Height Weight Chart: ಮಕ್ಕಳು, ಸ್ತ್ರೀಯರು ಯಾವ ವಯಸ್ಸಿಗೆ ಎಷ್ಟು ಎತ್ತರ -ತೂಕ ಹೊಂದಿರಬೇಕು ? ಬಂತು ನೋಡಿ ಅಲ್ಟಿಮೇಟ್ ಚಾರ್ಟ್ !

latest news life style Height Weight Chart Health Fitness Chart for Kids, Womens

Height Weight Chart:  ಆರೋಗ್ಯವೇ ಭಾಗ್ಯ(Health) ಎಂಬಂತೆ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಲು ನಾನಾ ರೀತಿಯ ಹರಸಾಹಸ ಪಡುವುದು ಸಹಜ. ಅದರಲ್ಲಿಯೂ ಇಂದಿನ ಒತ್ತಡಯುತ ಜೀವನ ಶೈಲಿಯಲ್ಲಿ ನಿದ್ರಾ ಹೀನತೆ, ಅಪೌಷ್ಠಿಕತೆ, ಜಂಕ್ ಫುಡ್ ಸೇವನೆ ಅನೇಕ ಆರೋಗ್ಯ ಸಮಸ್ಯೆಗಳಿಗೆ  ಎಡೆ ಮಾಡಿಕೊಡುತ್ತದೆ.

ಮಕ್ಕಳು ದೊಡ್ಡವರು ಎನ್ನದೇ ಆರೋಗ್ಯ ಸಮಸ್ಯೆಗಳು ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಗಳು, ಬಿಪಿ, ಶುಗರ್ ,ಬೊಜ್ಜು ,ಸೂಕ್ಷ್ಮ ಆರೋಗ್ಯ ಸಮಸ್ಯೆಗಳು ತಮಗೆಯೇ ತಿಳಿಯದಂತೆ ಕಂಡು ಬರುತ್ತವೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಹೆಚ್ಚುತ್ತಿರುವ ತೂಕದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲಿ ಚಿಕ್ಕ ಮಕ್ಕಳಲ್ಲಿ ಕೂಡ ಸ್ಥೂಲ ಕಾಯತೆ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ನಾವು ಸೇವಿಸುವ ಆಹಾರ, ಜೀವನ ಶೈಯಿಂದ ದೇಹದ ಒಳಗೆ ಆಗುವ ಬದಲಾವಣೆಗಳು ಕೆಲವೊಮ್ಮೆ ನಮ್ಮ ಅರಿವಿಗೆ ಬಾರದೆ ಮುಂದೊಂದು ದಿನ ದೊಡ್ಡ ಸಂಕಷ್ಟ ಎದುರಾಗಲು ನಾಂದಿ ಆಗಬಹುದು. ಹೀಗಾಗಿ, ವಯಸ್ಸಿಗೆ ಅನುಗುಣವಾಗಿ ನಮ್ಮ ದೇಹದ ತೂಕ ಇರಬೇಕಾಗುತ್ತದೆ.

 

ಹಾಗಿದ್ರೆ, ವಯಸ್ಸಿಗೆ ಅನುಗುಣವಾಗಿ ಎಷ್ಟು ತೂಕ ಇರಬೇಕು ಗೊತ್ತಾ? ಇಲ್ಲಿದೆ ಡೀಟೈಲ್ಸ್!

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಆದರೆ ಅನಾರೋಗ್ಯ ಮಾತ್ರ ಬೆನ್ನು ಬಿಡದ ಬೇತಾಳನ ಹಾಗೆ ಸಮಸ್ಯೆ ನೀಡುತ್ತಲೇ ಇರುತ್ತದೆ. ಹೀಗಾಗಿ ದೇಹಕ್ಕೆ ಯಾವುದು ಸರಿ ಮತ್ತು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಯಾವ ಫಿಟ್‌ನೆಸ್ ಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡಿರುವುದು ಅವಶ್ಯಕ.

 

ಕೊರೋನಾ ಮಹಾಮಾರಿ ಲಗ್ಗೆ ಇಟ್ಟ ಬಳಿಕ ವರ್ಕ್ ಫ್ರಮ್ ಹೋಮ್ ಆಪ್ಷನ್ ಬಂದ ಮೇಲೆ ಜನರ ದೈಹಿಕ ಚಟುವಟಿಕೆಗಳು ಗಣನೀಯವಾಗಿ ಕಡಿಮೆಯಾಗಿ ಇದರಿಂದ ಕುಳಿತುಕೊಂಡು ಕೆಲಸ ಮಾಡುವವರ ದೇಹ ತೂಕ ಹೆಚ್ಚಾಗುತ್ತಿರುವ ಪ್ರಮೇಯ ಹೆಚ್ಚಾಗುತ್ತಿದೆ.ಇದರ ನಡುವೆ, ಒಂದೇ ಕಡೆ ಗಂಟೆಗಟ್ಟಲೇ ಕುಳಿತು ಕೆಲಸ ಮಾಡುವ ಜನರ ದೇಹ ತೂಕ ಬಹಳ ಬೇಗನೆ ಹೆಚ್ಚುತ್ತದೆ. ಇದರಿಂದಾಗಿ ಸೊಂಟ ಮತ್ತು ಹೊಟ್ಟೆಯ ಬಳಿ ಕೊಬ್ಬು ಸಂಗ್ರಹವಾಗಲು ಪ್ರಾರಂಭವಾಗುತ್ತದೆ.

 

ಸರಿಯಾದ ವಯಸ್ಸಿನಲ್ಲಿ ನಿಮ್ಮ ತೂಕವನ್ನು ನಿಯಂತ್ರಿಸದಿದ್ದರೆ, ಅದು ಭವಿಷ್ಯದಲ್ಲಿ ಅನೇಕ ರೋಗಗಳಿಗೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಸಮಸ್ಯೆಗಳನ್ನು ಉಂಟಾಗಲೂ ಕಾರಣವಾಗಬಹುದು ಎಂಬುದನ್ನು ಸಂಶೋಧಕರು ಹೇಳುತ್ತಾರೆ. ನೀವು ಬಾಡಿ ಮಾಸ್ ಇಂಡೆಕ್ಸ್ ಅನ್ನು ಲೆಕ್ಕ ಹಾಕುವ ಮೂಲಕ ನಿಮ್ಮ ಎತ್ತರ ಮತ್ತು ತೂಕದ ಮಾಹಿತಿಯನ್ನು ಆನ್‌ಲೈನ್ ಕ್ಯಾಲ್ಕುಲೇಟರ್ ಸಹಾಯದಿಂದ ಪಡೆಯಬಹುದಾಗಿದೆ.

 

ನಮ್ಮ ದೇಹ ಆರೋಗ್ಯದಿಂದಿರಬೇಕಾದರೆ ಪ್ರತಿಯೊಬ್ಬರು ನಿಯಮಿತ ಆರೋಗ್ಯ ತಪಾಸಣೆಯನ್ನು ಮಾಡಿಸಬೇಕು. ಅದರಲ್ಲಿಯೂ ವಿಶೇಷವಾಗಿ ತೂಕ ಹೆಚ್ಚಿದರೂ ಸಮಸ್ಯೆ ಕಟ್ಟಿಟ್ಟ ಬುತ್ತಿ. ಅದೇ ರೀತಿ ವಯಸ್ಸಿಗೆ ಸರಿಯಾದ ತೂಕ ಇರದಿದ್ದರೆ ಇದರಿಂದಲೂ ಕೆಲ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ, ವೈದ್ಯರ ಇಲ್ಲವೇ ಡಯಟೀ ಶಿಯನ್ ಗಳನ್ನೂ ಭೇಟಿ ಆಗಬೇಕಾಗುತ್ತದೆ. ಇದರಿಂದಾಗಿ , ನಿಮ್ಮ ದೇಹದಲ್ಲಿ ಏನಾದರೂ ಆರೋಗ್ಯ ಸಮಸ್ಯೆ ಉಂಟಾದರೆ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಲು ನೆರವಾಗುತ್ತದೆ.

ಫಿಟ್ ಮತ್ತು ಆರೋಗ್ಯಕರ ದೇಹವನ್ನು ಪಡೆಯುವುದು ಹೇಗೆ ?ಯಾವ ಆಹಾರ ಸೇವನೆ, ವ್ಯಾಯಾಮ (Exercise)ಗಳನ್ನು ಮಾಡಬೇಕು ಎಂದು ಬಲ್ಲವರು ಹೇಳುವುದು ಸಹಜ.ಆದರೆ, ಇದಕ್ಕೂ ಮೊದಲು ಬಾಡಿ ಮಾಸ್ ಇಂಡೆಕ್ಸ್ (BMI)ಪರಿಶೀಲಿಸಿಕೊಳ್ಳಬೇಕು. ವ್ಯಕ್ತಿಯ ಎತ್ತರ ಮತ್ತು ತೂಕವನ್ನು ಗಣನೆಗೆ ತೆಗೆದುಕೊಂಡ ಬಳಿಕ ಬಾಡಿ ಮಾಸ್ ಇಂಡೆಕ್ಸ್ ಅಥವಾ BMI ಅನ್ನು ಲೆಕ್ಕ ಮಾಡಬಹುದು.

ಇದರಿಂದ ನಿಮ್ಮ ಫಿಟ್‌ನೆಸ್ ಮಟ್ಟವನ್ನು ತಿಳಿದುಕೊಳ್ಳಬಹುದು. ಕಡಿಮೆ ತೂಕ, ಸಾಮಾನ್ಯ ತೂಕ, ಅಧಿಕ ತೂಕ (Weight) ಮತ್ತು ಬೊಜ್ಜು ಮೊದಲಾದ ವಿಚಾರ ನಿಮಗೆ ತಿಳಿಯುತ್ತದೆ. ಬಾಡಿ ಮಾಸ್ ಇಂಡೆಕ್ಸ್ ಪರೀಕ್ಷಿಸಿದ ವ್ಯಕ್ತಿಯ ಕಡಿಮೆ ತೂಕ ಮತ್ತು ಸ್ಥೂಲಕಾಯದ ಅಪಾಯವನ್ನು ತಿಳಿಯಲು ಸಹಕರಿಸುತ್ತದೆ. ಸ್ಥೂಲಕಾಯತೆ ಮತ್ತು ಕಡಿಮೆ ತೂಕದಿಂದ ಮಧುಮೇಹ, ಪಾರ್ಶ್ವವಾಯು, ಅಪಧಮನಿಯ ತೊಂದರೆ, ಅಧಿಕ ರಕ್ತದೊತ್ತಡ ಮತ್ತು ಪೋಷಣೆಯ ಅಸ್ವಸ್ಥತೆಗಳಂತಹ ರೋಗಗಳ ಬೆಳವಣಿಗೆಯ ಸಮಸ್ಯೆ ಕಾಡಬಹುದು.BMI ಅನ್ನು ತೂಕ ಮತ್ತು ಎತ್ತರದ ಅನುಪಾತದಿಂದ ಲೆಕ್ಕಹಾಕಲಾಗುತ್ತದೆ. ನೀವು ಅಳತೆ ಲೆಕ್ಕ ಮಾಡಿದ ನಂತರ ನೀವು ಚದರ ಮೀಟರ್‌ಗಳಲ್ಲಿ ನಿಮ್ಮ ಎತ್ತರದಿಂದ ಕೆಜಿಗಳಲ್ಲಿ ತೂಕವನ್ನು ಭಾಗಿಸಬೇಕು. ಸೂತ್ರವು BMI=ತೂಕ (Kg)/ಎತ್ತರ (m²)ಆಗಿದ್ದು,ಈ ಮೂಲಕ ನಿಮ್ಮ ತೂಕ ತಿಳಿಯಬಹುದು.

ಈ ನಡುವೆ ಕೆಲವು ಜನರು ಮಾತ್ರ ತಾವು ಅಧಿಕ ತೂಕ ಹೊಂದಿದ್ದಕ್ಕೆ ವಿಭಿನ್ನ ಆಹಾರಕ್ರಮಗಳನ್ನು ಅನುಸರಿಸಲು ಪ್ರಾರಂಭಿಸಿ ಇದ್ದಕಿದ್ದಂತೆ ಕಡಿಮೆ ತೂಕ ಹೊಂದುತ್ತಾರೆ. ಆದರೆ ಇದು ಸರಿಯಾದ ಕ್ರಮವಲ್ಲ ಹೀಗಾಗಿ, ಪ್ರತಿ ವರ್ಷ ತಮ್ಮ ಆರೋಗ್ಯದ ತಪಾಸಣೆ(Health Checkup) ಮಾಡಿಸುವುದು ಬಹು ಮುಖ್ಯ. ಇನ್ನು ನಿಮ್ಮ ವಯಸ್ಸಿಗೆ ಸರಿಯಾದ ದೇಹದ ತೂಕಕ್ಕೆ ಹೊಂದಿದ್ದೀರಾ ಎಂಬುದನ್ನು ಗಮನಿಸಲು ನಾವು ನೀಡಿರುವ ಚಾರ್ಟ್ ಗಮನಿಸಿ, ನೀವೇ ತಿಳಿದುಕೊಳ್ಳಿ. ಒಂದು ವೇಳೆ, ಸರಿಯಾದ ತೂಕ ಇರದಿದ್ದರೆ,ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

 

ವಿವಿಧ ಆಹಾರ ಮತ್ತು ಜೀವನಶೈಲಿಯ ಆಯ್ಕೆಗಳು ಮುಖ್ಯವಾಗಿವೆ. ಜಡ ಜೀವನಶೈಲಿಯು ದೇಹದ ಕ್ಯಾಲ್ಸಿಯಂ ಅನ್ನು ಇಳಿಕೆಯಾಗುತ್ತದೆ. ವಾಕಿಂಗ್, ಓಟ ಅಥವಾ ಜಾಗಿಂಗ್‌ನಂತಹ ಯಾವುದೇ ದೈಹಿಕ ಚಟುವಟಿಕೆಯಲ್ಲಿ ದೇಹವನ್ನು ತೊಡಗಿಸಿ ಕೊಂಡರೆ, ಅದು ಮೂಳೆಯನ್ನು ಬಲಗೊಳಿಸಲು ನೆರವಾಗುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ-ಭರಿತ ಆಹಾರಗಳನ್ನು ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ಈ ಕುರಿತ ಹೆಚ್ಚಿನ ಮಾಹಿತಿ ಸದ್ಯದಲ್ಲೇ ನಾವು ನಿಮಗೆ ನೀಡಲಿದ್ದೇವೆ.

Leave A Reply

Your email address will not be published.