 ಮೈಲು ಹತ್ತಿರಕ್ಕೆ ಬರಲಿದ್ದಾನೆ ಚಂದ್ರ ಮಾಮ !

latest news intresting news July 2023 Full Moon

July 2023 Full Moon: ಇಂದು (ಜುಲೈ 3) ಹುಣ್ಣಿಮೆ. ಇಂದಿನ ಹುಣ್ಣಿಮೆಯನ್ನು ಬಕ್ ಅಥವಾ ಥಂಡರ್ ಮೂನ್ ಎಂದೂ ಕರೆಯಲಾಗುತ್ತದೆ. ಇಂದು ಆಗಸದಲ್ಲಿ ಖಗೋಳದ ಕೌತುಕ ಗೋಚರವಾಗಲಿದೆ ಎಂದು ನಾಸಾ ವರದಿ ಮಾಡಿದೆ. ಈದಿನ ಭೂಮಿಗೆ 14000 ಮೈಲು ಹತ್ತಿರಕ್ಕೆ ಚಂದ್ರ ಮಾಮ ಬರಲಿದ್ದಾನೆ ಎನ್ನಲಾಗಿದೆ.

 

ಜುಲೈ 3, 2023ರಂದು ಬೆಳಿಗ್ಗೆ ಹುಣ್ಣಿಮೆ ಆರಂಭವಾಗುತ್ತದೆ. ಭೂಮಿಯ ಅಕ್ಷವು 7:39 ಎಂಎಂ ಇಡಿಟಿ ರೇಖಾಂಶದಲ್ಲಿ ಸೂರ್ಯನಿಗೆ ಎದುರುಗೊಳ್ಳುತ್ತದೆ. ಇದು ರವಿವಾರ ತಡರಾತ್ರಿ ಇಂಟರ್‌ನ್ಯಾಷನಲ್‌ ಡೇಟ್‌ ಲೈನ್‌ ವೆಸ್ಟ್‌ ಟೈಮ್‌ ಝೋನ್‌ನಿಂದ ಮತ್ತು ಮಂಗಳವಾರ ಮುಂಜಾನೆ ಚಾಥಮ್‌ ಐಲ್ಯಾಂಡ್‌ ಟೈಮ್‌ ಝೋನ್‌ವರೆಗೂ ಇರುತ್ತದೆ. ಈ ಸಮಯದಲ್ಲಿ ಶನಿವಾರ ಸಂಜೆಯಿಂದ ಮಂಗಳವಾರ ಸಂಜೆಯವರೆಗೆ 3 ದಿನಗಳ ಕಾಲ ಚಂದ್ರನು ಪೂರ್ಣ ಗಾತ್ರದಲ್ಲಿ ಕಾಣಿಸಿಕೊಳ್ಳುತ್ತಾನೆ. ಜೊತೆಗೆ ಈದಿನ ಚಂದ್ರ ಭೂಮಿಗೆ 14,000 ಮೈಲಿ ಹತ್ತಿರವಿರುತ್ತಾನೆ ಎಂದು ನಾಸಾ ವರದಿ ಮಾಡಿದೆ.

ಬಕ್ ಮೂನ್ ವೀಕ್ಷಿಸುವುದು ಹೇಗೆ?

ಜುಲೈ ಸೂಪರ್ ಮೂನ್ ಅಥವಾ ಬಕ್ ಮೂನ್ ವೀಕ್ಷಿಸಲು ಚಂದ್ರೋದಯ ಅಥವಾ ಚಂದ್ರ ಅಸ್ತಮಿಸುವ ಸಮಯ ಉತ್ತಮ.
ಈ ವೇಳೆ ನೀಲಾಕಾಶದಲ್ಲಿ ಚಂದ್ರ ಬೃಹತ್ ಆಕಾರದಲ್ಲಿ ಕಾಣಿಸಿಕೊಳ್ಳುತ್ತಾನೆ. ಆಕಾಶವು ಸ್ಪಷ್ಟವಾಗಿದ್ದರೆ, ಸೂಪರ್ ಮೂನ್​​ನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು. ಇಲ್ಲದಿದ್ದರೆ ಪರಿಪೂರ್ಣ ನೋಟವನ್ನು ಪಡೆಯಲು ಬೈನಾಕ್ಯುಲರ್ ಅಥವಾ ದೂರದರ್ಶಕವನ್ನು ಬಳಸಬಹುದಾಗಿದೆ.

Leave A Reply

Your email address will not be published.