Nalin Kumar kateel: ಬೇಕಾಬಿಟ್ಟಿ ಹೇಳಿಕೆ ನೀಡಿ, ನಾಲಗೆ ಹರಿಬಿಟ್ರೆ ನಾಯಕರೆಂದೂ ನೋಡದೆ ಕ್ರಮ ಕೈಗೊಳ್ಳುತ್ತೇವೆ !! ಬಿಜೆಪಿ ನಾಯಕರಿಗೆ ರಾಜ್ಯಾಧ್ಯಕ್ಷರ ವಾರ್ನಿಂಗ್ !!

Nalin Kumar kateel warning that strict action will be taken if false statement is given

Nalin Kumar kateel: ರಾಜ್ಯ ಬಿಜೆಪಿ(BJP) ಪಾಳಯದಲ್ಲಿ ಒಳಜಗಳ ಹೊತ್ತಿ ಉರಿಯುತ್ತಿದ್ದು, ಸ್ಪೋಟಗೊಳ್ಳುವುದೊಂದೇ ಬಾಕಿ ಅನ್ನುವಂತಾಗಿದೆ. ನಾಯಕರು ಕೂಡ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ. ಇದೀಗ ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ(BJP State president) ಎಚ್ಚರಿಕೆ ನೀಡಿದ್ದು, , ಪಕ್ಷದ ಶಿಸ್ತು ಮೀರಿ ಯಾರು ಕೂಡ ಯಾವುದೇ ಹೇಳಿಕೆಗಳ‌ನ್ನು ನೀಡಬಾರದು. ಪಕ್ಷದ ಸೂಚನೆ ಮೀರಿ ಯಾರಾದರೂ ಹೇಳಿಕೆ ಕೊಟ್ಟರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಮುಖಂಡರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಹೌದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ(Assembly election) ಬಿಜೆಪಿ ಹೀನಾಯವಾಗಿ ಸೋಲುಂಡಿದ್ದು, ಸೋಲಿನ ಬಗ್ಗೆ ಪಕ್ಷದ ನಾಯಕರೊಳಗೇ ಅಪಸ್ವರಗಳು ಕೇಳಿ ಬರುತ್ತಿವೆ. ನಾಯಕರೂ ಒಬ್ಬರನ್ನೊಬ್ಬರು ದೂರಿಕೊಂಡು ಬೇಕಾಬಿಟ್ಟಿ ಹೇಳಿಕೆ ನೀಡುತ್ತಾ ನಾಲಗೆ ಹರಿಬಿಡುತ್ತಿದ್ದಾರೆ. ಸಾರ್ವಜನಿಕವಾಗಿಯೇ ಇದೆಲ್ಲದೂ ಆಗುತ್ತಿದ್ದು ಪಕ್ಷಕ್ಕೆ ಭಾರೀ ಮುಜುಗರ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar kateel) ಮೌನ ಮುರಿದಿದ್ದು, ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕಲು ಶಿಸ್ತು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.

ಬಿಜೆಪಿ ನಾಯಕತ್ವದ ಬಗ್ಗೆ ಪಕ್ಷದೊಳಗೆ ಅಪಸ್ವರ ವಿಚಾರದ ಬಗ್ಗೆ ಮಂಗಳೂರಿನಲ್ಲಿ(Mangalore) ಮಂಗಳವಾರ ಮಾತನಾಡಿದ ಅವರು, ಯಾರೂ ಯಾವುದೇ ಹೇಳಿಕೆಗಳ‌ನ್ನು ನೀಡಬಾರದು. ಪಕ್ಷದ ಶಿಸ್ತು ಅನುಶಾಸನ ಪ್ರಕಾರವೇ ಕೆಲಸ ಮಾಡಬೇಕು. ಆದ್ದರಿಂದ ಹೇಳಿಕೆ ಕೊಟ್ಟರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ಅಲ್ಲದೆ ಬಿಜೆಪಿ ರಾಜ್ಯದಲ್ಲಿ ಸೋತ ಬಳಿಕ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ಎಲ್ಲೂ ಗಲಾಟೆಗಳು ಆಗಿಲ್ಲ. ಎಲ್ಲಾ ಕಾರ್ಯಕರ್ತರು ಲೋಕಸಭಾ ಚುನಾವಣೆಗೆ(Parliament election) ತಯಾರಿಯನ್ನು ಮಾಡುತ್ತಿದ್ದಾರೆ. ಆದರೂ ಕೆಲವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಿನ್ನೆಯೆ ಎಲ್ಲಾ ಹಿರಿಯರಲ್ಲಿ ಮಾತಾಡಿದ್ದೇನೆ. ಇವತ್ತಿನಿಂದ ಯಾರೂ ಯಾವ ಹೇಳಿಕೆಗಳನ್ನು ಕೊಡಬಾರದು. ಪಾರ್ಟಿಯ ಶಿಸ್ತು ಅನುಶಾಸನ ಪ್ರಕಾರವೇ ಕೆಲಸ ಮಾಡಬೇಕು. ಹೇಳಿಕೆ ಕೊಟ್ಟವರಿಗೆ ನೋಟೀಸ್ ನೀಡುವ ಕೆಲಸ ಮಾಡಿದ್ದೇನೆ ಎಂದರು.

ಇದರೊಂದಿಗೆ ವಿಪಕ್ಷ ನಾಯಕರ ನೇಮಕ, ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ಹೇಳಿಕೆ ನೀಡಿ ಪಕ್ಷದ ಘನತೆಗೆ ಧಕ್ಕೆ ತರಬಾರದು. ವಿಪಕ್ಷ ನಾಯಕ, ಮತ್ತಿತರ ಹುದ್ದೆಗಳ ಬಗ್ಗೆ ಪಕ್ಷ ನಿರ್ಧಾರ ಮಾಡಲಿದೆ. ಸೂಕ್ತ ಸಮಯದಲ್ಲಿ ಸಂಸದೀಯ ಮಂಡಳಿ ನಿರ್ಧಾರ ಪ್ರಕಟಿಸಲಿದೆ. ಕೆಲವರು ಹುದ್ದೆ ಬಗ್ಗೆ ಆಕಾಂಕ್ಷೆ ವ್ಯಕ್ತಪಡಿಸುವುದು ಗಮನಕ್ಕೆ ಬಂದಿದೆ. ವಿವಿಧ ಹುದ್ದೆ ಕುರಿತು ಆಕಾಂಕ್ಷೆ ವ್ಯಕ್ತಪಡಿಸುವುದು ಗಮನಕ್ಕೆ ಬಂದಿದೆ. ಪಕ್ಷದ ಸಭೆಗಳಲ್ಲಿ ಈ ವಿಷಯ ಬಗ್ಗೆ ಚರ್ಚೆ ಮಾಡೋದು ಸರಿಯಲ್ಲ. ಪಕ್ಷದ ಘನತೆಗೆ ಧಕ್ಕೆ ಉಂಟಾಗದಂತೆ ನಾಯಕರು ನೋಡಿಕೊಳ್ಳಬೇಕು. ಪಕ್ಷದ ಆಂತರಿಕ ವಿಚಾರವನ್ನು ಬಹಿರಂಗವಾಗಿ ಚರ್ಚಿಸುವುದು ಸೂಕ್ತವಲ್ಲ ಎಂದು ರಾಜ್ಯ ಬಿಜೆಪಿ ಮುಖಂಡರಿಗೆ ನಳಿನ್ ಕುಮಾರ್ ಕಟೀಲು ಸೂಚನೆ ನೀಡಿದ್ದಾರೆ.

 

ಇದನ್ನು ಓದಿ: Ration card: ರೇಷನ್ ಕಾರ್ಡ್ ಗೂ ಬಂತು ಹೊಸ ರೂಲ್ಸ್ !! ಇನ್ಮುಂದೆ ಇವರಿಗೆ ಸಿಗೋಲ್ಲ ರೇಷನ್!! 

Leave A Reply

Your email address will not be published.