Surat Bridge: 118 ಕೋಟಿಯ ಬ್ರಿಡ್ಜ್ 40 ದಿನದಲ್ಲೇ ಉದ್ದುದ್ದಕ್ಕೆ ಬಿರುಕು, ಹೊಣೆ ಯಾರು ?!
latest news bridge has cracked within 40 days of its inauguration in Surat
Surat Bridge: ಮೇ 17 2023 ರಂದು ಉದ್ಘಾಟನೆಯಾಗಿದ್ದ, 1.5 ಕಿಲೋಮೀಟರ್ ಉದ್ದದ ಸೇತುವೆಯೊಂದು ಉದ್ಘಾಟನೆಯಾದ 40 ದಿನಗಳಲ್ಲೇ ಬಿರುಕು ಬಿಟ್ಟಿರುವ ಘಟನೆ ಗುಜರಾತಿನ ಸೂರತ್ನಲ್ಲಿ (Surat Bridge) ನಡೆದಿದೆ.
ಹೌದು, 118 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ, ಸೂರತ್ ನಗರದ ತಾಪಿ ನದಿಯ ಅಂಚಿನಲ್ಲಿ ಕಟ್ಟಲಾಗಿದ್ದ, ವೇದ್-ವಾರಿಯಾವ್ ಸೇತುವೆಯು ಬಾರಿ ಮಳೆಯಿಂದಾಗಿ ಬಿರುಕು ಬಿಟ್ಟಿದೆ.
ಈ ಸೇತುವೆಯು ಸೂರತ್ ನಗರದಿಂದ ವೇದ್-ವಾರಿಯಾವ್ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿದ್ದು, ವಾರಿಯಾವ್ ಕಡೆಗೆ ಸಂಪರ್ಕಿಸುವ ರಸ್ತೆಯಲ್ಲಿ ಬಿರುಕು ಬಿಟ್ಟಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬ್ರಿಡ್ಜ್ ಬಿರುಕು ಬಿಟ್ಟಿರುವ ಕುರಿತು ಪ್ರತಿಕ್ರಿಯಿಸಿರುವ ಗುಜರಾತ್ ಎಎಪಿ ಘಟಕದ ಅಧ್ಯಕ್ಷ ಇಸುದಾನ್ ಗದ್ವಿ ನಿರ್ಮಾಣ ಕಾರ್ಯದ ವಿಚಾರವಾಗಿ ಬಿಜೆಪಿಯಿಂದ ವ್ಯಾಪಕವಾಗಿ ಭ್ರಷ್ಟಾಚಾರ ನಡೆದಿದ್ದು, ಸಿಬಿಐ ಅಥವಾ ಜಾರಿ ನಿರ್ದೇಶನಾಲಯಕ್ಕೆ ಈ ಸಂಬಂಧ ತನಿಖೆಗೆ ಅದೇಶಿಸಬೇಕು ಎಂದು ಒತ್ತಾಯಿಸಿದ್ಧಾರೆ.
ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ ಸೂರತ್ ನಗರ ಪಾಲಿ ವಿಪಕ್ಷ ಸದಸ್ಯ ಧರ್ಮೇಶ್ ಭಂಡೇರಿ ಉದ್ಘಾಟನೆಯಾದ 40 ದಿನಗಳಲ್ಲೇ ಬ್ರಿಡ್ಜ್ ಬಿರುಕು ಬಿಟ್ಟಿದ್ದು, ನಿರ್ಮಾಣ ಪ್ರಕ್ರಿಯೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿದೆ. ಪ್ರಕರಣವನ್ನು ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಬಿಜೆಪಿ ನಾಯಕರೊಬ್ಬರ ಪರಮಾಪ್ತ ಗುತ್ತಿಗೆದಾರರಿಗೆ ಕಾಮಗಾರಿಯನ್ನು ನೀಡಿದ ಪರಿಣಾಮ ಈ ರೀತಿ ಆಗಿದೆ ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಸೇತುವೆಯು ಬಾರಿ ಮಳೆಯಿಂದಾಗಿ ಬಿರುಕು ಬಿಟ್ಟಿರುವುದು, ಆಡಳಿತರೂಢ ಬಿಜೆಪಿ ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಎಎಪಿ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನು ಓದಿ: Uttar Pradesh: ಫಸ್ಟ್ ನೈಟ್ ನಡೆದ ಒಂದೇ ದಿನಕ್ಕೆ ತಾಯಿಯಾದ ವಧು ; ವರ ಆಯೋಮಯ !