Flight Ticket: ಕೇವಲ 1499 ರೂ. ಬೆಲೆಯಲ್ಲಿ ವಿಮಾನಯಾನ! ಮಾನ್ಸೂನ್ ಸ್ಪೆಷಲ್ ಆಫರ್ ಘೋಷಣೆ

Latest news Vistara monsoon sale 2023 offer Flight tickets with rupees 1499 only bumper offer

Flight Ticket Booking: ಅತಿಯಾದ ದೂರದ ಪ್ರಯಾಣ ಮಾಡಲು ವಿಮಾನವನ್ನೇ ಆಯ್ಕೆ ಮಾಡುತ್ತೇವೆ. ಯಾಕೆಂದರೆ ವಿಮಾನದಲ್ಲಿ ಆರಾಮದಾಯಕವಾಗಿ ಶೀಘ್ರ ಪ್ರಯಾಣ ಮಾಡಬಹುದಾಗಿದೆ ಎಂದು. ಇನ್ನು ಕೆಲವರಿಗೆ ಜೀವಮಾನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣ ಮಾಡಬೇಕು ಆಸೆ ಇರುತ್ತದೆ ಆದರೆ ವಿಮಾನ ಪ್ರಯಾಣ ಅತಿ ದುಬಾರಿ ಎಂದು ಹಿಂಜರಿದಿರಬಹುದು.

 

ಇದೀಗ ಅತಿ ಕಡಿಮೆ ಬೆಲೆಯಲ್ಲಿ ನೀವು ವಿಮಾನದಲ್ಲಿ ಓಡಾಡಲು ಇಲ್ಲೊಂದು ಆಫರ್ ಇದೆ. ಹೌದು, ಪೂರ್ಣ-ಸೇವಾ ವಾಹಕ ವಿಸ್ತಾರಾ — ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಇಂಟರ್ನ್ಯಾಷನಲ್ ಏರ್ಲೈನ್ಸ್ ಒಕ್ಕೂಟದ ಭಾಗ — ವಿಶೇಷ, ಸೀಮಿತ ಅವಧಿಯ ಮಾರಾಟವನ್ನು ಘೋಷಿಸಿದೆ.

ವಿಮಾನಯಾನ ಸಂಸ್ಥೆಯಾದ ವಿಸ್ತಾರಾ ಏರ್‌ಲೈನ್ ಇತ್ತೀಚಿನ ಮಾನ್ಸೂನ್ ಸೇಲ್ ಆರಂಭ ಮಾಡಿದ್ದು, ಇದು ವಿಮಾನದಲ್ಲಿ ಪ್ರಯಾಣ ಮಾಡಬೇಕು(Flight Ticket Booking) ಎನ್ನುವ ಹಲವು ಜನರ ಕನಸನ್ನ ನನಸು ಮಾಡುತ್ತದೆ.

ವಿಸ್ತಾರಾ ಏರ್‌ಲೈನ್ ಕಂಪನಿ ಆರಂಭಿಸಿರುವ ವಿಸ್ತಾರಾ ಮಾನ್ಸೂನ್ ಸೇಲ್ ಕೇವಲ ಒಂದು ನಿಗದಿತ ಸಮಯಕ್ಕೆ ಸೀಮಿತವಾಗಿದ್ದು. ಸದ್ಯದ ಆಫರ್ ಪ್ರಕಾರ ಜುಲೈ 4 ರವರೆಗೆ ಮಾತ್ರ ನೀವು ಕಡಿಮೆ ಬೆಲೆಯ ಟಿಕೆಟ್​ ಖರೀದಿ ಮಾಡಬಹುದಾಗಿದೆ.

ವಿಸ್ತಾರಾ ಮಾನ್ಸೂನ್ ಆಫರ್ ಟಿಕೆಟ್​ ಬೆಲೆಗಳು ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ದೇಶೀಯ ಪ್ರಯಾಣದ ಟಿಕೆಟ್ ದರ ರೂ. 1499 ರಿಂದ ಪ್ರಾರಂಭವಾಗುತ್ತದೆ. ಅಲ್ಲದೇ ವಿದೇಶ ಪ್ರಯಾಣ ಮಾಡಲು ಸಹ ಟಿಕೆಟ್​ ದರ ಕಡಿಮೆ ಇದ್ದು, ಕೇವಲ ರೂ. 11,799 ರಿಂದ ಆರಂಭವಾಗುತ್ತದೆ.

ಇನ್ನೇಕೆ ತಡ, ನೀವು ಸಹ ಟಿಕೆಟ್​ ಬುಕ್ ಮಾಡಬಹುದು. ಇದರ ವಿಶೇಷತೆ ಎಂದರೆ ಟಿಕೆಟ್​ ಅನ್ನು ಬುಕ್ ಮಾಡಲು ಜುಲೈ 4 ಕೊನೆಯ ದಿನ, ಆದರೆ ಪ್ರಯಾಣ ಮಾಡಲು ಮಾರ್ಚ್ 23, 2024 ಅಂದರೆ ಮುಂದಿನ ವರ್ಷದ ವರೆಗೆ ಸಮಯವಿದೆ. ಹಾಗಾಗಿ ಅಲ್ಲಿಯವರೆಗೆ ನಿಮ್ಮಿಷ್ಟದ ದಿನದಂದು ಬುಕ್ ಮಾಡಬಹುದು.

ಇನ್ನು ನೀವು ಟೆಕೆಟ್​ ಬುಕ್ ಮಾಡಲು ಕಂಪನಿಯ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಮಾಡಬಹುದು. ಇಷ್ಟೇ ಅಲ್ಲದೇ, ನಿಮ್ಮ ಹತ್ತಿರದ ಟ್ರಾವೆಲ್ ಏಜೆಂಟ್‌ ಮೂಲಕ ಸಹ ನೀವು ಮೊದಲೇ ಟಿಕೆಟ್​ ಬುಕ್ ಮಾಡಲು ಅವಕಾಶ ನೀಡಲಾಗಿದೆ.

ದೇಶೀಯ ವಿಮಾನ ಟಿಕೆಟ್ ದರ ರೂ. 1499 ರಿಂದ ಆರಂಭವಾಗುವುದು ಎಕಾನಾಮಿಕ್ ಕ್ಲಾಸ್​ ದರವಾಗಿದ್ದು, ಪ್ರೀಮಿಯಂ ಎಕಾನಮಿ ಕ್ಲಾಸ್ ಆಗಿದ್ದರೆ, ಟಿಕೆಟ್ ದರ ರೂ. 1999 ರಿಂದ ಆರಂಭವಾಗುತ್ತದೆ. ಹಾಗೆಯೇ, ಬ್ಯುಸಿನೆಸ್​ ಕ್ಲಾಸ್​ ಟಿಕೆಟ್​ ಬೇಕು ಎಂದರೆ ಅದರ ಬೆಲೆ ರೂ. 9999 ರಿಂದ ಪ್ರಾರಂಭವಾಗಲಿದೆ.

ಹಾಗೆಯೇ ಎಕನಾಮಿ ಕ್ಲಾಸ್​ನ ಅಂತರಾಷ್ಟ್ರೀಯ ಪ್ರಯಾಣವಾಗಿದ್ದರೆ ವಿಮಾನ ಟಿಕೆಟ್ ದರ ರೂ. 11,799 ಆಗಿದ್ದು, ಇದು ದೆಹಲಿ ಹಾಗೂ ಕಠ್ಮಂಡು ಮಾರ್ಗದ ದರವಾಗಿದೆ. ಹಾಗೆಯೇ ಪ್ರೀಮಿಯಂ ಎಕಾನಾಮಿಕ್ ಕ್ಲಾಸ್ ಆಗಿದ್ದರೆ ಟಿಕೆಟ್ ಬೆಲೆ ರೂ. 13,599 ರಿಂದ ಹಾಗೂ ಬ್ಯುಸಿನೆಸ್​ ಕ್ಲಾಸ್​ ಬೆಲೆ ಬೆಲೆ 38,999 ರಿಂದ ಆರಂಭವಾಗುತ್ತದೆ.

ಮಾರಾಟದ ಅಡಿಯಲ್ಲಿ ಬುಕಿಂಗ್‌ಗಳು ಪ್ರಸ್ತುತ ತೆರೆದಿರುತ್ತವೆ ಮತ್ತು ಜುಲೈ 4 ರಂದು 23:59 ರವರೆಗೆ ಮುಂದುವರಿಯುತ್ತದೆ. ಆಸಕ್ತ ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ www.airvistara.com , iOS ಮತ್ತು Android ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ Vistara’s Airport Ticket Offices (ATOs) ಮೂಲಕ ಟಿಕೆಟ್ ಬುಕ್ ಮಾಡಬಹುದು.

ವಿಸ್ತಾರಾ ಮಾನ್ಸೂನ್ ಸೇಲ್ 2023: ಬುಕ್ ಮಾಡುವ (Flight Ticket Booking) ವಿಧಾನ:
ಹಂತ 1: Vistara ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ — www.airvistara.com .

ಹಂತ 2: ಭಾಷೆಯನ್ನು ಆಯ್ಕೆ ಮಾಡಿ ಮತ್ತು ‘ಮುಗಿದಿದೆ’ ಕ್ಲಿಕ್ ಮಾಡಿ.

ಹಂತ 3: ಮುಖಪುಟದಲ್ಲಿ ಲಭ್ಯವಿರುವ ‘ಮಾನ್ಸೂನ್ ಸೇಲ್’ ಮೇಲೆ ಕ್ಲಿಕ್ ಮಾಡಿ.

ಹಂತ 4: ಹೊಸ ಪುಟ ತೆರೆದುಕೊಳ್ಳುತ್ತದೆ. ಕೆಳಗೆ ಸ್ಕ್ರಾಲ್ ಮಾಡಿ ಮತ್ತು ‘ಮಾನ್ಸೂನ್ ಸೇಲ್’ ನೋಡಿ.

ಹಂತ 5: ಈಗ ‘ಬುಕ್ ನೌ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 6: ಹೊಸ ಪುಟ ತೆರೆದುಕೊಳ್ಳುತ್ತದೆ. ದಿನಾಂಕ, ತಲುಪಬೇಕಾದ ಸ್ಥಳ, ಕ್ಯಾಬಿನ್ ವರ್ಗ ಇತ್ಯಾದಿ ವಿವರಗಳನ್ನು ನಮೂದಿಸಿ ಮತ್ತು ಫ್ಲೈಟ್‌ಗಳಿಗಾಗಿ ಹುಡುಕಿ.

ಹಂತ 7: ಸೂಕ್ತವಾದ ವಿಮಾನವನ್ನು ಆಯ್ಕೆಮಾಡಿ ಮತ್ತು ಪಾವತಿ ಮಾಡಿ.
ಈಗ ನಿಮ್ಮ ವಿಮಾನವನ್ನು ಯಶಸ್ವಿಯಾಗಿ ಬುಕ್ ಮಾಡಲಾಗಿದೆ.

ಅಂತಾರಾಷ್ಟ್ರೀಯ ರಿಯಾಯಿತಿ ದರಗಳ ಪಟ್ಟಿ ಇಲ್ಲಿದೆ :

Flight Ticket booking
Image source: Informal news

Flight Ticket booking

ಇದನ್ನೂ ಓದಿ: ಎಕ್ಸಾಂ ಉತ್ತರ ಪತ್ರಿಕೆಯಲ್ಲಿ ‘ ಐ ಲವ್ ಪೂಜಾ ‘ ಬರಹ, 300 ರೂಪಾಯಿ ನೋಟು ಬೇರೆ – ಎಲ್ಲಿ ಆಗಿದ್ದೇನು ?

Leave A Reply

Your email address will not be published.