Free bus travel: ಬಸ್ಸಲ್ಲಿ ಫ್ರೀಯಾಗಿ ಸುತ್ತಾಡ್ತಿರೋ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ !! ಸಾರಿಗೆ ಸಚಿವರಿಂದ ಮಹತ್ವದ ಘೋಷಣೆ..!!

latest news shakthi scheme Good news from the Transport Minister for women who travel freely in the bus

Free bus travel: ಕಾಂಗ್ರೆಸ್ ಸರ್ಕಾರ (Congress Govt) ವಿಧಾನಸಭೆ ಚುನಾವಣೆಗೂ(Assembly election) ಮುನ್ನ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ (Five Guarantees) ಪೈಕಿ ಒಂದಾಗಿರುಧ ಮಹಿಳೆಯರ ಉಚಿತ ಬಸ್ ಪ್ರಯಾಣ (ಶಕ್ತಿ ಯೋಜನೆ) ಯೋಜನೆ ಈಗಾಗಲೇ ರಾಜ್ಯಾದ್ಯಂತ ಜಾರಿಯಾಗಿದ್ದು ಭರ್ಜರಿ ರೆಸ್ಪಾನ್ಸ್(Responce) ಸಿಗುತ್ತಿದೆ. ಅಲ್ಲದೆ ಕೆಲವೆಡೆ ಮಹಿಳೆಯರು ತಮ್ಮ ‘ಶಕ್ತಿ’ ಪ್ರದರ್ಶನ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಸಾರಿಗೆ ಸಚಿವ ರಮಾಲಿಂಗ ರೆಡ್ಡಿಯವರು ಮಹಿಳೆಯರಿಗೆ ಹೊಸ ಗುಡ್ ನ್ಯೂಸ್(Good news) ಒಂದನ್ನು ನೀಡಿದ್ದಾರೆ.

ಹೌದು, ಉಚಿತ ಬಸ್ (Free bus travel) ಸೇವೆ ಒದಗಿಸುವ ಶಕ್ತಿ ಯೋಜನೆಗೆ (Free Bus For Women Scheme) ಉತ್ತಮ‌ ಪ್ರತಿಕ್ರಿಯೆ ಸಿಕ್ಕಿದ್ದು ಈಗಾಗಲೇ ಕೋಟ್ಯಾಂತರ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇದೀಗ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ(Ramalinga reddy) ಅವರು, ಈ ಯೋಜನೆಯಿಂದ ಸಾರ್ವಜನಿಕ ಸಾರಿಗೆ ಸರಕಾರಿ ಬಸ್ ನ ಪ್ರಯಾಣಕ್ಕೆ ಒತ್ತು ನೀಡಿದಂತಾಗಿದೆ. ಮಹಿಳೆಯರಿಗೂ ಆರ್ಥಿಕ ಬೆಂಬಲ ನೀಡಿದಂತಾಗಿದೆ. ಪ್ರಯಾಣ ಹೆಚ್ಚಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬಸ್ ಖರೀದಿಸಿ, ಪ್ರಯಾಣವನ್ನು ಆರಾಮದಾಯಕವಾಗಿಸುತ್ತೇವೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು ‘ಶಕ್ತಿ ಯೋಜನೆಯಿಂದ ಹಲವಾರು ಮಹಿಳೆಯರಿಗೆ ಸಹಾಯ ವಾಗಿದೆ, ಇನ್ನು ಕೆಲವೊಂದಿಷ್ಟು ಗ್ರಾಮೀಣ ಪ್ರದೇಶ ಹಳ್ಳಿ ಕಡೆ ಸರಕಾರಿ ಬಸ್(Government bus)ನ ಸೌಲಭ್ಯ ಇಲ್ಲ, ಇದರ ಬಗ್ಗೆ ಚರ್ಚಿಸಿ ತಿರ್ಮಾನ ಕೈಗೊಳ್ಳುತ್ತೇವೆ, ಇನ್ನು ಹೆಚ್ಚು ಹೊಸ ಬಸ್​ಗಳನ್ನು ಬಿಡುವ ಹೊಣೆ ನಮ್ಮದು. ನಾಲ್ಕು ಸಾರಿಗೆ ನಿಗಮಗಳಿಂದ 4 ಸಾವಿರ ಬಸ್‌ಗಳ ಖರೀದಿ ಮಾಡಿದ್ದೇವೆ, ಜಿಲ್ಲೆಯ 20 ಗ್ರಾಮಗಳಿಗೆ ಸರಕಾರಿ ಬಸ್ ಇಲ್ಲ ಎಂದು ತಿಳಿದು ಬಂದಿದೆ, ಬಸ್ ಇಲ್ಲದ ಹಳ್ಳಿಗಳ ಸಮೀಕ್ಷೆ ನಡೆಯುತ್ತಿದೆ. ರಸ್ತೆ ಸರಿಯಾಗಿದ್ದರೆ, ಅಲ್ಲಿಯೂ ಬಸ್ ಗಳನ್ನು ಬಿಡುತ್ತೇವೆ’ ಎಂದು ತಿಳಿಸಿದ್ದಾರೆ.

ಅಲ್ಲದೆ ‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನ ದಿಂದ ದಿನಕ್ಕೆ ಹೆಚ್ಚಾಗಿದ್ದು, ಮಹಿಳೆಯರು ಸಾಕಷ್ಟು ಆಸಕ್ತಿ ತೋರಿಸಿದ್ದಾರೆ, ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಹೋದ ವಾರದ ದಿನದಲ್ಲಿಯು ಹೆಚ್ಚು ಪ್ರಯಾಣ ಪ್ರಯಾಣ ಮಾಡಿದ್ದಾರೆ, ಇನ್ನು ಗ್ರಾಮೀಣ ಭಾಗದ ಸ್ಥಳದಲ್ಲಿ ಹೆಚ್ಚು ಬಸ್ ಹಾಕಿ ಅಲ್ಲಿಯು ಸರ್ಕಾರಿ ಬಸ್‌ ಸಂಚರಿಸುವಂತೆ ಮಾಡುತ್ತೇವೆ. ಈ ಯೋಜನೆ ಬಗ್ಗೆ ಯಾರು ಏನೇ ಮಾತನಾಡಿದ್ರೂ ನಮ್ಮ ಮಹಿಳೆಯರಿಗೆ ಅನುಕೂಲವಾಗಿದೆ’ ಎಂದಿದ್ದಾರೆ.

Leave A Reply

Your email address will not be published.