Smartphone as TV remote: ರಿಮೋಟ್ ಕಂಟ್ರೋಲ್ ಇಲ್ಲದೇ ಟಿವಿ ಆನ್/ ಆಫ್ ಮಾಡೋದು ಇಷ್ಟು ಈಸಿನಾ ?

Latest news Smartphone as TV remote TV can be turned on/off without remote control

Smartphone as TV remote: ಟೆಕ್ನಾಲಜಿಯು ದೈನಂದಿನ ಜೀವನದ ಹಲವು ಚಟುವಟಿಕೆಗಳನ್ನು ಸರಳೀಕರಿಸುತ್ತಿದೆ ಎಂದರೆ ತಪ್ಪಾಗಲಾರದು. ಈಗಂತೂ ಪ್ರತಿಯೊಬ್ಬರ ಮನೆಯಲ್ಲೂ ಟಿವಿ ಇದ್ದೇ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಟಿವಿಗಳು ಬಹಳ ಜನಪ್ರಿಯವಾಗುತ್ತಿವೆ. ನೀವು ಟಿವಿ ರಿಮೋಟುಗಳನ್ನು ಎಷ್ಟೋ ಸಲ ಮರೆತು ಎಲ್ಲೆಲ್ಲೋ ಇಟ್ಟಿರುತ್ತೀರಿ. ಈ ಸಂದರ್ಭದಲ್ಲಿ ಚಾನೆಲ್ ಚೇಂಜ್ ಮಾಡಬೇಕೆಂದರೆ ರಿಮೋಟ್ ಹುಡುಕುವುದೇ ಒಂದು ದೊಡ್ಡ ಕಿರಿಕಿರಿ.‌ ರಿಮೋಟ್ ಹಾಳಾದಾಗ ಅಥವಾ ಬ್ಯಾಟರಿ ಖಾಲಿಯಾದಾಗಲೂ ನೀವು ಪರದಾಡಿರಬಹುದು. ಆದರೆ ಇನ್ಮುಂದೆ ಚಿಂತೆ ಬೇಡ. ನಿಮ್ಮ ಸ್ಮಾರ್ಟ್ ಫೋನನ್ನು ಟಿವಿ ರಿಮೋಟ್ ( Smartphone as TV remote) ಆಗಿ ಪರಿವರ್ತಿಸುವ ಸುಲಭ ಟ್ರಿಕ್ ಅನ್ನು ನಾವಿಂದು ಇಲ್ಲಿ ತಿಳಿಸಲಿದ್ದೇವೆ.

ಸ್ಮಾರ್ಟ್​​ಫೋನ್​ ಅನ್ನು ಟಿವಿ ರಿಮೋಟ್ ಆಗಿ ಪರಿವರ್ತಿಸಬೇಕಾದರೆ ಮೊದಲು Google TV ಅಪ್ಲಿಕೇಶನ್ ಅನ್ನು ಸ್ಮಾರ್ಟ್’ಫೋನ್ ನಲ್ಲಿ ಡೌನ್‌ಲೋಡ್ ಮಾಡಬೇಕಾಗುತ್ತದೆ. ಹಾಗೆಯೇ ಅವರ ಟಿ.ವಿಯು ಆಂಡ್ರಾಯ್ಡ್ ಓಎಸ್ ಸಿಸ್ಟಮ್​ನಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. ಯಾವುದೇ Android ಸಾಧನ ಅಥವಾ iPhone ಅನ್ನು ಟಿವಿ ರಿಮೋಟ್ ಆಗಿ ಉಪಯೋಗಿಸಬಹುದು.

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅನ್ನು ರಿಮೋಟ್ ಆಗಿ ಪರಿವರ್ತಿಸಲು, ಮೊದಲಿಗೆ Google Play Store ನಲ್ಲಿ Google TV ಆ್ಯಪ್ ಅನ್ನು ಡೌನ್​ಲೋಡ್​ ಮಾಡಿಕೊಳ್ಳಿ. ನಿಮ್ಮ ಟಿವಿ ಹಾಗೂ ಸ್ಮಾರ್ಟಫೋನ್ ಎರಡೂ ಒಂದೇ ವೈಫೈ ಗೆ ಕನೆಕ್ಟ್ ಆಗಿದೆಯೇ ಎಂಬುದನ್ನು ಮೊದಲಿಗೆ ಖಚಿತಪಡಿಸಿಕೊಳ್ಳಿ. ಟಿವಿ Wi-Fi ಅನ್ನು ಬೆಂಬಲಿಸದಿದ್ದರೆ, ಟಿವಿಯನ್ನು ಸಂಪರ್ಕಿಸಲು ಫೋನಿನ ಬ್ಲೂಟೂತ್ ಅನ್ನು ಸಹ ಬಳಸಬಹುದು.

ನಂತರ Google TV ಅಪ್ಲಿಕೇಶನ್ ತೆರೆಯಿರಿ ಮತ್ತು ಫೋನಿನ ಕೆಳಗೆ ಬಲಭಾಗದಲ್ಲಿರುವ ರಿಮೋಟ್ ಬಟನ್ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ನಂತರ ಅಪ್ಲಿಕೇಶನ್, ಹತ್ತಿರದ ಟಿವಿಗಳಿಗಾಗಿ ಸ್ಕ್ಯಾನ್ ಮಾಡಲು ಪ್ರಾರಂಭಿಸುತ್ತದೆ ಅಲ್ಲಿ ತಮ್ಮ ಟಿವಿ ಹೆಸರನ್ನು ಕ್ಲಿಕ್ ಮಾಡಿ. ಈಗ ಟಿವಿ ಪರದೆಯ ಮೇಲೆ ಕಾಣಿಸುವ ಪಿನ್ ಅನ್ನು ಸ್ಮಾರ್ಟಫೋನಿನಲ್ಲಿ ನಮೂದಿಸಿ ಎರಡನ್ನೂ ಪೇರ್ ಮಾಡಿ. ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅನ್ನು ಟಿವಿ ರಿಮೋಟ್ ಆಗಿ ಬಳಸಬಹುದು.

ನೀವು ಐಫೋನ್ ಅನ್ನು ರಿಮೋಟ್ ಆಗಿ ಪರಿವರ್ತಿಸಬೇಕು ಎಂದು ಬಯಸಿದರೆ, ಮೊದಲು ಆ್ಯಪ್​ ಸ್ಟೋರ್‌ನಿಂದ iPhone ನಲ್ಲಿ Google TV ಅಪ್ಲಿಕೇಶನ್ ಅನ್ನು ಡೌನ್​ಲೋಡ್ ಮಾಡಿ. ನಿಮ್ಮ ಸ್ಮಾರ್ಟ್ ಟಿವಿ ಮತ್ತು ಐಫೋನ್ ಎರಡೂ ಕೂಡ ಒಂದೇ ವೈ-ಫೈ ನೆಟ್ ವರ್ಕ್ ನಲ್ಲಿ ಇರಬೇಕು. iPhone ನಲ್ಲಿ Google TV ಅಪ್ಲಿಕೇಶನ್ ಓಪನ್ ಮಾಡಿರಿ. ಮೊಬೈಲ್ ಸ್ಕ್ರೀನಿನ ಕೆಳಗೆ ಬಲ ಮೂಲೆಯಲ್ಲಿರುವ ಟಿವಿ ರಿಮೋಟ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಅಪ್ಲಿಕೇಶನ್ ಸ್ವಯಂ ಚಾಲಿತವಾಗಿ ಬಳಕೆದಾರರ ಟಿವಿಗಾಗಿ ಹುಡುಕಲು ಪ್ರಾರಂಭಿಸುತ್ತದೆ. ಟಿವಿ ಪಟ್ಟಿಯಲ್ಲಿ ಕಾಣಿಸದಿದ್ದರೆ, ಸ್ಕ್ಯಾನ್ ಬಟನ್ ಎಂಬ ಆಯ್ಕೆ ಇರುತ್ತದೆ ಅಲ್ಲಿ ಸ್ಕ್ಯಾನ್ ಮಾಡಬಹುದು.

ಅಪ್ಲಿಕೇಶನ್​ನಲ್ಲಿ ಟಿವಿಯನ್ನು ಕನೆಕ್ಟ್​ ಮಾಡಿದ ನಂತರ, ನೀವು ಆ ಟಿವಿ ಹೆಸರನ್ನು ಆಯ್ಕೆ ಮಾಡಬೇಕು. ನಂತರ ಟಿವಿ ಸ್ಕ್ರೀನ್ ಮೇಲೆ 6-ಅಂಕಿಯ ಕೋಡ್ ಅನ್ನು ಪ್ರದರ್ಶಿಸಲಾಗುತ್ತದೆ. ಈ ಕೋಡ್ ಅನ್ನು ಐಫೋನ್‌ನಲ್ಲಿ ನಮೂದಿಸಿ ಮತ್ತು ಅದನ್ನು ಟಿವಿಗೆ ಸಂಪರ್ಕಿಸಲು ‘ಪೇರ್’ ಬಟನ್ ಆಯ್ಕೆ ಮಾಡಿ. ಇಷ್ಟಾದರೆ ಆಯ್ತು.. ಟಿವಿಯನ್ನು ಸ್ಮಾರ್ಟ್ ಫೋನ್ ನಿಂದಲೇ ಕಂಟ್ರೋಲ್ ಮಾಡಬಹುದು.

Leave A Reply

Your email address will not be published.