Student Death: ಸಿಗರೇಟ್ ಸೇದಿದ ನೆಪದಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿತ! ಹತ್ತನೇ ತರಗತಿ ವಿದ್ಯಾರ್ಥಿ ಸಾವು!

Latest news student death news student died teacher hit him with a belt after seeing him smoking

Smoking: ಯಾರೇ ಆಗಲಿ ಕೋಪದ ಕೈಯಲ್ಲಿ ಬುದ್ಧಿ ನೀಡಿದರೆ ಅಪಾಯ ತಪ್ಪಿದ್ದಲ್ಲ ಅನ್ನೋದಕ್ಕೆ ಇಲ್ಲೊಂದು ಪಾಠ ಇದೆ. ಹೌದು, ಬಿಹಾರದಲ್ಲಿ ವಿದ್ಯಾರ್ಥಿಯೊಬ್ಬ ಸಾರ್ವಜನಿಕವಾಗಿ ಧೂಮಪಾನ (Smoking) ಮಾಡುತ್ತಿದ್ದನ್ನು ಕಂಡ ಶಿಕ್ಷಕರೊಬ್ಬರು ಬೆಲ್ಟ್ ನಿಂದ ಕ್ರೂರವಾಗಿ ಥಳಿಸಿ, ,ಏಟು ತಿಂದ ಬಾಲಕ ಸಾವಿಗೀಡಾಗಿದ್ದಾನೆ.

 

ಮಧುಬನ್ ರೈಸಿಂಗ್ ಸ್ಟಾರ್ ಪ್ರಿಪರೇಟರಿ ಸ್ಕೂಲ್ ಎಂಬ ಖಾಸಗಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಬಿಹಾರದ (Bihar) ಪೂರ್ವ ಚಂಪಾರಣ್ ಜಿಲ್ಲೆಯ ಬಜರಂಗಿ ಕುಮಾರ್ ಎಂಬ ಬಾಲಕ, ಮಧುಬನ್ ಪ್ರದೇಶದಲ್ಲಿ ತನ್ನ ತಾಯಿಯ ಮೊಬೈಲ್ ಫೋನ್ ರಿಪೇರಿ ಮಾಡಿಸಿ ಹಿಂತಿರುಗುತ್ತಿದ್ದಾಗ, ಶನಿವಾರ ಬೆಳಗ್ಗೆ 11.30ರ ಹೊತ್ತಿಗೆ ಹಾರ್ದಿಯಾ ಸೇತುವೆಯ ಕೆಳಗೆ ತನ್ನ ಸ್ನೇಹಿತರೊಂದಿಗೆ ಸಿಗರೇಟ್ ಸೇದಿದ್ದು ಈ ಸಾವಿಗೆ ಮೂಲ ಕಾರಣ.

ಮೂಲತಃ ಬಜರಂಗಿ ಎಂಬ ಬಾಲಕ 10 ನೇ ತರಗತಿ ವಿದ್ಯಾರ್ಥಿಯಾಗಿದ್ದ. ಅದೇ ಶಾಲೆಯ ಅಧ್ಯಕ್ಷ ವಿಜಯ್ ಕುಮಾರ್ ಯಾದವ್ ಅವರು ಬಾಲಕ ಧೂಮಪಾನ ಮಾಡುವುದನ್ನು ನೋಡಿ ಕೋಪಗೊಂಡಿದ್ದರು. ಬಾಲಕನ ಸಂಬಂಧಿಯಾಗಿರುವ ಶಾಲೆಯ ಶಿಕ್ಷಕರೊಬ್ಬರು ಸಹ ಅಧ್ಯಕ್ಷರ ಜೊತೆಯಲ್ಲಿದ್ದರು. ನಂತರ ಅಧ್ಯಕ್ಷರು ಬಾಲಕನ ತಂದೆಯನ್ನು ಕರೆ ಮಾಡಿದ್ದು, ಬಾಲಕನ್ನು ಶಾಲೆಯ ಕಾಂಪೌಂಡ್‌ಗೆ ಎಳೆದೋಯ್ದು, ಅಲ್ಲಿ ಅವರು ಇತರ ಶಿಕ್ಷಕರೊಂದಿಗೆ ಸೇರಿ ಆತನನ್ನು ನಿರ್ದಯವಾಗಿ ಥಳಿಸಿದ್ದಾರೆ.

ನಂತರ ಬಜರಂಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಾಗ, ಅವರನ್ನು ಮಧುಬನ್‌ನಲ್ಲಿರುವ ಖಾಸಗಿ ನರ್ಸಿಂಗ್ ಹೋಮ್‌ಗೆ ಕರೆದೊಯ್ಯಲಾಯಿತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಮುಜಾಫರ್‌ಪುರಕ್ಕೆ ಕಳುಹಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಬಾಲಕ ಮೃತಪಟ್ಟಿದ್ದಾನೆ.

ಮಾಹಿತಿ ಪ್ರಕಾರ ಬಜರಂಗಿಯ ಕುತ್ತಿಗೆ ಮತ್ತು ತೋಳುಗಳ ಮೇಲೆ ಆಳವಾದ ಗಾಯಗಳಾಗಿವೆ, ಆತನ ಖಾಸಗಿ ಭಾಗಗಳಲ್ಲಿ ರಕ್ತಸ್ರಾವವಾಗಿದೆ. ಶಿಕ್ಷಕರು ಬಾಲಕನನ್ನು ವಿವಸ್ತ್ರಗೊಳಿಸಿ ಬೆಲ್ಟ್‌ಗಳಿಂದ ಹೊಡೆದಿದ್ದಾರೆ ಎಂದು ಬಜರಂಗಿ ತಾಯಿ ಮತ್ತು ಸಹೋದರಿ ಆರೋಪಿಸಿದ್ದಾರೆ.

ಆದರೆ ಶಾಲೆಯ ಅಧ್ಯಕ್ಷರು ಕುಟುಂಸ್ಥರ ಆರೋಪವನ್ನು ತಳ್ಳಿ ಹಾಕಿ, ಹುಡುಗನಿಗೆ ಥಳಿಸಿಲ್ಲ. ಧೂಮಪಾನ ಮಾಡುತ್ತಿದ್ದ ವಿಷಯ ಅವನ ಕುಟುಂಬಕ್ಕೆ ತಿಳಿಯಬಹುದೆಂಬ ಭಯದಿಂದ ವಿಷ ಸೇವಿಸಿದ್ದಾನೆ ಎಂದು ಹೇಳಿದ್ದು, ಬಾಲಕನನ್ನು ಮುಜಾಫರ್‌ಪುರಕ್ಕೆ ಕರೆದೊಯ್ಯಲಾಯಿತು, ಆದರೂ ಅವ ಬದುಕುಳಿಯಲಿಲ್ಲ ಎಂದು ಹೇಳಿದ್ದಾರೆ.

ಸದ್ಯ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೋತಿಹಾರಿಗೆ ಕಳುಹಿಸಲಾಗಿದ್ದು, ಈ ವಿಚಾರವಾಗಿ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.