Bangalore Mysore Expressway: ಬೆಂ- ಮೈ ಎಕ್ಸ್‌ಪ್ರೆಸ್ ವೇ ಅಪಘಾತ ಸರಣಿಗೆ ಕಾರಣ ಬಹಿರಂಗ, ಸಂಸದ ಪ್ರತಾಪ್ ಸಿಂಹ ಹೇಳಿದ ಸತ್ಯ!
latest news what MP Prathap Simha said about Bangalore Mysore Expressway
Bangalore Mysore Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಿದ್ರೆ ಇನ್ನೊಂದೆಡೆ ಇತ್ತೀಚಿನ ದಿನಗಳಲ್ಲಿ ಬೆಂ- ಮೈ ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ಸಂಖ್ಯೆ ಮಿತಿ ಮೀರಿದೆ ಎಂದು ಚರ್ಚೆಗೆ ಗ್ರಾಸವಾಗುತ್ತಿದೆ. ಈ ಬೆನ್ನಲ್ಲೆ ಪ್ರತಾಪ್ ಸಿಂಹ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮಾತನಾಡಿ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ (Bangalore Mysore Expressway) ವೇಯಲ್ಲಿ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ ಪ್ರದೇಶದಲ್ಲಿ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳಿವೆ . ಅಲ್ಲದೇ ಶ್ರಾಂತಿ ಪ್ರದೇಶ, ಮೈಸೂರು ರಿಂಗ್ ರಸ್ತೆ (ಮಣಿಪಾಲ್ ಆಸ್ಪತ್ರೆ ಜಂಕ್ಷನ್) ಬಳಿ ಫ್ಲೈಓವರ್, ಕುಂಬಳಗೋಡು ಬಳಿ ಅಂಡರ್‌ಪಾಸ್ ಮತ್ತು ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು.
ಈ ಎಲ್ಲಾ ಸಮಸ್ಯೆಗಳನ್ನು ಕೇವಲ 10 ತಿಂಗಳಲ್ಲಿ ಸರಿಪಡಿಸಲಿದ್ದೇವೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಒಪ್ಪಿಕೊಂಡಿದ್ದಾರೆ. ಮೆಲ್ನೋಟಕ್ಕೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಅಪಘಾತ ಹೆಚ್ಚಾಗಲು ಇದುವೆ ಕಾರಣವಾಗಿರಬಹುದು ಎಂದು ಅನುಮಾನ ಪಡಲಾಗುತ್ತಿದೆ.
ಈಗಾಗಲೇ ಫ್ರಾರಂಭಗೊಂಡ ದಿನದಿಂದ 568 ಅಪಘಾತಗಳು ನಡೆಸಿದೆ ಎಂದು ವರದಿಯಾಗಿದೆ. 158ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರ ತಿಳಿದು ಕಳೆದೆರಡು ದಿನಗಳ ಹಿಂದೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಗಳ ಸಮಸ್ಯೆಗಳ ಬಗ್ಗೆ ಎನ್‌ಹೆಚ್ ಅಧಿಕಾರಿಗಳ ಜೊತೆ ಅಲೋಕ್ ಕುಮಾರ್ ಹೆದ್ದಾರಿಯ ಪರಿಶೀಲನೆ ನಡೆಸಿದರು.
ಇದನ್ನು ಓದಿ: PF Balance: ನೀವು ಕೂಡಾ PPF ಚಂದಾದಾರರೇ, ಬಡ್ಡಿ ದರದ ಬಗ್ಗೆ ಬರ್ತಿದೆ ಲೇಟೆಸ್ಟ್ ಅಪ್ಡೇಟ್ !