Free electricity Scheme: ಫ್ರೀ ಕರೆಂಟ್ ಪಡೆಯುವವರಿಗೆಲ್ಲ ಹೊಸ ರೂಲ್ಸ್ !! ಇದನ್ನು ಮಾಡ್ಲಿಲ್ಲ ಅಂದ್ರೆ ನಿಮಗೆ ಲಾಸ್!!
Latest Karnataka news Congress guarantee new rules for all households before getting free electricity
Free electricity Scheme: ಕಾಂಗ್ರೆಸ್ ಸರ್ಕಾರ (Congress Govt) ವಿಧಾನಸಭೆ ಚುನಾವಣೆಗೂ(Assembly election) ಮುನ್ನ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ (Five Guarantees) ಪೈಕಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ’ ಯೋಜನೆಗೆ (Gruha Jyothi Scheme) ಈಗಾಗಲೇ ಅರ್ಜಿ ಸ್ವೀಕಾರ ಆರಂಭವಾಗಿದೆ. ಈ ನಡುವೆಯೇ ರಾಜ್ಯ ಸರ್ಕಾರ ಉಚಿತ ವಿದ್ಯುತ್ ಯೋಜನೆ( Free electricity Scheme) ವಿಚಾರವಾಗಿ ಹೊಸ ರೂಲ್ಸ್ ತರುತ್ತಿದೆ.
ಹೌದು, ಕಳೆದೊಂದು ವಾರದಿಂದ ರಾಜ್ಯದಲ್ಲಿ ವಿದ್ಯುತ್ ಬಿಲ್ ವಿಚಾರವಾಗಿಯೇ ಚರ್ಚೆಗಳು ಆರಂಭವಾಗಿವೆ. ಕೆಲವು ಮನೆಗೆ ಲಕ್ಷಗಟ್ಟಲೆ ಬಿಲ್ ಬರುತ್ತಿದೆ. ಇನ್ನುಳಿದಂತೆ ಹಲವರಿಗೆ ಎಂದಿಗಿಂತ ಡಬಲ್, ತ್ರಿಬಲ್ ಬಿಲ್ ಬಂದಿದೆ. ಸದ್ಯ ಈ ಬಗ್ಗೆ ರಾಜ್ಯ ಸರ್ಕಾರ ಸಮಜಾಯಿಷಿ ನೀಡಿತ್ತು. ಆದರೀಗ ಈ ಬೆನ್ನಲ್ಲೇ ಕೆಲವು ಹೊಸ ರೂಲ್ಸ್ ಜಾರಿಗೊಳಿಸ್ತಿದೆ.
ಅದೇನೆಂದರೆ ಬೆಸ್ಕಾಂ, ಎಲ್ಲಾ ಮನೆಗಳಿಗೂ ಹೊಸ ಡಿಜಿಟಲ್ (Digital) ಮಾಪನ ಬಳಸಲು ಮುಂದಾಗಿದೆ. ಹೌದು, ಹಲವು ಸಮಯದ ಹಿಂದೆ ಉಪಯೋಗ ಮಾಡುತ್ತಿದ್ದ ಇಲೆಕ್ಟ್ರೋ ಮೆಕಾನಿಕಲ್ ಮೀಟರ್ ನ್ನು ಹೊಸದಾಗಿ ನಿರ್ಮಿಸಿ ಅಳವಡಿಕೆ ಮಾಡಲಾಗುತ್ತದೆ, ಇದರಿಂದ ಸರಿಯಾದ ಪ್ರಮಾಣದ ವಿದ್ಯುತ್ ಖರ್ಚು ವೆಚ್ಚ ಗಳು ತಿಳಿಯುತ್ತವೆ, ಇದರೊಂದಿಗೆ ಹಲವು ವರ್ಷಗಳ ಹಿಂದೆ ಉಪಯೋಗ ಮಾಡುತ್ತಿದ್ದ ವಿದ್ಯುತ್ ವಿವರಗಳನ್ನು ಈ ಮೀಟರ್ ನೀಡುತ್ತದೆ, ಈ ಮೀಟರ್ ನಿಂದ ಬಳಕೆದಾರರು ಉಪಯೋಗಮಾಡುವ ಸ್ವಲ್ಪ ಪ್ರಮಾಣದ ವಿದ್ಯುತ್ ಕೂಡ ಈ ಡಿಜಿಟಲ್ ಮೀಟರ್ ನಿಂದ ಸಿಗಲಿದೆ. ಮೀಟರ್‌ಗಳ ಸೊರಿಕೆಯು ಕಡಿಮೆ ಆಗುತ್ತದೆ ಎಂಬುದಾಗಿದೆ.
ಅಂದಹಾಗೆ ಈ ಡಿಜಿಟಲ್ ಮಾಪನ ಅಥವಾ ಮೀಟರ್ ಗಳನ್ನು ಉಚಿತವಾಗಗಿ ಅಳವಡಿಸಲಾಗುತ್ತದೆ. ಹಳೆಯ ಮೀಟರ್‌ನ್ನು ಬಳಕೆ ಮಾಡದಂತೆ ಮತ್ತೆ ಹೊಸದಾಗಿ ಡಿಜಿಟಲ್ ಮೀಟರ್‌ಗಳನ್ನು ಬದಲಾಯಿಸಬೇಕಿದೆ, ಆದರೆ ಇದರಿಂದ ವಿದ್ಯುತ್ ಬಿಲ್ ಸರಿ ಪ್ರಮಾಣ ದಲ್ಲಿಯೇ ಬರಲಿದ್ದು ಹಿಂದೆ ಬರುತ್ತಿದ್ದ ಬಿಲ್ ಗಿಂತ ಹೆಚ್ಚು ಮೊತ್ತ ಬರಲಿದೆ. ಆದರೆ ಉಚಿತ ವಿದ್ಯುತ್ ಯೋಜನೆ ಜಾರಿಯದರೆ, 200 ಯುನಿಟ್ ಗಿಂತ ಕಡಿಮೆ ಬಂದರೆ ಯಾವುದೇ ಸಮಸ್ಯೆ ಇಲ್ಲ. ಅಲ್ಲದೆ ಇದೀಗ ಗ್ರಾಮೀಣ ಭಾಗದಲ್ಲೂ ಈ ಹೊಸದಾದ ಮೀಟರ್ ಅಳವಡಿಕೆ ಮಾಡಲು ಬೆಸ್ಕಾಂ ಇಲಾಖೆ ಸಿದ್ಧತೆ ನಡೆಸಿದೆ.
ಇದನ್ನೂ ಓದಿ: Australia: ಬಿಕನಿ ತೊಟ್ಟು, ಬೀಚ್‌ನಲ್ಲಿ ಮಲಗಿದವಳ ಮೇಲೆ ಏಕಾಏಕಿ ಎಗರಿದ ನಾಯಿ ! ಹಿಂದಿನಿಂದ ಬಂದು ಏನು ಮಾಡಿತು ಗೊತ್ತೇ?