Karnataka Business Award: ಉಜಿರೆ ಕಾಲೇಜಿನ 19 ವರ್ಷದ ಬಾಲಕನ ‘ ಘಾಟ್ ಸ್ಟೇ ‘ ಸಂಸ್ಥೆ ! ಪ್ರತಿಷ್ಟಿತ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್ ನಿಂದ ಬೆಸ್ಟ್ ಹೋಮ್’ಸ್ಟೆ ಬುಕಿಂಗ್ ಪ್ಲಾಟ್’ಫಾರ್ಮ್ ಆಫ್ ದಿ ಇಯರ್ ಪ್ರಶಸ್ತಿ ಎತ್ತಿಕೊಂಡ ಸುಜನ್ !

19 year old boy received the Traders Chamber of Commerce Award

Traders Chamber of Commerce Award:ಧರ್ಮಸ್ಥಳದ (Dharmastala) ಉಜಿರೆ ಎಸ್ ಡಿ ಎಂ ಕಾಲೇಜಿನ (SDM college ujire) ಯುವಕ ಸಾಧನೆ ಮಾಡಿ, ಯುವ ಜನತೆಗೆ ಮಾದರಿಯಾಗಿದ್ದಾನೆ. ಹೌದು, ಅತಿ ಸಣ್ಣ ವಯಸ್ಸಿಗೆ ಯುವಕ ‘ ಘಾಟ್ ಸ್ಟೇ ‘ ಸಂಸ್ಥೆ ಸ್ಥಾಪಿಸಿ ಪ್ರತಿಷ್ಟಿತ ಕರ್ನಾಟ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್ ಅವರು ಆಯೋಜಿಸಿದ Karnataka business awards 2023 ಅಲ್ಲಿ best homestay booking platform of the year ಪ್ರಶಸ್ತಿ ಬಾಚಿಕೊಂಡಿದ್ದಾನೆ.

ಹೊರನಾಡಿನ ಹೊಸನೆಲದ ಜಯಲೀಲಾ ಮತ್ತು ಮಂಜಪ್ಪ ದಂಪತಿಯ ಮಗ ಸುಜನ್ ಜೈನ್ (19)  ಘಾಟ್ ಸ್ಟೇ ಸಂಸ್ಥೆ ಸ್ಥಾಪಿಸಿದ್ದು, ಈ ಸಂಸ್ಥೆ ಹೋಂಸ್ಟೇಗಳ ಬುಕಿಂಗ್ ಪ್ಲಾಟ್‍ಫಾರ್ಮ್ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗೆ ನಾಮಿನೇಷನ್ ಪಡೆದಿತ್ತು. ಸದ್ಯ ಯುವ ಪ್ರಜೆ ಸುಜನ್ ಜೈನ್ ಅವರ ಘಾಟ್ ಸ್ಟೇ ಸಂಸ್ಥೆ ಕರ್ನಾಟಕ ಟ್ರೇಡರ್ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಬುಸಿನೆಸ್ ಪುರಸ್ಕಾರ 2023 ಗಳಿಸಿದೆ.

ಬೆಂಗಳೂರಿನ ಇಬಿಸು ಸ್ಟುಡಿಯೊದಲ್ಲಿ (Bengaluru) ಇತ್ತೀಚೆಗೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸುಜನ್ ಜೈನ್ ಪ್ರತಿಷ್ಟಿತ best homestay booking flatform ಪ್ರಶಸ್ತಿಯನ್ನು ಪಡೆದರು. ಈ ಸಂದರ್ಭದಲ್ಲಿ ಯುವಕನ ತಾಯಿ ಜಯಲೀಲಾ ಅವರೂ ವೇದಿಕೆಯಲ್ಲಿದ್ದು, ಮಗನ ಯಶಸ್ಸು ಕಂಡು ಆನಂದಿಸಿದರು.

ಸುಜನ್ ಪ್ರಸ್ತುತ ಉಜಿರೆ ಎಸ್‍ಡಿಎಂ ಕಾಲೇಜಿನಲ್ಲಿ ಬಿ ವೊಕ್ ಪದವಿಯ ಎರಡನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ. ಅತಿ ಸಣ್ಣ ವಯಸ್ಸಿಗೆ ಯುವಕನ ಈ ಸಾಧನೆ ಯುವ ಜನತೆಗೆ ಮಾದರಿಯಾಗಿದೆ. ಹೆತ್ತವರಿಗೆ ಹೆಮ್ಮೆಯ ವಿಷಯವೂ ಆಗಿದೆ

 

ಇದನ್ನು ಓದಿ: Belthangadi: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಬೆಳ್ತಂಗಡಿಯ ನೌಷಾದ್‌ಗೆ ಎನ್‌ಐಎ ತಲಾಷ್!

Leave A Reply

Your email address will not be published.