Cyber fraud: ಸಿಂಗಲ್ ಆಗಿದ್ದ 75ರ ವೃದ್ಧೆಗೆ ಮಿಂಗಲ್ ಆಗೋ ಬಯಕೆ! ನಂಬಿಸಿ, ಲಕ್ಷ ಲಕ್ಷ ಉಡಾಯಿಸಿದ ಕಿರಾತಕ!

Latest news Cyber fraud old woman meets german man online gets scammed

Cyber fraud:  ಸೈಬರ್ ಕ್ರೈಂ ನಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸಾಮಾಜಿಕ ಮಾಧ್ಯಮ, ಮೆಸೆಜ್​, ಓಟಿಪಿ, ಲಿಂಕ್​ಗಳ (Link) ಮೂಲಕ ಹ್ಯಾಕರ್ಸ್​ ಹಣವನ್ನು ದೋಚುತ್ತಲೇ ಇದ್ದಾರೆ. ಡೇಟಿಂಗ್​ ಆ್ಯಪ್​​ಗಳು ಕೂಡ ಈಗ ಸೈಬರ್​ (Cyber fraud) ಕ್ರೈಂನ ಹೊಸ ವಂಚನೆಯ ಜಾಲವಾಗಿದೆ. ಮೊದಲೆಲ್ಲ ಹನಿಟ್ಯ್ರಾಪ್​ ಮಾಡಲಾಗುತ್ತಿತ್ತು. ಇತ್ತೀಚೆಗೆ ನೇರವಾಗಿ ಪ್ರೀತಿಸಿ, ನಂಬಿಸಿ ಹಣವನ್ನು ದೋಚುವುದು ಸಾಮಾನ್ಯವಾಗಿದೆ. ಇದೀಗ ಅಂತಹುದೇ ಘಟನೆಯೊಂದು ಮುಂಬೈ ನಗರದಲ್ಲಿ ಬೆಳಕಿಗೆ ಬಂದಿದೆ.

 

ಮುಂಬೈ ನಗರದ ದಾದರ್​ನಲ್ಲಿ (Mumbai Dadar) ವಾಸಿಸುತ್ತಿರುವ 75 ವರ್ಷದ ಮಹಿಳೆಯೊಬ್ಬರಿಗೆ ಮದುವೆಯಾಗುತ್ತೇನೆಂದು ನಂಬಿಸಿ, ಲಕ್ಷ ಲಕ್ಷ ಪಂಗನಾಮ ಹಾಕಿರುವ ಘಟನೆ ನಡೆದಿದೆ.

ಮಹಿಳೆಯು ಆನ್​ಲೈನ್​ನಲ್ಲಿ (Online) ಸಂಗಾತಿಯನ್ನು (Partner) ಹುಡುಕುತ್ತಿದ್ದರು. ಈ ವೇಳೆ ಆಕೆಯ ವಾಟ್ಸಪ್​ಗೆ ಸಂದೇಶವೊಂದು ಬಂದಿದ್ದು, ಅದರಲ್ಲಿ ತನ್ನನ್ನು ಕ್ರಿಸ್ ಪಾಲ್ ಎಂದು ಪರಿಚಯಿಸಿಕೊಂಡಿದ್ದು ಹಾಗೂ ತಾನೂ ಜರ್ಮನ್​ ಪ್ರಜೆ ಎಂದಿದ್ದಾನೆ. ತನ್ನ ಪತ್ನಿ ಮೃತಪಟ್ಟಿರುವುದರಿಂದಾಗಿ ತಾನೂ ಕೂಡ ಮದುವೆಯಾಗಲು ಸಂಗಾತಿಯನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾನೆ.​ ಅಲ್ಲದೆ ತಾನೊಬ್ಬ ಶ್ರೀಮಂತ ಮನೆತನಕ್ಕೆ ಸೇರಿದವನಾಗಿದ್ದು, ತಾವು ಬಯಸಿದರೆ ನಿಮ್ಮನ್ನು ಮದುವೆಯಾಗುತ್ತೇನೆ ಎಂದು ಪ್ರೀತಿಯ ಮಾತುಗಳನ್ನಾಡಿ ಮಹಿಳೆಯನ್ನು ಮೋಸದ ಜಾಲಕ್ಕೆ ಸಿಲುಕಿಸಿದ್ದಾನೆ.

ತಾನು ಶೀಘ್ರದಲ್ಲಿ ಮುಂಬೈಗೆ ಬರಲಿದ್ದೇನೆಂದು ಆ ಮಹಿಳೆಗೆ ಮದುವೆಯ ಆಸೆಯನ್ನು ಹುಟ್ಟಿಸಿದ್ದಾನೆ. ಸ್ವಲ್ಪ ದಿನಗಳ ನಂತರ ಆ ವ್ಯಕ್ತಿ ಮತ್ತೆ ಮಹಿಳೆಗೆ ಕರೆಮಾಡಿ, ಕೆಲವು ದುಬಾರಿ ಉಡುಗೊರೆಗಳನ್ನು ಕಳುಹಿಸಿದ್ದಾಗಿ ಹೇಳಿದ್ದಾನೆ. ಸ್ವಲ್ಪ ಸಮಯದಲ್ಲೇ ಮತ್ತೊಬ್ಬ ಮಹಿಳೆ ಸಂತ್ರಸ್ತೆಗೆ ಕರೆ ಮಾಡಿ, ತಾನು ಕಸ್ಟಮ್ಸ್ ಇಲಾಖೆಯ ಅಧಿಕಾರಿ ಎಂದು ಪರಿಚಯಿಸಿಕೊಂಡು, ನಿಮಗೆ ಪಾರ್ಸಲ್​ ಬಂದಿದ್ದು, 3.85 ಲಕ್ಷ ಸುಂಕ ಕಟ್ಟಬೇಕೆಂದು ಹೇಳಿದ್ದಾಳೆ. ಅದನ್ನು ನಂಬಿದ ವೃದ್ಧ ಮಹಿಳೆ ಹಣವನ್ನು ನೀಡಿದ್ದಾಳೆ.

ಆದರೆ ಮಹಿಳೆ ಹಣ ನೀಡಿದ ನಂತರ ಯಾವುದೇ ಉಡುಗೊರೆಯನ್ನೂ ಸ್ವೀಕರಿಸಲಿಲ್ಲ ಈ ಬಗ್ಗೆ ವ್ಯಕ್ತಿಗೆ ತಿಳಿಸಿದಾಗ, ಆತನು ಮುಂಬೈಗೆ ಬಂದಾಗ ಆ ಹಣವನ್ನು ನೀಡುವುದಾಗಿ ಮಹಿಳೆಯನ್ನು ನಂಬಿಸಿದ್ದಾನೆ. ಕೆಲವು ದಿನಗಳ ನಂತರ ಮಹಿಳೆಗೆ ಮತ್ತೆ ಕರೆ ಮಾಡಿದ್ದಾರೆ. ತಾನು ಮುಂಬೈನಲ್ಲಿದ್ದೇನೆ, ಆದರೆ ವಿದೇಶಿ ಕರೆನ್ಸಿ ಇರುವುದರಿಂದ ಕಸ್ಟಮ್ಸ್​ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇನೆ ಎಂದು ಹೇಳಿದ್ದಾನೆ. ಅಲ್ಲಿಂದ ಹೊರಬರಲು ಎಂಟು ಲಕ್ಷ ರೂಪಾಯಿ ಅವಶ್ಯಕತೆ ಇರುವುದರಿಂದ, ಕಳುಹಿಸುವಂತೆ ಮಹಿಳೆಗೆ ಮನವಿ ಮಾಡಿದ್ದಾನೆ. ಅಲ್ಲದೆ ತಾನೂ ಭೇಟಿ ಮಾಡುವಾಗ ಎಲ್ಲಾ ಹಣವನ್ನು ಒಟ್ಟಿಗೆ ಕೊಡುವುದಾಗಿ ಹೇಳಿ 8 ಲಕ್ಷ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಎಂದು ಹಿರಿಯ ಪೊಲೀಸ್ ಅಧಿಕಾರಿ ದೀಪಕ್ ಚೌಹಾಣ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಆರೋಪಿಗಳು ನೈಜೀರಿಯನ್​ ಸೈಬರ್​ ಕಾನ್ ಗ್ಯಾಂಗ್ (Nigerian cyber con gang)​ ಸದಸ್ಯರು ಎಂದು ತಿಳಿದುಬಂದಿದ್ದು, ಅವರು ಜರ್ಮನ್​ ಪ್ರಜೆ ಎಂದು ನಂಬಿಸಿ ಮಹಿಳೆಗೆ ಮೋಸ ಮಾಡಿದ್ದಾರೆ. ಎಂದು ಪೊಲೀಸರು (Police) ಮಾಹಿತಿಯನ್ನು ನೀಡಿದ್ದಾರೆ.

Leave A Reply

Your email address will not be published.