‘ ನಾರಿ ಮುನಿದರೆ ಮಾರಿ ‘ ಜಗಳ: ಕಾಂಗ್ರೆಸ್ ಬಿಜೆಪಿ ಮಧ್ಯೆ ಸ್ತ್ರೀಯರನ್ನು ಅವಮಾನಿಸಿದ್ದು ಯಾರು ?

Congress : ನಾಡಿನ ಸಮಸ್ತ ಮಹಿಳೆಯರಲ್ಲಿ ಬಿಜೆಪಿ ಕ್ಷಮೆ ಕೇಳಬೇಕಾಗಿದೆ ಎಂದು ಕರ್ನಾಟಕದಲ್ಲಿ ಕಾಂಗ್ರೆಸ್ ಟ್ಟೀಟ್‌ ಮೂಲಕ ವಾರ್‌ ಶುರುವಾಗಿದೆ. ಅಷ್ಟಕ್ಕೂ ಬಿಜೆಪಿ ಮತ್ತು ಕಾಂಗ್ರೆಸ್‌ (Congress)ನಡುವೆ ರಾಜಕೀಯ ಸಮರ ಏನು ಅನ್ನೋರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಓದಿ..

 

ಬಿಜೆಪಿ ” ಮಹಿಳೆಯರಿಗೆ ಮಾರಿ ” ಎಂದು ಕರೆಯುವ ಮೂಲಕ ಸ್ತ್ರೀಯರ ಘನತೆಗೆ ಧಕ್ಕೆ ತಂದಿದೆ. ಈ ವಿಚಾರವಾಗಿ ಕಾಂಗ್ರೆಸ್‌ ಸಿಡಿದೆದ್ದಿದ್ದು, ರಾಜ್ಯ ರಾಜಕೀಯದಲ್ಲೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಕಾಂಗ್ರೆಸ್‌ ಟ್ಟಿಟ್ಟರ್‌ ಮೂಲಕ “ಮಾರಿ” ಎಂದರೆ ಏನರ್ಥ ಬಿಜೆಪಿ ? ಮಹಿಳೆಯರನ್ನು ಘನತೆ, ಗೌರವದ ದೃಷ್ಟಿಯಲ್ಲಿ ನೋಡಲು ಬಿಜೆಪಿಗೆ ಸಾಧ್ಯವಿಲ್ಲವೇಕೆ? ಮಹಿಳೆಯರನ್ನು “ಮಾರಿ” ಎನ್ನುವ ಮೂಲಕ ಬಿಜೆಪಿ ತನ್ನೊಳಗಿನ ವಿಷಕಾರಿ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ಸ್ತ್ರೀಯರ ಗೌರವಕ್ಕೆ ಚ್ಯುತಿ ತಂದ ಬಿಜೆಪಿ ನಾಡಿನ ಸಮಸ್ತ ಮಹಿಳೆಯರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಕಿಡಿಕಾರುತ್ತಿದೆ.

 

ಅಲ್ಲದೇ ಬಿಜೆಪಿಯ ಸೋಲಿನ ಆತ್ಮವಲೋಕನದ ಫೈನಲ್ ರಿಸಲ್ಟ್ ಬರಲೇ ಇಲ್ಲ! ಒಬ್ಬೊಬ್ಬರದ್ದೂ ಒಂದೊಂದು ಅವಲೋಕನ, >ಅಧ್ಯಕ್ಷರಿಂದ ಸೋಲಾಯ್ತು >ವಲಸಿಗರಿಂದ ಸೋಲಾಯ್ತು >ಅಡ್ಜಸ್ಟ್ಮೆಂಟ್ ನಿಂದ ಸೋಲಾಯ್ತು >ಬಡವರ ಅಕ್ಕಿ ಕಿತ್ತುಕೊಂಡು ಸೋಲಾಯ್ತು >ಮೋದಿ ಬೀದಿ ಸುತ್ತಿದ್ದಕ್ಕೆ ಸೋಲಾಯ್ತು >ಗುಜರಾತ್ ಮಾಡೆಲ್ ನಿಂದ ಸೋಲಾಯ್ತು >ಪಕ್ಷದ್ರೋಹಿಗಳಿಂದ ಸೋಲಾಯ್ತು ಅಕಸ್ಮಾತ್ ಗೆಲುವಾಗಿದ್ದಿದ್ದರೆ ಕ್ರೆಡಿಟ್ ಸಿಂಪಲ್ ಆಗಿರುತ್ತಿದ್ದವು, ಮೋದಿಯಿಂದ ಗೆಲುವಾಯ್ತು, ಜೋಶಿ, ಸಂತೋಷರಿಂದ ಗೆಲುವಾಯ್ತು! ಅಂತೂ ಇಂತೂ ಬಿಜೆಪಿಯ ಆತ್ಮವಲೋಕನದಲ್ಲಿ ಹಲವು ಸತ್ಯಗಳು ಹೊರಬಂದಿವೆ, ಇನ್ನೂ ಹಲವು ಹೊರಬಾರದೆ ಒದ್ದಾಡುತ್ತಿವೆ ಎಂದು ಆಕ್ರೋಶ ವ್ಯಕ್ತ ಪಡಿಸಲಾಗುತ್ತಿದೆ.

 

ಇತಿಹಾಸದಲ್ಲಿ ಮೊದಲ ಬಾರಿಗೆ ಆರ್‌ಎಸ್‌ಎಸ್ ನವರ ಲಾಠಿ ಉಪಯೋಗಕ್ಕೆ ಬರಲಿದೆ, ಸದ್ಯದ ಸ್ಥಿತಿಯಲ್ಲಿ ಬಿಜೆಪಿಗರ ಕೈಗೆ ಕೊಟ್ಟರೆ ಬಡಿದಾಡಿಕೊಳ್ಳಲು ಬಳಸುತ್ತಾರೆ. ಆ ನಂತರ ಬದುಕುಳಿದವರಿಗೆ ಅಧ್ಯಕ್ಷ, ವಿಪಕ್ಷ ನಾಯಕನ ಸ್ಥಾನ ಕೊಟ್ಟು ಕೂರಿಸಬಹುದು, ಆರ್‌ಎಸ್‌ಎಸ್ ನಾಯಕರಿಗೆ ಬಿಜೆಪಿಯ ಗೊಂದಲ ಬಗೆಹರಿಸಲು ಉತ್ತಮ ಐಡಿಯಾವನ್ನು ಕಾಂಗ್ರೆಸ್ ಕಡೆಯಿಂದ ಫ್ರಿಯಾಗಿ ನೀಡುತ್ತಿದ್ದೇವೆ ಎಂದು ಟ್ವೀಟ್‌ ಮೂಲಕ ಬರೆಯಲಾಗಿದೆ.

ಒಟ್ಟಾರೆಯಾಗಿ ಕರ್ನಾಟಕದ ರಾಜಕೀಯ ರಣರಂಗದಲ್ಲಿ ‘ ನಾರಿ ಮುನಿದರೆ ಮಾರಿ ‘ ಜಗಳ ಮುಂದುವರಿಯುತ್ತಿದ್ದು, ಗೌರವ ಕೊಡಬೇಕಾದ ಸ್ತ್ರೀಯರಿಗೆ ಬಿಜೆಪಿಯೇ ಅವಮಾನಿಸಿದಂತೂ ನಿಜ ಎಂಬುವುದರಲ್ಲಿ ತಪ್ಪೇನಿಲ್ಲ..

ಇದನ್ನೂ ಓದಿ :SSLC ಪೂರಕ ಪರೀಕ್ಷೆ ಫಲಿತಾಂಶ ನಾಳೆ ಪ್ರಕಟ ಸುಲಭವಾಗಿ ಫಲಿತಾಂಶ ಚೆಕ್ ಮಾಡಲು ಇಲ್ಲಿದೆ ಲಿಂಕ್ !

Leave A Reply

Your email address will not be published.