Ration card: ರೇಷನ್ ಕಾರ್ಡ್ ಗೂ ಬಂತು ಹೊಸ ರೂಲ್ಸ್ !! ಇನ್ಮುಂದೆ ಇವರಿಗೆ ಸಿಗೋಲ್ಲ ರೇಷನ್!!

latest news kannada news New rules for ration card

Ration card: ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು(Government Schemes) ಕೂಡ ಜನರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಏನೋನೋ ಗೋಲ್ ಮಾಲ್ ಮಾಡಿ ಅರ್ಹರಲ್ಲದವರೂ ಕೂಡ ಎಲ್ಲವನ್ನೂ ಪಡೆಯುತ್ತಾರೆ. ಇಂತಹ ಚಟುವಟಿಕೆಗಳು ರೇಷನ್ ಕಾರ್ಡ್(Ration card)ಗಳಲ್ಲಿಯೇ ಹೆಚ್ಚೆನ್ನಹುದು. ಆದರೀಗ ಸರ್ಕಾರ ಇದೆಲ್ಲದಕ್ಕೂ ಕಡಿವಾಣ ಹಾಕಲು ಮುಂದಾಗಿದೆ.

ಹೌದು, ಅನರ್ಹ ಜನರು ಸರ್ಕಾರಕ್ಕೆ(Government) ಗೊತ್ತಿಲ್ಲದಂತೆ ಕಾನೂನನ್ನು ಉಲ್ಲಂಘಿಸಿ ರೇಷನ್‌ ಪಡೆಯುತ್ತಿದ್ದು, ಒಬ್ಬರ ಕಾರ್ಡ್ ಬಳಸಿ ಬೇರೊಬ್ಬರು ರೇಷನ್ ತೆಗೆದುಕೊಳ್ಳುವುದು, ಒಂದಕ್ಕಿಂತ ಹೆಚ್ಚು ರೇಷನ್ ಇಟ್ಟುಕೊಳ್ಳುವುದು ಹೀಗೆ ಅಕ್ರಮಗಳು ನಡೆಯುತ್ತಿವೆ. ಇವುಗಳನ್ನು ತಪ್ಪಿಸಲು ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಇಂಥವರಿಗೆ ಸರ್ಕಾರ ಕುಣಿಕೆಯನ್ನು ಬಿಗಿಗೊಳಿಸುತ್ತಿದೆ. ಹಾಗಿದ್ರೆ ಏನು ಆ ಬದಲಾವಣೆಗಳು, ಸರ್ಕಾರ ತಂದ ಹೊಸ ರೂಲ್ಸ್(Rules) ಯಾವದು?

ಅಂದಹಾಗೆ ದೇಶದಲ್ಲಿ ಯಾವಾಗ ಉಚಿತ ಪಡಿತರ(Free ration) ವ್ಯವಸ್ಥೆ ಆರಂಭವಾಯಿತೋ ಆಗ ಇದರಲ್ಲಿ ಸಾಕಷ್ಟು ಅಕ್ರಮಗಳು ಕೂಡ ನಡೆದಿವೆ ಅರ್ಹತೆ ಇಲ್ಲದವರು ಕೂಡ ಪಡಿತರ ಚೀಟಿಯನ್ನು ಮಾಡಿಸಿಕೊಂಡು ಪಡಿತರ ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರದಿಂದ ಉಚಿತ ಪಡಿತರ ಪಡೆದು ಅದನ್ನು ಮಾರಾಟ ಮಾಡಿ ಹಣ ಕೂಡ ಸಂಪಾದಿಸುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆ ಸರ್ಕಾರದ ಮಾನದಂಡದ ಆಧಾರದ ಮೇಲೆ ಮಾತ್ರ ಪಡಿತರ ನೀಡಲಾಗುವುದು. ಬಡತನ ಹಾಗೂ ಬಡತನ ರೇಖೆಗಿಂತ ಕಡಿಮೆ ಆದಾಯ ಹೊಂದಿರುವವರಿಗೆ ಮಾತ್ರ ಪಡಿತರ ಸಿಗಬೇಕು. ಹಾಗಾಗಿ ಈ ಕೆಳಗಿನ ವಸ್ತುಗಳು, ದಾಖಲೆಗಳು ನಿಮ್ಮ ಬಳಿ ಇದ್ದರೆ ನಿಮಗೆ ಪಡಿತರ ಸಿಗುವುದಿಲ್ಲ ಎಂದು ಸರ್ಕಾರ ಘೋಷಿಸಿದೆ.

ನೀವು ಇವುಗಳನ್ನು ಹೊಂದಿದ್ದರೆ ಪಡಿತರ ಸಿಗೋದಿಲ್ಲ:
• 100 ಚ.ಮಿ ವಿಸ್ತೀರ್ಣ ಹೊಂದಿರುವ ಫ್ಲ್ಯಾಟ್(Flat) ಅಥವಾ ಮನೆ ಹೊಂದಿದ್ದರೆ,
• ನಾಲ್ಕು ಚಕ್ರದ ವಾಹನ ಅಥವಾ ಟ್ರ್ಯಾಕ್ಟರ್(Tractor) ಇದ್ದರೆ,
• ಗ್ರಾಮಗಳಲ್ಲಿ ವಾರ್ಷಿಕವಾಗಿ ಎರಡು ಲಕ್ಷಕ್ಕಿಂತ ಹೆಚ್ಚಿನ ಆದಾಯ ಗಳಿಸುತ್ತಿದ್ದರೆ ಹಾಗೂ ನಗರಗಳಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸುತ್ತಿದ್ದರೆ,
ಒಂದು ವೇಳೆ ಈ ಎಲ್ಲಾ ಸೌಲಭ್ಯಗಳು ಇದ್ದು ನೀವು ಪಡಿತರ ಬಳಸಿಕೊಳ್ಳುತ್ತಿದ್ದರೆ ಅಂತವರು ತಕ್ಷಣವೇ ಸರ್ಕಾರಕ್ಕೆ ತಮ್ಮ ಬಳಿ ಇರುವ ಪಡಿತರ ಕಾರ್ಡ್ ಅನ್ನು ಒಪ್ಪಿಸಬೇಕು. ಆದಾಗ್ಯೂ, ನೀವು ನಿಯಮವನ್ನು ಉಲ್ಲಂಘಿಸಿದರೆ, ಅಧಿಕಾರಿಗಳು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು.

 

ಇದನ್ನು ಓದಿ: Free Rice: ಉಚಿತ ಅಕ್ಕಿಯ ಬದಲು ಹಣ ನೀಡಲು ನಿರ್ಧಾರ – ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ 

Leave A Reply

Your email address will not be published.