M.P Darakeswaraiah: ಮಾಜಿ ಸಚಿವ ರೇಣುಕಾಚಾರ್ಯ ಅಣ್ಣ, ಅತ್ತಿಗೆಯ ಜಾತಿ ಏನು ? ಅವರು ಲಿಂಗಾಯತರಾ ಅಥ್ವಾ ಪರಿಶಿಷ್ಟ ಜಾತಿಯಾ ? ಕೋರ್ಟು ನೀಡಿದೆ ಫ್ರೆಶ್ ಆದೇಶ !

latest news court news What is the caste of ex-minister Renukacharya's elder brother and sister-in-law

M.P Darakeswaraiah-Sujatha: ರಾಜಕೀಯದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ವಾಗ್ದಾಳಿಗಳು ನಡೆಯುತ್ತಲೇ ಇವೆ. ಇನ್ನೊಂದೆಡೆ ಲೋಕಾಯುಕ್ತ ದಾಳಿಯಾಗಿ ಅಧಿಕಾರಿಗಳು ಹಣ ವಶಕ್ಕೆ ನಡೆಯುತ್ತಿದ್ದಾರೆ. ಈ ಮಧ್ಯೆ ಇದೀಗ ಮಾಜಿ ಸಚಿವ ರೇಣುಕಾಚಾರ್ಯ (renukacharya)ಅವರ ಅಣ್ಣ, ಅತ್ತಿಗೆಯ ಜಾತಿಯ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇವರು ಯಾವ ಜಾತಿ ಗೊತ್ತಾ? ಲಿಂಗಾಯತರಾ ಅಥ್ವಾ ಪರಿಶಿಷ್ಟ ಜಾತಿಯಾ? ಈ ಬಗ್ಗೆ ಕೋರ್ಟು ಫ್ರೆಶ್ ಆದೇಶ ಹೊರಡಿಸಿದೆ.

ಮಾಜಿ ಸಚಿವ ರೇಣುಕಾಚಾರ್ಯ ಅವರ ಅಣ್ಣ ಎಂ.ಪಿ. ದಾರಕೇಶ್ವರಯ್ಯ (M.P Darakeswaraiah) ಹಾಗೂ ಅವರ ಪತ್ನಿ ಸುಜಾತ (Sujatha) ಅವರು ಬೇಡ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿದ್ದರು. ಇದೀಗ ಈ ಜಾತಿ ಪ್ರಮಾಣ ಪತ್ರವನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ರದ್ದುಪಡಿಸಿದ್ದಾರೆ. ಜೊತೆಗೆ ದಾರಕೇಶ್ವರಯ್ಯ ಹಾಗೂ ಅವರ ಪತ್ನಿ ಸುಜಾತ ಮೂಲತಃ ಲಿಂಗಾಯಿತ ಜಾತಿಗೆ ಸೇರಿದವರಾಗಿದ್ದಾರೆ ಎಂದು ಕೋರ್ಟ್ ಆದೇಶ ಹೊರಡಿಸಿದೆ.

“ದಾರಕೇಶ್ವರಯ್ಯ ಅವರು ತಾವು ಬೇಡ ಜಂಗಮ ಜಾತಿಗೆ ಸೇರಿದವರು ಎಂಬುದನ್ನು ಸಾಬೀತುಪಡಿಸಲು ವಿಫಲರಾಗಿದ್ದು,
ಅರ್ಜಿದಾರರು ಹಾಗೂ ಸರಕಾರಿ ವಕೀಲರು ಹಾಜರುಪಡಿಸಿದ ದಾಖಲೆಗಳೆಲ್ಲವೂ ಪ್ರತಿವಾದಿ ದಾರಕೇಶ್ವರಯ್ಯ ಲಿಂಗಾಯತ ಜಂಗಮ ಜಾತಿಗೆ ಸೇರಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ. ಆದರೆ, ತಹಶೀಲ್ದಾರ್‌ ಅವರು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆಯೇ, ದಾರಕೇಶ್ವರಯ್ಯ ಅವರಿಗೆ ಬೇಡ ಜಂಗಮ ಎಂದು ಪ್ರಮಾಣಪತ್ರ ನೀಡಿರುವುದು ಕಾನೂನು ಬಾಹಿರವೆಂದು ಕಂಡುಬಂದಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಎಂ.ಪಿ.ದಾರಕೇಶ್ವರಯ್ಯ ಲಿಂಗಾಯಿತ ಜಾತಿಗೆ ಸೇರಿದ್ದರೂ ತಪ್ಪು ಮಾಹಿತಿ ನೀಡಿ ಬೇಡ ಜಂಗಮ ಜಾತಿಯ ಪ್ರಮಾಣಪತ್ರ ಪಡೆದಿರುವ ಹಿನ್ನೆಲೆ ಬೇಡ ಜಂಗಮ ವರ್ಗದ ಜನರು ಸವಲತ್ತುಗಳಿಂದ ವಂಚಿತವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಜೊತೆಗೆ ದಾರಕೇಶ್ವರಯ್ಯ ಹಾಗೂ ಪತ್ನಿ ಸುಜಾತ ಅವರಿಗೆ ನೀಡಿರುವ ಪರಿಶಿಷ್ಟ ಜಾತಿ ಪ್ರಮಾಣಪತ್ರಗಳನ್ನು ರದ್ದುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

ಇದನ್ನು ಓದಿ: Education department: ಶಿಕ್ಷಣ ಇಲಾಖೆ ಕಚೇರಿಗಳಲ್ಲಿ ಇನ್ನು ಜೀನ್ಸ್ ಮತ್ತು ಟಿ-ಶರ್ಟ್ ಧರಿಸುವಂತಿಲ್ಲ ! ತಕ್ಷಣದಿಂದಲೇ ಆದೇಶ ! 

Leave A Reply

Your email address will not be published.