Gruha jyothi Scheme: ನೀವಿನ್ನೂ ‘ಗೃಹಜ್ಯೋತಿ’ಗೆ ಅರ್ಜಿ ಹಾಕಿಲ್ಲವೇ..? ಹಾಗಿದ್ರೆ ಸರ್ಕಾರದಿಂದ ಬಂತು ಹೊಸ ರೂಲ್ಸ್ !!

Latest Karnataka news Congress government new notice for those who have not applied for the gruha jyoti scheme till now

Gruha jyoti Scheme: ಕಾಂಗ್ರೆಸ್ ಸರ್ಕಾರ (Congress Govt) ತನ್ನ ಐದು ಗ್ಯಾರಂಟಿಗಳನ್ನು (Five Guarantees) ಒಂದೊಂದಾಗೇ ಜಾರಿ ಮಾಡುತ್ತಿದೆ. ಕಳೆದ ತಿಂಗಳು ಶಕ್ತಿ ಯೋಜನೆ ಜಾರಿಯಾಗಿದ್ದು ಇದೀಗ ನಿನ್ನೆಯಿಂದ(ಜುಲೈ 1) ಗೃಹಜ್ಯೋತಿಯೂ (Gruha jyoti Scheme) ಜಾರಿಯಾಗಿದ್ದು, ಇನ್ನು ರಾಜ್ಯದ ಜನ 200 ಯುನಿಟ್ ವರೆಗೂ ಉಚಿತವಾಗಿ ವಿದ್ಯುತ್ ಬಳಸಬಹುದು.

ಹೌದು, ನೀವು 200 ಯೂನಿಟ್ ಉಚಿತ ವಿದ್ಯುತ್‌ (200 Unit Electricity) ಪಡೆಯುವ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ ಫ್ರೀಯಾಗಿ ಕರೆಂಟ್ ಬಳಸಹಬಹುದು. ಇನ್ನು ಜೂನ್‌ 18 ರಿಂದಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ ಇಂಧನ ಸಚಿವ ಕೆ ಜೆ ಜಾರ್ಜ್(K J George) ಅವರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂಬುದಿಲ್ಲ. ಯಾವಾಗ ಬೇಕಾದರೂ ಹಾಕಬಹುದು ಎಂದಿದ್ದಾರೆ. ಈ ಬೆನ್ನಲ್ಲೇ ಗೃಹಜ್ಯೋತಿ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಬಗೆಗೆ ಕೆಲ ನಿಯಮಗಳನ್ನೂ ಹೇಳಿದ್ದಾರೆ.

ಹೌದು, ಚಿಕ್ಕಮಗಳೂರಿನಲ್ಲಿ(Chkkamaglure) ಮಾತನಾಡಿದ ಜಾರ್ಜ್ ಅವರು ಈಗಾಗಲೇ 80 ಲಕ್ಷಕ್ಕೂ ಅಧಿಕ ಜನರು ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ನೋಂದಾಯಿಸಿದ್ದಾರೆ. ಅರ್ಜಿ ನೋಂದಾಯಿಸಿದರೆ ಮಾತ್ರ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಗೃಹ ಬಳಕೆಗಾಗಿ ಉಚಿತ ವಿದ್ಯುತ್ ಅನ್ನು ನೀಡಲಾಗುವುದು. ಆದರೆ 200 ಯೂನಿಟ್ ಗಿಂತ ಹೆಚ್ಚಾಗಿ ವಿದ್ಯುತ್ ಬಳಸಿದರೆ ಆಗ ಮಾತ್ರ ನೀವು ಬಿಲ್ ಕಟ್ಟಬೇಕಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಜೊತೆಗೆ ಯೋಜನೆಯ ವಿವರ ಹಾಗೂ ನಿಯಮಗಳನ್ನು ಕೂಡ ತಿಳಿಸಿದ ಅವರು ಕೇವಲ ಗೃಹಬಳಕೆಗಾಗಿ ಮಾತ್ರ ಈ ಉಚಿತ ಯೋಜನೆ. ಬದಲಿಗೆ ಯಾವುದೇ ರೀತಿಯ ವಾಣಿಜ್ಯ ಬಳಕೆಗಾಗಿ ವಿದ್ಯುತ್ (Electricity) ಅನ್ನು ಉಚಿತವಾಗಿ ನೀಡುವುದಿಲ್ಲ. 200 ಯೂನಿಟ್ ವರೆಗೆ ನಿಮಗೆ ಅರ್ಹ ಉಚಿತವಿರುವಂತಹ ಯೂನಿಟ್ ಅನ್ನು ಲೆಕ್ಕಾಚಾರ ಹಾಕಿ ಒಂದು ವೇಳೆ ನೀವು ಅದಕ್ಕಿಂತ ಹೆಚ್ಚಾಗಿ ಬಳಕೆ ಮಾಡಿದ್ದರೆ ಕೇವಲ ಆ ಹಣವನ್ನು ಮಾತ್ರ ನಿಮ್ಮಲ್ಲಿ ಪಾವತಿಸಲು ಕೇಳಲಾಗುತ್ತದೆ ಎಂದಿದ್ದಾರೆ.

ಅಲ್ಲದೆ ಈ ವಿಚಾರಗಳಿಗೆ ಸಂಬಂಧ ಪಟ್ಟಂತೆ ನಾವು ನೀಡುವ ಅಥವಾ ಸರ್ಕಾರಗಳಿಂದ(Government) ಬರುವ ಸೂಚನೆಗಳನ್ನು ಮಾತ್ರ ಪಾಲಿಸಿ. ಇದಿಷ್ಟನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುವಂತಹ ಯಾವುದೇ ಗಾಳಿ ಸುದ್ದಿಗಳಿಗೂ ಕೂಡ ಕಿವಿ ಕೊಡಬೇಡಿ ಎಂಬುದಾಗಿ ಜನರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: A mayor married to a crocodile : ಯಪ್ಪಾ… ಮೊಸಳೆಯನ್ನೇ ಮದುವೆಯಾದ ಪಾಲಿಕೆ ಮೇಯರ್ !! ಮುಂದಿನ ಅದು, ಇದು ಎಲ್ಲವೂ ಇದರೊಂದಿಗೆಯೇ..?

Leave A Reply

Your email address will not be published.