Bakrid Bakri: ಕುರಿಮರಿಗೆ 1 ಕೋಟಿ ರೂ. ಆಫರ್ ಮಾಡಿದ್ರೂ ಮಾರಲು ನಿರಾಕರಿಸಿದ ಮಾಲೀಕ, ಯಾಕಿಷ್ಟು ಬೇಡಿಕೆ ?
Bakrid : ತ್ಯಾಗ ಬಲಿದಾನದ ಬಕ್ರೀದ್ ಹಬ್ಬ(Bakrid)ವನ್ನು ವಿಶ್ವದಾದ್ಯಂತ ಮುಸ್ಲಿಮರು ನಾಳೆ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳಲಿದ್ದಾರೆ. ನಾಳಿನ ಹಬ್ಬಕ್ಕೆ ಬೇಕಾದ ಕುರುಬಾನಿ ಮಾಡಲು ಆಡು, ಮೇಕೆಗಳ ಮಾರಾಟದ ಭರಾಟೆ ಭರ್ಜರಿಯಾಗಿ ಆಗುತ್ತಿದೆ. ಸಾಮಾನ್ಯವಾಗಿ 12,000 ರೂಪಾಯಿಯಿಂದ 15,000 ರೂಪಾಯಿಗೂ ಹೆಚ್ಚಿನ ಬೆಲೆಗೆ ಈಗ ಆಡು, ಮೇಕೆಗಳು ಮಾರಾಟವಾಗುತ್ತಿವೆ. ಆದರೆ ಕೆಲವು ಕಡೆ ವಿಶೇಷ ಫ್ಯಾನ್ಸಿ ಬೆಲೆ ಕೊಟ್ಟು ಬಳಿ ಕೊಡಲು ಹಾಡು ಕುರಿ ಮರಿಗಳನ್ನು ಕೊಂಡು ಕೊಳ್ಳಲಾಗುತ್ತಿದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ಕುರಿಮರಿಗೆ ಎಷ್ಟೇ ಬೆಲೆ ಬಂದರೂ ಅದನ್ನು ಮಾರಾಟ ಮಾಡಲು ಮುಂದಾಗುತ್ತಿಲ್ಲ. ಆತನ ಕುರಿಗೆ ಕಂಡು ಕೇಳರಿಯದ ರೀತಿಯಲ್ಲಿ ಬೆಲೆ ಕಟ್ಟಿದರೂ, ಜಪ್ಪಯ್ಯ ಅಂದರೂ ಆತ.ಮಾತ್ರ ತನ್ನ ಕುರಿಮರಿಯನ್ನು ನೀಡುತ್ತಿಲ್ಲ. ಹಾಗಾದ್ರೆ ಆತನ ಕುರಿ ಬೆಲೆ ಎಷ್ಟು ಗೊತ್ತೇ ?
ರಾಜಸ್ಥಾನದ ಚುರು ಜಿಲ್ಲೆಯ ರಾಜು ಸಿಂಗ್ ಎನ್ನುವವರ ಕುರಿ ಮರಿಯೊಂದರ ಖರೀದಿಗೆ 1 ಕೋಟಿ ರೂಪಾಯಿಯ ಫ್ಯಾನ್ಸಿ ಎನ್ನಿಸುವ ಆಫರ್ ಬಂದರೂ ಆತ ಮಾತ್ರ ತನ್ನ ಕುರಿಯನ್ನು ಮಾರಾಟ ಮಾಡಲು ನಿರಾಕರಿಸಿ ಸುದ್ದಿಯಾಗಿದ್ದಾನೆ. ಆದರೆ ಆತ ಕುರಿ ಕೊಡುತ್ತಿಲ್ಲ. ಆ ಕುರಿಗೆ ಅಷ್ಟು ಬೆಲೆ ಕಟ್ಟಲು ಕೂಡಾ ಒಂದು ಕಾರಣವಿದೆ.
ಅದೇನೆಂದರೆ, ಕಳೆದ ವರ್ಷ ರಾಜು ಸಿಂಗ್ ಅವರು ಸಾಕುತ್ತಿದ್ದ ಹೆಣ್ಣು ಕುರಿಯೊಂದು ಗಂಡು ಮರಿಗೆ ಜನ್ಮ ನೀಡಿತ್ತು. ಇಂದು ಅದೇ ಕುರಿಮರಿಯನ್ನು ಲಕ್ಷದಿಂದ ಕೋಟಿಯವರೆಗಿನ ಬೆಲೆ ಏರಿಕೆ ಮಾಡಿ ಜನ ಕೇಳುತ್ತಿದ್ದಾರೆ. ಅದೊಂದು ವಿಶೇಷ ಕುರಿ ಮರಿ ಆಗಿದ್ದು, ಅದರ ದೇಹದ ಮೇಲೆ ಉರ್ದುವಿನಲ್ಲಿ ಏನೋ ಬರೆದಾಗಿನ ಅಕ್ಷರವಿದೆ. ಅದು ಏನೆಂದು ಅರ್ಥ ಆಗದ ರಾಜು, ಆ ಊರಿನ ಮುಸ್ಲಿಂರ ಬಳಿ ಹೋಗಿ ಕೇಳಿದ್ದಾರೆ. ಅದು ಉರ್ದುವಿನಲ್ಲಿ ʼ786ʼ ಅಕ್ಷರವೆಂದು ಅವರು ಹೇಳಿದ್ದು, ಮುಸ್ಲಿಂರಲ್ಲಿ ʼ786ʼ ಅಕ್ಷರವನ್ನು ಪವಿತ್ರವೆಂದು ನಂಬಲಾಗುತ್ತದೆಯಾದ್ದರಿಂದ ಈಗ ಆ ಸುದ್ದಿ ಎಲ್ಲೆಡೆ ಹಬ್ಬಿದೆ.
ಈಗ ಈ ವಿಚಾರ ಅಕ್ಕಪಕ್ಕದ ಗ್ರಾಮಕ್ಕೂ ಹಬ್ಬಿದ್ದು, ಅಲ್ಲಿನ ಮುಸ್ಲಿಂರು ಈ ಕುರಿ ಮರಿಯನ್ನು ನಮಗೆ ಮಾರಾಟ ಮಾಡಿ, ನಾವು ಖರೀದಿಸುತ್ತೇವೆ ಎಂದು 70 ಲಕ್ಷದಿಂದ 1 ಕೋಟಿವರೆಗಿನ ಆಫರ್’ನ್ನು ನೀಡಿದ್ದಾರೆ. ಆದರೆ ಈ ಕುರಿಮರಿ ರಾಜುಸಿಂಗ್ ಅವರ ಪ್ರೀತಿಯ ಮತ್ತು ಆತ್ಮೀಯ ಕುರಿಮರಿ ಆಗಿರೋದರಿಂದ ಅವರು ಅದನ್ನು ಮಾರಲು ನಿರಾಕರಿಸಿದ್ದಾರೆ.
ಈಗ ಈ ಕುರಿಗೆ ಭಾರಿ ಪ್ರಮಾಣದ ಬಿಡ್ ಆಗಿದ ಕಾರಣದಿಂದ ಈ ಕುರಿ ಮರಿಯು ಸೆಲೆಬ್ರಿಟಿ ಸ್ಟೇಟಸ್ ಅನ್ನು ಪಡೆದುಕೊಂಡಿದೆ. ಈ ಕುರಿ ಮರಿಗಾಗಿ ವಿಶೇಷ ಕಾಳಜಿಯನ್ನು ವಹಿಸಿಕೊಳ್ಳಲಾಗಿದ್ದು, ಇದಕ್ಕೆ ದಾಳಿಂಬೆ, ಪಪ್ಪಾಯಿ, ಮತ್ತಿತರ ಹಣ್ಣುಗಳು, ಹಚ್ಚ ಹಸಿರು ಫ್ರೆಶ್ ತರಕಾರಿಗಳನ್ನು, ರಾಗಿ ಜೋಳ ಮತ್ತಿತರ ದವಸ ಧಾನ್ಯಗಳನ್ನು ನೀಡಲಾಗುತ್ತಿದೆ. ಅಲ್ಲದೆ ಭದ್ರತಾ ಕಾರಣಗಳಿಗಾಗಿ ಈಗ ಕುರಿ ಮರಿಯನ್ನು ಈಗ ಹೊರಗಡೆ ಬಿಡುತ್ತಿಲ್ಲ. ಅದನ್ನು ತನ್ನ ಮನೆಯೊಳಗೆ ಭದ್ರವಾಗಿ ಮತ್ತು ಜೋಪಾನವಾಗಿ ಇಡುತ್ತಿದ್ದೇನೆ ಎಂದು ಕುರಿಮರಿ ಯ ಮಾಲೀಕ ರಾಜು ಸಿಂಗ್ ಹೇಳಿದ್ದಾರೆ.
ಒಂದು ವೇಳೆ 2 ಕೋಟಿ ರೂಪಾಯಿಗಳ ಆಫರ್ ಬಂದರೆ ಅದನ್ನು ಮಾರಾಟ ಮಾಡುವುದಾಗಿ ಮಾಲೀಕರು ಹೇಳಿದ್ದಾರೆಂದು ಮತ್ತೊಂದು ವರದಿ ತಿಳಿಸಿದೆ. ಒಟ್ಟಾರೆ, ಒಂದು ಕೋಟಿ ಕೊಟ್ಟರೂ ಸಿಗದ ಕುರಿ ಮರಿ ತೀವ್ರ ಕುತೂಹಲ ಮೂಡಿಸಿದೆ.
ಒಂದು ವೇಳೆ 2 ಕೋಟಿ ರೂಪಾಯಿಗಳ ಆಫರ್ ಬಂದರೆ ಅದನ್ನು ಮಾರಾಟ ಮಾಡುವುದಾಗಿ ಮಾಲೀಕರು ಹೇಳಿದ್ದಾರೆಂದು ಮತ್ತೊಂದು ವರದಿ ತಿಳಿಸಿದೆ.
ಇದನ್ನೂ ಓದಿ : ಬೆಂಗಳೂರಿಗರೇ ಎಚ್ಚರ..!’ಬಕ್ರೀದ್ʼ ಪ್ರಯುಕ್ತ ಸಂಚಾರ ವ್ಯತ್ಯಯ, ಹೀಗಿದೆ ಪರ್ಯಾಯ ಮಾರ್ಗ