Bengaluru Mysuru Highway: ನಾಳೆಯಿಂದ ಬೆಂ – ಮೈ ಹೆದ್ದಾರಿಯಲ್ಲಿ ಡಬಲ್ ಟೋಲ್, ಯಾವ ವಾಹನಕ್ಕೆ ಎಷ್ಟೆಷ್ಟು ದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ
latest news How much fare for which vehicle on Bengaluru Mysuru Highway from tomorrow
Bengaluru-Mysuru Highway: ಬೆಂಗಳೂರು ಮೈಸೂರು ಹೈವೇ ವಾಹನ ಸವಾರರಿಗೆ ಮಹತ್ವ ಮಾಹಿತಿ ಇಲ್ಲಿದೆ. ಜುಲೈ 1ರಿಂದ ಮಂಡ್ಯದ ಗಣಂಗೂರು ಬಳಿ ಟೋಲ್ ಸಂಗ್ರಹಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಹೌದು, ಮಂಡ್ಯ ಜಿಲ್ಲೆಯ 55-134 ಕಿಮೀ ವ್ಯಾಪ್ತಿಗೆ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ (Bengaluru Mysuru Highway Toll Plazza) ಪ್ರಾಧಿಕಾರ ಮುಂದಾಗಿದೆ.
ಜುಲೈ 1ರಿಂದ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿಯ ಟೋಲ್ ಪ್ಲಾಜಾ ಬಳಿ ಟೋಲ್ ಸಂಗ್ರಹ ಆರಂಭವಾಗಲಿದೆ. ಹೈವೇ ವಾಹನ ಸವಾರರಿಗೆ (Bengaluru-Mysuru Highway) ಮತ್ತೊಂದು ಟೋಲ್ ಬಿಸಿ ತಟ್ಟಲಿದೆ.
ಯಾವ ವಾಹನಗಳಿಗೆ ಎಷ್ಟೆಷ್ಟು ಶುಲ್ಕ:
ಏಕಮುಖ ಸಂಚಾರಕ್ಕೆ ನಿಗದಿ ಮಾಡಿರುವ ಟೋಲ್ ಹಣ
ಕಾರು, ಜೀಪು, ವ್ಯಾನ್‌ಗಳಿಗೆ 155 ರೂ.
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ, ಮಿನಿ ಬಸ್ – 250 ರೂ.
ಟ್ರಕ್, ಬಸ್ (ಎರಡು ಆಕ್ಸಲ್‌ಗಳದ್ದು) – 525 ರೂ.
ಮೂರು ಆಕ್ಸಲ್ ವಾಣಿಜ್ಯ ವಾಹನ – 575 ರೂ.
ಭಾರಿ ನಿರ್ಮಾಣ ಯಂತ್ರಗಳು, ಭೂ ಅಗೆತದ ಸಾಧನಗಳು, ಬಹು ಆಕ್ಸಲ್ ವಾಹನ (4ರಿಂದ 6 ಆಲೆಕ್ಸ್‌ಗಳದ್ದು) – 825 ರೂ.
ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್‌ಗಳದ್ದು) – 1005 ರೂ.
ಅದೇ ದಿನ ಹೋಗಿಬರುವುದಕ್ಕೆ:
ಕಾರು, ಜೀಪು, ವ್ಯಾನು – 235 ರೂ
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ, ಮಿನಿ ಬಸ್ – 375 ರೂ.
ಟ್ರಕ್, ಬಸ್ (ಎರಡು ಆಕ್ಸಲ್‌ಗಳದ್ದು) – 790 ರೂ.
ಮೂರು ಆಕ್ಸಲ್ ವಾಣಿಜ್ಯ ವಾಹನ – 860 ರೂ.
ಭಾರಿ ನಿರ್ಮಾಣ ಯಂತ್ರಗಳು, ಭೂ ಅಗೆತದ ಸಾಧನಗಳು, ಬಹು ಆಕ್ಸಲ್ ವಾಹನ (4ರಿಂದ 6 ಆಲೆಕ್ಸ್‌ಗಳದ್ದು) – 1240 ರೂ.
ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್‌ಗಳದ್ದು) – 1510 ರೂ.
ಈ ಮೊದಲು ರಾಮನಗರ ಬಿಡದಿ ನಡುವಿನ ಶೇಷಗಿರಿ ಹಾಗೂ ಕಣಮಿಣಿಕೆ ವ್ಯಾಪ್ತಿಯ ಟೋಲ್‌ನಲ್ಲಿ ಮಾತ್ರ ವಾಹನ ಶುಲ್ಕ ಸಂಗ್ರಹಿಸಲಾಗುತಿತ್ತು. ಮಂಡ್ಯ ಭಾಗದಲ್ಲಿ ಕೆಲಸ ಅಪೂರ್ಣವಾಗಿದ್ದರಿಂದ ಟೋಲ್ ಶುರುವಾಗಿರಲಿಲ್ಲ. ಈಗ ಇದಕ್ಕೂ ಹಣ ಪಾವತಿಸಬೇಕು. ಈವರೆಗೂ ಬೆಂಗಳೂರು ಮೈಸೂರು ನಡುವಿನ ಸಂಚಾರಕ್ಕೆ ಅರ್ಧ ಶುಲ್ಕ ಟೋಲ್ ರೂಪದಲ್ಲಿ ಪಾವತಿಸಬೇಕಿತ್ತು. ಇನ್ನು ಡಬಲ್ ಆಗಲಿದೆ.