V Somanna- B S Yadiyurappa: ಯಡಿಯೂರಪ್ಪ ವಿರುದ್ಧ ವಿ. ಸೋಮಣ್ಣ ಆಕ್ರೋಶ!! ಬಿಜೆಪಿಯಲ್ಲಿ ಭುಗಿಲೆದ್ದ ನಾಯಕರು ಕಚ್ಚಾಟ..!!

Latest news Political news V Somanna- B S Yadiyurappa V Somanna expressed outrage against Yeddyurappa

Share the Article

V Somanna- B S Yadiyurappa: ವಿಧಾನಸಭಾ ಚುನಾವಣೆಯಲ್ಲಿ(Assembly election) ಹೀನಾಯವಾಗಿ ಸೋತಿರೋ ಬಿಜೆಪಿ(BJP) ಪಾಳಯದಲ್ಲಿ ದಿನದಿಂದ ದಿನಕ್ಕೆ ಒಳ ಜಗಳದ ಕಿಚ್ಚು ಹೆಚ್ಚುತ್ತಿದೆ. ನಿನ್ನೆ ತಾನೆ ಯತ್ನಾಳ್(Basavanagowda jatnal) ಹಾಗೂ ಮಾಜಿ ಸಿಎಂ ಬೊಮ್ಮಾಯಿ(Bommai) ಇಬ್ಬರೂ ಒಂದೇ ವೇದಿಕೆಯಲ್ಲಿ ಏಟು-ಎದುರೇಟುಗಳನ್ನು ಕೊಟ್ಟಿದ್ದರು. ಈ ಬೆನ್ನಲ್ಲೇ ಮಾಜಿ ಸಚಿವ, ಬಿಜೆಪಿ ನಾಯಕ ವಿ ಸೋಮಣ್ಣ ಅವರು ಬಿಜೆಪಿ ವರಿಷ್ಠ ಬಿ ಎಸ್ ಯಡಿಯೂರಪ್ಪರನವರ ಮೇಲೆ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.

ಹೌದು, ವಿಧಾನಸಭಾ ಚುನಾವಣೆಯಲ್ಲಿ (Assembly election) ಎರಡೂ ಕ್ಷೇತ್ರಗಳಲ್ದಿ ಹೀನಾಯವಾಗಿ ಸೋಲನುಭವಿಸಿರುವ ಬಿಜೆಪಿ ನಾಯಕ ವಿ ಸೋಮಣ್ಣ (V Somanna- B S Yadiyurappa) ಅವರು ಬಿಜೆಪಿ(BJP) ರಾಜ್ಯಾಧ್ಯಕ್ಷ ಸ್ಥಾನ ನನಗೆ ಕೊಡಿಯೆಂದು ಪಕ್ಷದ ಹೈಕಮಾಂಡ್ ಬಳಿ ಪಟ್ಟು ಹಿಡಿದಿದ್ದಾರೆ. ಇದೀಗ ಈ ಬೆನ್ನಲ್ಲೇ ಬಿಜೆಪಿಯ ಮಾಸ್ ಲೀಡರ್ ಬಿ ಎಸ್ ಯಡಿಯೂರಪ್ಪನವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಅಂದಹಾಗೆ 2019ರಲ್ಲಿ ಚಿಂಚೋಳಿ(Chincholi) ವಿಧಾನಸಭಾ ಕ್ಷೇತ್ರ ಹಾಗೂ ಕುಂದಗೋಳ(Kundagola) ಕ್ಷೇತ್ರದ ಉಪಚುನಾವಣೆ ನಡೆದಿತ್ತು. ಇದರಲ್ಲಿ ಚಿಂಚೋಳಿ ಕ್ಷೇತ್ರದ ಜವಾಬ್ದಾರಿಯನ್ನು ವಿ. ಸೋಮಣ್ಣಗೆ ಬಿಜೆಪಿ ನಾಯಕರು ವಹಿಸಿದ್ದರು. ಇದನ್ನು ಸಮರ್ಥವಾಗಿ ನಿಭಾಯಿಸಿದ್ದ ಸೋಮಣ್ಣ ಆ ಕ್ಷೇತ್ರದಲ್ಲಿ ಗೆಲುವು ತಂದುಕೊಟ್ಟರು. ಆದರೆ ಕುಂದಗೋಳದಲ್ಲಿ ಬಿಎಸ್ವೈ ಸೇರಿ ಕೆಲವು ನಾಯಕರನ್ನು ಉಸ್ತುವಾರಿಯಾಗಿ ನೇಮಿಸಿದರೂ ಗೆಲು ದಕ್ಕಲಿಲ್ಲ. ಇದನ್ನು ಮುಂದಿಟ್ಟುಕೊಂಡು ಯಡಿಯೂರಪ್ಪನವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿನಡೆಸಿದ ಅವರು ‘ಅದೇ ವರ್ಷ ನಡೆದ ಕುಂದಗೋಳ ಉಪಚುನಾವಣೆಯಲ್ಲಿ ಅವರ ಕಾರ್ಯತಂತ್ರಗಳಿಗಿಂತಲೂ ಶ್ರೇಷ್ಠವಾಗಿದೆ’ ಎಂದು ಮುಸುಕಿನ ಗುದ್ದಾಟ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು ‘ಪಕ್ಷವು ಚಿಂಚೋಳಿ ಉಪಚುನಾವಣೆಗೆ ತನ್ನನ್ನು ನಿಯೋಜಿಸಿದ್ದು, ಕುಂದಗೋಳದಲ್ಲಿ ಬಿಜೆಪಿಯ ಪ್ರಮುಖ ನಾಯಕರಾದ ಬಿಎಸ್ ಯಡಿಯೂರಪ್ಪ(B S yadiyurappa), ಪ್ರಲ್ಹಾದ್ ಜೋಶಿ ಮತ್ತು ಕೆಎಸ್ ಈಶ್ವರಪ್ಪ ಪ್ರಚಾರದ ನೇತೃತ್ವ ವಹಿಸಿದ್ದರು. 2019ರ ಚಿಂಚೋಳಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಗೇಮ್ ಚೇಂಜರ್ ಎಂದು ಇಲ್ಲಿ ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ಆದ್ದರಿಂದ ಪಕ್ಷಕ್ಕಾಗಿ ದುಡಿಯುವುದು ಮತ್ತು ಪಕ್ಷದ ಹೈಕಮಾಂಡ್ ಹೇಳುವುದನ್ನು ಕೇಳುವುದು ಬಿಜೆಪಿಯಂತಹ ಪಕ್ಷದಲ್ಲಿ ಎಂದಿಗೂ ವ್ಯರ್ಥವಾಗುವುದಿಲ್ಲ’ ಎಂದು ಹೇಳಿದರು.

ಅಲ್ಲದೆ ‘ಕಳೆದ 45 ವರ್ಷಗಳಿಂದ ಚುನಾವಣೆ ಎದುರಿಸುತ್ತಾ ಬಂದಿದ್ದೇನೆ. ಕನಿಷ್ಠ 12 ಚುನಾವಣೆಗಳಿಗೆ ಸ್ಪರ್ಧಿಸಿದ್ದೇನೆ. ನಾನು 8 ರಿಂದ 9 ಉಪಚುನಾವಣೆಗಳಲ್ಲಿ ಸ್ಪರ್ಧಿಸಿ ಹೆಚ್ಚಿನದನ್ನು ಗೆದ್ದಿದ್ದೇನೆ. ಚುನಾವಣೆಯಲ್ಲಿ ನೀವು ಕೆಲವನ್ನು ಗೆಲ್ಲುತ್ತೀರಿ, ಕೆಲವನ್ನು ಕಳೆದುಕೊಳ್ಳುತ್ತೀರಿ. ಆದರೆ, ನೀವು ಎದೆಗುಂದಬಾರದು’ ಎಂದು ಅವರು ಹೇಳಿದರು.

Leave A Reply