Yogi Adityanath: ವೇಗಕ್ಕೆ ಹೆಸರಾದ ಯೋಗಿ ಆದಿತ್ಯನಾಥ್’ರಿಂದ ಹೊಸ ದಾಖಲೆ, ಒಂದೇ ದಿನ 124 ಯೋಜನೆಗಳಿಗೆ ಚಾಲನೆ !

Latest news Adityanath created a new record by launching 124 projects

Yogi Adityanath: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adithyanath) ಅವರು ಒಂದೇ ದಿನ ಶಂಕುಸ್ಥಾಪನೆ ಸೇರಿ 124 ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಆದಿತ್ಯನಾಥ್‌ ಹೊಸ ದಾಖಲೆ ಬರೆದಿದ್ದಾರೆ.

ಭಾನುವಾರ (ಜೂನ್ 25) ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಪ್ರದೇಶಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ 1,719 ಕೋಟಿ ರೂಪಾಯಿ ಮೌಲ್ಯದ ಸುಮಾರು 124 ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

ಹಲವು ಕಾಮಗಾರಿಗಳಿಗೆ, ಶಂಕುಸ್ಥಾಪನೆಗಳು, ಪಾರ್ಥಲ ಮೇಲ್ಸೇತುವೆ, ವೇದ್ ವ್ಯಾನ್ ಪಾರ್ಕ್‌ ಸೇರಿದಂತೆ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗ್ರೇಟರ್ ನೋಯ್ಡಾದ ಗೌತಮ್ ಬುದ್ಧ ವಿಶ್ವವಿದ್ಯಾಲಯದಲ್ಲಿ ಸೇವ್ ಕಲ್ಚರ್ ಸೇವ್ ಇಂಡಿಯಾ ಫೌಂಡೇಶನ್ ಆಯೋಜಿಸಿದ್ದ ಮತ್ತೊಂದು ಕಾರ್ಯಕ್ರಮದಲ್ಲಿ ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ ಎನ್ನಲಾಗಿದೆ.

ಸೆಕ್ಟರ್ 78ರಲ್ಲಿ ವೇದ್ ವ್ಯಾನ್ ಪಾರ್ಕ್ ಅನ್ನು 12 ಎಕರೆಯಲ್ಲಿ 22.68 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪಾರ್ಥಲ ಮೇಲ್ಸೇತುವೆಯನ್ನು 84 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನೋಯ್ಡಾದಿಂದ ಗೇಟರ್ (ಪಶ್ಚಿಮ)ಕ್ಕೆ ಎಂಪಿ-3 ರಸ್ತೆಯನ್ನು ಸಂಪರ್ಕಿಸುತ್ತದೆ. ಈ ಸೇತುವೆ 650 ಮೀಟರ್ ಉದ್ದವಿದೆ. ಕ್ಯಾರೇಜ್‌ವೇಯ ಎರಡೂ ಬದಿಗಳಲ್ಲಿ ಒಟ್ಟು 28 ಕೇಬಲ್‌ಗಳನ್ನು ಬಳಸಿ ನಿರ್ಮಿಸಲಾಗಿದೆ.

Leave A Reply

Your email address will not be published.