Anand Mahindra: ಅದೊಂದು ಕಾರು ಇಡೀ ಮಹೀಂದ್ರಾ ಸಾಮ್ರಾಜ್ಯವನ್ನು ಉಳಿಸಿತ್ತಂತೆ! ಬೃಹತ್ ಸಾಮ್ರಾಜ್ಯ ಕಟ್ಟಲು ಸಹಾಯ ಮಾಡಿದ ಆ ಡ್ಯಾಶಿಂಗ್ ಕಾರು ಯಾವುದು ?
intresting news Anand Mahindra That one car saved the whole Mahindra Empire
Anand Mahindra: ಭಾರತದ ಪ್ರಸಿದ್ದ ಕೈಗಾರಿಕೋದ್ಯಮಿ, ದೇಶದ ಅತ್ಯುನ್ನತ ಉದ್ಯಮಪತಿಗಳಲ್ಲಿ ಒಬ್ಬರಾದ ಆನಂದ್ ಮಹೀಂದ್ರಾ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ ಮಾಹಿತಿ ನಾವು ತಿಳಿಯಲೇ ಬೇಕು. ಯಾಕಂದ್ರೆ ಜೀವನದಲ್ಲಿ ಹೀಗೂ ಒಂದು ಯಶಸ್ಸಿನ ಟರ್ನಿಂಗ್ ಪಾಯಿಂಟ್ ಬರುತ್ತೆ ಅನ್ನೊದು ನಿಮಗೆ ಗೊತ್ತಾಗುತ್ತೆ ನೋಡಿ.
ಹೌದು, ಆನಂದ್ ಮಹೀಂದ್ರಾ ಅವರು ಮಹೀಂದ್ರಾ ಗ್ರೂಪ್, ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಮತ್ತು ಟೆಕ್ ಮಹೀಂದ್ರಾ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಗ್ರೂಪ್ ದೇಶೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ ಪ್ರಮುಖ ಕೈಗಾರಿಕಾ ವಲಯಗಳ ವ್ಯಾಪ್ತಿಯನ್ನು ವಿಸ್ತರಿಸಿದೆ. ಇನ್ನು ಮಹೀಂದ್ರ ಗ್ರೂಪ್ (Mahindra Group) ಭಾರತದ 10 ಅಗ್ರಮಾನ್ಯ ಸಂಸ್ಥೆಗಳಲ್ಲೂ ಒಂದು. ಆಟೊಮೊಬೈಲ್ ಜೊತೆಗೆ ಹಣಕಾಸು, ರಕ್ಷಣೆ, ವಿದ್ಯುತ್ ಉತ್ಪಾದನೆ, ಕೃಷಿ ಉಪಕರಣ, ಐಟಿ, ರಿಯಲ್ ಎಸ್ಟೇಟ್, ಶಿಕ್ಷಣ ಹೀಗೆ ಹಲವು ಕ್ಷೇತ್ರಗಳಲ್ಲಿ ಮಹೀಂದ್ರ ಗ್ರೂಪ್ ಅಸ್ತಿತ್ವ ಹೊಂದಿದೆ. ಆದರೆ ಇದಕ್ಕೆಲ್ಲಾ ಆ ಒಂದು ಕಾರು ಕಾರಣವಂತೆ. ಏನದು ಬನ್ನಿ ನೋಡೋಣ.
ಈಗಾಗಲೇ 2002ರಲ್ಲಿ ಬಿಡುಗಡೆ ಆಗಿದ್ದ ಸ್ಕಾರ್ಪಿಯೋ ಕಾರು ಭರ್ಜರಿ ಯಶಸ್ಸು ಕಾಣದೇ ಹೋಗಿದ್ದರೆ ಮಹೀಂದ್ರ ಕಂಪನಿಯ ಬೋರ್ಡ್ ತನ್ನನ್ನು ಹೊರಗೆ ಓಡಿಸುತ್ತಿತ್ತು ಎಂದು ಛೇರ್ಮನ್ ಆನಂದ್ ಮಹೀಂದ್ರ ಹೇಳಿಕೊಂಡಿದ್ದಾರೆ.
ಮುಖ್ಯವಾಗಿ ಮಹೀಂದ್ರ ಕಂಪನಿಯ ಇತಿಹಾಸ 1945ರಲ್ಲಿ ಆರಂಭವಾಗುತ್ತದೆ. ಮಹೀಂದ್ರ ಗ್ರೂಪ್ನ ಈಗಿನ ಛೇರ್ಮನ್ ಆನಂದ್ ಮಹೀಂದ್ರ (Anand Mahindra) ಮೂರನೇ ತಲೆಮಾರಿನವರು. ಮೂಲ ಕಂಪನಿಯ ಸಂಸ್ಥಾಪಕರಾದ ಜೆ.ಸಿ. ಮಹೀಂದ್ರ ಮತ್ತು ಕೆ.ಸಿ. ಮಹೀಂದ್ರ ಅವರ ಮೊಮ್ಮಗ ಆನಂದ್ ಮಹೀಂದ್ರ. ತಾವು ಒಂದು ಸಮಯದಲ್ಲಿ ಸಂಸ್ಥೆ ತೊರೆಯಬೇಕಾದ ಸಂಭವನೀಯತೆ ಇದ್ದ ಪರಿಸ್ಥಿತಿಯ ಬಗ್ಗೆ ಆನಂದ್ ಮಹೀಂದ್ರ ಜುಲೈ 1ರಂದು ಮಾತನಾಡಿದ್ದಾರೆ.
ಈ ಹಿಂದೆ ಟ್ರಾಕ್ಟರ್ ಉತ್ಪಾದನೆ ಕ್ಷೇತ್ರದಲ್ಲಿ ಗಟ್ಟಿಯಾಗಿರುವ ಮಹೀಂದ್ರ ಸಂಸ್ಥೆ ಕಾರಿನ ವಿಚಾರದಲ್ಲಿ ಯಶಸ್ಸು ಗಳಿಸಿದ್ದು ಅಷ್ಟಕಷ್ಟೇ. 2002ರಲ್ಲಿ ಮಹೀದ್ರ ಸ್ಕಾರ್ಪಿಯೋ ಬಿಡುಗಡೆ ಆದಾಗ ಯಾರೂ ಕೂಡ ಅದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ ಎಂದು ನಿರೀಕ್ಷಿಸಿರಲಿಲ್ಲ.
ಕಾರಿನ ಡಿಸೈನ್ ಮತ್ತು ಎಂಜಿನಿಯರಿಂಗ್ನಲ್ಲಿ ಪಕ್ಕಾ ಭಾರತೀಯತನ ಇದ್ದ ಸ್ಕಾರ್ಪಿಯೋ ಸೂಪರ್ ಹಿಟ್ ಆಯಿತು. ಆಟೊಕಾರ್ ಮ್ಯಾಗಝಿನ್ನ ಸಂಪಾದಕ ಹರ್ಮಾಜ್ ಸೊರಾಬ್ಜಿ ಅವರು ಈ ಕಾರಿನ ಬಗ್ಗೆ ಟ್ವೀಟ್ ಮಾಡಿ, ಸ್ಕಾರ್ಪಿಯೋ ಜೊತೆ ಬೇರೆ ಯಾವ ಕಾರೂ ನೇರ ಪೈಪೋಟಿ ಮಾಡಲು ಸಾಧ್ಯವಿಲ್ಲ ಎಂದು ಗುರುವಾರ (ಜೂನ್ 29) ಹೊಗಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರ, ಹೌದು, ಮಹೀಂದ್ರದ ಅತ್ಯಂತ ಜನಪ್ರಿಯ ಕಾರ್ ಆದ ಸ್ಕಾರ್ಪಿಯೋ ಯಶಸ್ಸು ಕಾಣದೇ ಹೋಗಿದ್ದರೆ ತಮ್ಮನ್ನು ಮಹೀಂದ್ರ ಗ್ರೂಪ್ ಮಂಡಳಿ ಹೊರದಬ್ಬುತ್ತಿತ್ತು. ತಮ್ಮ ವೃತ್ತಿಗೆ ಆಧಾರ ಕೊಟ್ಟಿದ್ದೇ ಸ್ಕಾರ್ಪಿಯೋ ಎಂದು ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಎಸ್ಯುವಿ ಕಾರ್ ಆಗಿರುವ ಮಹೀಂದ್ರ ಸ್ಕಾರ್ಪಿಯೋ ಭಾರತದಲ್ಲಿ ಈಗಲೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ಹಲವು ಬಾರಿ ಪರಿಷ್ಕರಣೆಗೊಂಡಿದ್ದರೂ ಅದರ ಮೂಲ ವಿನ್ಯಾಸ ಮತ್ತು ಎಂಜಿನಿಯರಿಂಗ್ನ ಕಲೆ ಹಾಗೇ ಇದೆ. ಇದರ ಬೆಲೆ 13 ಲಕ್ಷ ರೂನಿಂದ 32 ಲಕ್ಷ ರೂವರೆಗೂ ಇದ್ದರು ಸಹ ಅದರ ಡಿಸೈನ್ನಲ್ಲಿ ಸ್ವಂತಿಕೆ ಇದೆ ಎಂದು ಹೇಳಿಕೊಳ್ಳಲಾಗಿದೆ.
I’m sure you haven’t forgotten how we were in Nashik together to road test the prototype @hormazdsorabjee Phew, we’ve come a long way since then! But this trusty warhorse has always been at our side, ready to ride into battle with us. If it had flopped, the board would have fired… https://t.co/qklIM7lbtw
— anand mahindra (@anandmahindra) July 1, 2023