LPG Cylinder: ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ, ಕೇವಲ 820 ರೂ. ಸಿಗಲಿದೆ ಗ್ಯಾಸ್ !
Latest Karnataka news good news for housewives gas cylinder available for just rupees 820
LPG Cylinder: ಪ್ರತಿ ತಿಂಗಳ ಮೊದಲನೆಯ ದಿನದಲ್ಲಿ ಕೆಲವು ನಿಯಮಗಳನ್ನು ಪರಿಷ್ಕರಿಸಲಾಗುತ್ತದೆ. ಈ ನಿಯಮಗಳು ಸಾಮಾನ್ಯ ಜನರ ಮೇಲೂ ಪರಿಣಾಮ ಬೀರುತ್ತವೆ. ಆದರೆ ಈ ತಿಂಗಳು ಎಲ್ಪಿಜಿ ಗ್ಯಾಸ್ ಸಿಲಿಂಡರ್ (LPG Cylinder) ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಆದರೆ ತೈಲ ಕಂಪನಿಗಳು ಗ್ರಾಹಕರಿಗೆ ಸಿಹಿ ಸುದ್ದಿಯನ್ನ ನೀಡಿದ್ದು, ಇನ್ಮುಂದೆ ಗ್ಯಾಸ್ ಸಿಲಿಂಡರ್ ಬೆಲೆ ಕೇವಲ 820 ರೂಪಾಯಿಗೆ ತೆಗೆದುಕೊಳ್ಳಬಹುದು ಎಂದು ತಿಳಿಸಿದೆ.
ತೈಲ ಕಂಪನಿಗಳು ಈಗ ಹೊಸ ಗ್ಯಾಸ್ ಸಿಲಿಂಡರ್ ಗಳನ್ನು ನೀಡುತ್ತಿವೆ. ಅವುಗಳೆಂದರೆ ಸಂಯೋಜಿತ ಅನಿಲ ಸಿಲಿಂಡರ್’ಗಳು. ಇದು ಸಾಮಾನ್ಯ ಸಿಲಿಂಡರ್’ಗಳಿಗಿಂತ ಕಡಿಮೆ ತೂಕವನ್ನ ಹೊಂದಿದೆ. ಇದು ಪಾರದರ್ಶಕವಾಗಿದ್ದು, ಮಹಿಳೆಯರಿಗೆ ಹೊಂದಿಕೊಳ್ಳಲು ಸುಲಭವಾಗಿದೆ.
ಹೌದು, ಸಾಮಾನ್ಯ ಗ್ಯಾಸ್ ಸಿಲಿಂಡರ್ 14.2 ಕೆಜಿ ಅನಿಲವನ್ನ ಹೊಂದಿದ್ದು, ಅವುಗಳ ಪ್ರಸ್ತುತ ಬೆಲೆ 1155 ರೂಪಾಯಿ ಆಗಿದೆ. ಸದ್ಯ ಈ ಸಂಯೋಜಿತ ಸಿಲಿಂಡರ್ 10 ಕೆಜಿ ಅನಿಲವನ್ನ ಹೊಂದಿದ್ದು, ಈ ಸಿಲಿಂಡರ್ ಬೆಲೆ 820 ರೂಪಾಯಿ ಆಗಿದೆ. ಸಾಮಾನ್ಯ ಗ್ಯಾಸ್ ಸಿಲಿಂಡರ್ ಬೆಲೆಗೆ ಹೋಲಿಸಿದರೆ ಇದು ಸ್ವಲ್ಪ ಅಗ್ಗವಾಗಿರುವುದರಿಂದ ಗ್ರಾಹಕರಿಗೆ ಸ್ವಲ್ಪ ರಿಲೀಫ್ ಸಿಗುತ್ತದೆ. ಪ್ರಸ್ತುತ ಈ ಹೊಸ ರೀತಿಯ ಗ್ಯಾಸ್ ಸಿಲಿಂಡರ್’ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇದನ್ನೂ ಓದಿ: ವಿದ್ವಂಸಕ ಕೃತ್ಯಕ್ಕೆ ರೋಬೋಟ್ ಬಳಕೆ: ಕರಾಳ ಸತ್ಯ ಹೊರಕ್ಕೆ !