Free bus travel: ಉಚಿತ ಬಸ್ ಪ್ರಯಾಣಕ್ಕೆ ಮತ್ತೊಂದು ಹೊಸ ರೂಲ್ಸ್ !? ಇನ್ನೆರಡು ದಿನದಲ್ಲೇ ಜಾರಿ..ಮಹಿಳೆಯರಿಗೆ ಶಾಕ್ !!
latest news shakthi scheme Another new rules for free bus travel
Free bus travel: ಕಾಂಗ್ರೆಸ್ ಸರ್ಕಾರದ ಫ್ರೀ ಬಸ್ ಯೋಜನೆಗೆ(Free bus travel) ಮಹಿಳೆಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಕೋಟಿ ಕೋಟಿ ಮಹಳಿಯರು ಪ್ರತಿದಿನ ಪ್ರಯಾಣ ಮಾಡುತ್ತಿದ್ದಾರೆ. ಅದರಲ್ಲೂ ವಾರಾಂತ್ಯದಲ್ಲಂತೂ ಸರ್ಕಾರಿ ಬಸ್ ಬಗ್ಗೆ ಮಾತಾಡುವಂತೆಯೇ ಇಲ್ಲ. ಬಸ್ ಗಳು ಅಷ್ಟು ರಶ್ ಆಗುತ್ತಿವೆ. ಈ ಬೆನ್ನಲ್ಲೇ ಸರ್ಕಾರ(Government) ಈ ‘ಶಕ್ತಿ ಯೋಜನೆಗೆ’ ಮೇಜರ್ ಸರ್ಜರಿ ಮಾಡಲು ಹೊರಟಿದೆಯಾ ಎಂಬ ಗುಮಾನಿ ಶುರುವಾಗಿದೆ.
ಹೌದು, ಕಾಂಗ್ರೆಸ್ ಸರ್ಕಾರದ(Congress Government) ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಗೆ ರಾಜ್ಯದಲ್ಲಿ ಭರ್ಜರಿಯಾದ ರೆಸ್ಪಾನ್ಸ್(Responce) ಸಿಗುತ್ತಿದೆ. ಈ ಯೋಜನೆಯನ್ನು ಮಹಿಳೆಯರು ಶಕ್ತಿ ಮೀರಿ ಬಳಸಿಕೊಳ್ಳುತ್ತಿದ್ದು, ಕೆಲವೆಡೆ ಅವಾಂತರಗಳು ಆಗಿಹೋಗಿವೆ. ಅಲ್ಲದೆ ದಿನದಿಂದ ದಿನಕ್ಕೆ ಇದರಿಂದ ಸರ್ಕಾರಕ್ಕೆ ಕೋಟಿ, ಕೋಟಿ ಹೊರೆ ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಶಕ್ತಿ ಯೋಜನೆಗೆ, ವಾರಾಂತ್ಯದಲ್ಲಿ ಹೊಸ ರೂಲ್ಸ್ ತರಲು ಮುಂದಾಗಿದೆ.
ಅಂದಹಾಗೆ ಶಕ್ತಿ ಯೋಜನೆಯ ಫಲಾನುಭವಿಗಳಾಗಲು ರಾಜ್ಯದ ಎಲ್ಲ ಮಹಿಳೆಯರು ಅರ್ಹರಾಗಿದ್ದು ಆಧಾರ್(Adhar card), ಓಟಾರ್ ಕಾರ್ಡ್(Voter ID)ನ ಗುರುತಿನ ಕಾರ್ಡ್ ತೋರಿಸಿ ಉಚಿತ ಪ್ರಯಾಣ ಮಾಡಬಹುದು. ಆದರೆ ಮುಂದಿನ ದಿನದಲ್ಲಿ ಶಕ್ತಿ ಕಾರ್ಡ್(Shakti card) ಬರಲಿದೆ. ಅದೇ ರೀತಿ ವಾರಾಂತ್ಯದಲ್ಲಿ ಉಚಿತ ಪ್ರಯಾಣಿಗರ ಸಂಖ್ಯೆ ಎಂದಿಗಿಂತಲೂ ಹೆಚ್ಚಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ಹೊಸ ರೂಲ್ಸ್ ಅಪ್ಲೆ ಆಗುವ ಸಾಧ್ಯತೆ ಹೆಚ್ಚಾಗಿದೆ.
ಏನದು ಹೊಸ ರೂಲ್ಸ್?
ಶಕ್ತಿ ಯೋಜನೆ ಜಾರಿಯಾದಾಗಿನಿಂದ ಪ್ರತೀ ವೀಕೆಂಡ್(Weekend) ನಲ್ಲಿ ಮಹಿಳೆಯರು ಹೆಚ್ಚು ಪ್ರಯಾಣ ಮಾಡುತ್ತಿದ್ದಾರೆ. ಈ ವೇಳೆ ಬಸ್ ಗಳು ಹೆಚ್ಟು ರಶ್ ಆಗುತ್ತಿವೆ. ಹೀಗಾಗಿ ವೀಕೆಂಡ್ನಲ್ಲಿ ಶಕ್ತಿ ಯೋಜನೆ ಅಪ್ಲೆ ಆಗದಿರುವ ಸಾಧ್ಯತೆ ಇದೆ. ಅಂದರೆ ಶನಿವಾರ(Saturday) ಮಧ್ಯಾಹ್ನನದ ಮೇಲೆ ಮತ್ತು ಭಾನುವಾರ(Sunday)ದಂದು ಶಕ್ತಿ ಯೋಜನೆ ಬಳಸುವಂತಿಲ್ಲ ಎಂಬ ರೂಲ್ಸ್ ಬರುವ ಸಾಧ್ಯತೆ ಇದೆ.
ಇದನ್ನು ಓದಿ: Hijab: ಇವರಿಗೆ ಆಪರೇಶನ್ ಥಿಯೇಟರ್’ನಲ್ಲೂ ಹಿಜಾಬ್ ಹಾಕ್ಕೊಂಡೇ ಇರಬೇಕಂತೆ – ಕೇರಳದ MBBS ವಿದ್ಯಾರ್ಥಿಗಳ ಲೇಟೆಸ್ಟ್ ಬೇಡಿಕೆ !